Rakshak Bullet: ಬಿಗ್ ಬಾಸ್ ಇಂದ ಬಂದ ಸಂಭಾವನೆಯಲ್ಲಿ ಒಂದು ಟನ್ ಇಟ್ಟಿಗೆ ಖರೀದಿ ಮಾಡೋಕು ಆಗಲ್ಲ! ಶಾಕಿಂಗ್ ಹೇಳಿಕೆ ಕೊಟ್ಟ ರಕ್ಷಕ್

0 16

Rakshak Bullet: ಬಿಗ್ ಬಾಸ್ ಕನ್ನಡ ಸೀಸನ್ 10 ಈಗ ಮುಕ್ತಾಯದ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಶೋ ಫಿನಾಲೆ ನಡೆಯಲಿದೆ. ಈಗಾಗಲೇ ಫಿನಾಲೆ ವಾರ ಹತ್ತಿರ ಬಂದಿದ್ದು, ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ತನಿಷಾ ಕುಪ್ಪಂಡ ಅವರು ಬಿಗ್ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಎರಡನೇ ವಾರದಲ್ಲೇ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದ ರಕ್ಷಕ್ ಅವರು ಸಂಭಾವನೆ ಬಗ್ಗೆ ಶಾಕಿಂಗ್ ಹೇಳಿದ್ದಾರೆ.

ಎಲಿಮಿನೇಟ್ ಆಗಿರುವ ಕೆಲವು ಸ್ಪರ್ಧಿಗಳು ಜೊತೆಯಾಗಿ ಇಂಟರ್ವ್ಯೂ ನಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಸಂಭಾವನೆ ಬಗ್ಗೆ ಕೇಳಿದಾಗ. ರಕ್ಷಕ್ ಅವರು, ಆವತ್ತು ಯಾವುದೋ ಮೂಡ್ ನಲ್ಲಿದ್ದೆ, ಸಡನ್ ಆಗಿ ಕಾಲ್ ಬಂತು, ಒಪ್ಪಿಕೊಂಡುಬಿಟ್ಟೆ. ಮನೆಯಲ್ಲಿ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಅಂತ ಹೇಳಿದ್ರು, ಆದರೆ ಹೊರಗಡೆ ಬಂದಮೇಲೆ ಕೆಲವರ ಸಂಭಾವನೆ ನೋಡಿ ಉರಿದು ಹೋಗ್ತಿದೆ.

ಈಗ ಹೊರಗಡೆ ಬಂದಮೇಲೆ ಬೇರೆ ಕಾರ್ಯಕ್ರಮಗಳಿಂದ ಆ ಹಣವನ್ನ ರಿಕವರಿ ಮಾಡಿಕೊಳ್ತಾ ಇದ್ದೀನಿ ಎಂದು ಹೇಳಿದ್ದಾರೆ ರಕ್ಷಕ್.
ಹಾಗೆಯೇ ಬೇರೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಇಂದ ಬರೋ ಸಂಭಾವನೆಯಲ್ಲಿ ಒಂದು ಮನೆ ಕೊಂಡುಕೊಳ್ಳೋಕೆ ಆಗಲ್ಲ, ಎಂದು ಹೇಳಿದಾಗ, ಎಲ್ಲರೂ ಆಗಲ್ಲ ಎನ್ನುತ್ತಾರೆ. ಆಗ ರಕ್ಷಿತ್, ಒನ್ ಟನ್ ಇಟ್ಟಿಗೆ ಕೊಂಡುಕೊಳ್ಳೋಕು ಆಗಲ್ಲ ಎಂದು ಹೇಳುತ್ತಾರೆ. ಇದೀಗ ಈ ಮಾತುಗಳು ವೈರಲ್ ಆಗಿದೆ. ರಕ್ಷಕ್ ಈ ಥರದ ಹೇಳಿಕೆ ಇಂದಲೇ ಹೆಚ್ಚು ಸುದ್ದಿಯಾಗುತ್ತಾರೆ ಎಂದರೆ ತಪ್ಪಲ್ಲ.

ಇತ್ತೀಚೆಗೆ ಬಿಗ್ ಬಾಸ್ ವಿಚಾರಕ್ಕೆ ಸುದೀಪ್ ಅವರ ಬಗ್ಗೆ ಹೇಳಿಕೆ ನೀಡಿ, ಸುದ್ದಿಯಾಗಿದ್ದರು. ಹಾಗೆಯೇ ಸುದೀಪ್ ಅವರಿಗು ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆ ಕೇಳಿದ್ದರು. ಇದೀಗ ಸಂಭಾವನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

Leave A Reply

Your email address will not be published.