Ram Charan: ಮೆಗಾಪವರ್ ಸ್ಟಾರ್ ರಾಮ್ ಚರಣ್ ಅವರ ಮಗಳನ್ನು ನೋಡಿಕೊಳ್ಳುವ ದಾದಿಗೆ ಸಿಗುತ್ತಿರುವ ಸಂಬಳ ಎಷ್ಟು ಲಕ್ಷ ಗೊತ್ತಾ?

0 15

Ram Charan: ನಟ ರಾಮ್ ಚರಣ್ ಅವರು ಕಳೆದ ವರ್ಷ ತಂದೆಯಾದರು. ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮದುವೆಯಾಗಿ 10 ವರ್ಷಗಳ ಬಳಿಕ ತಂದೆ ತಾಯಿ ಆಗಿದ್ದಾರೆ. ಕಳೆದ ವರ್ಷ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು ಉಪಾಸನಾ. ಮಗುವನ್ನು ಬಹಳ ಚೆನ್ನಾಗಿ ಕಾಳಜಿಯಿಂದ ನೋಡಿಕೊಳ್ಳುತ್ತಿದೆ ಮೆಗಾ ಫ್ಯಾಮಿಲಿ.

ಈ ಜೋಡಿ ತಮ್ಮ ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರು ಇಟ್ಟಿದ್ದಾರೆ. ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ. ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರು ತಮ್ಮ ಮಗಳನ್ನು ಅತ್ಯಂತ ಆರೈಕೆಯಿಂದ ಜೊತೆಗೆ ನೋಡಿಕೊಳ್ಳುವುದರ ಜೊತೆಗೆ ಆಕೆಗೆ ಹೊಸ ಪ್ರಪಂಚವನ್ನೇ ಸೃಷ್ಟಿ ಮಾಡಿದ್ದಾರೆ ಎಂದರೆ ತಪ್ಪಲ್ಲ. ಹೌದು, ಇದು ನಿಜವೇ ಸರಿ..

ರಾಮ್ ಚರಣ್ ಹಾಗೂ ಉಪಾಸನಾ ಅವರು ತಮ್ಮ ಮಗುವನ್ನು ನೋಡಿಕೊಳ್ಳಲು ಸಾವಿತ್ರಿ ದಾದಿ ಅವರನ್ನು ನೇಮಿಸಿದ್ದಾರೆ. ಹೌದು, ಇವರು ಲಕ್ಷಲಕ್ಷ ಸಂಬಳ ಪಡೆಯುವ ದಾದಿ. ಈ ಹಿಂದೆ ಇವರನ್ನು ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ಅವರ ದಾದಿಯಾಗಿ ನೇಮಿಸಿಕೊಳ್ಳಲಾಗಿತ್ತು. ಆಗ ಇವರಿಗೆ 1 ಲಕ್ಷ ಸಂಬಳ ಕೂಡ ಸಿಗುತ್ತಿತ್ತು ಎನ್ನಲಾಗಿದೆ..

ಈಗ ಇವರು ರಾಮ್ ಚರಣ್ ಹಾಗೂ ಉಪಾಸನಾ ದಂಪತಿಯ ಮಗುವನ್ನು ನೋಡಿಕೊಳ್ಳಲು ಸಾವಿತ್ರಿ ದಾದಿ ಅವರನ್ನೇ ನೇಮಕ ಮಾಡಲಾಗಿದ್ದು, ಇವರಿಗೆ 3 ಲಕ್ಷ ಸಂಬಳ ಕೊಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ದಾದಿಗೆ ಮೂರು ಲಕ್ಷ ಸಂಬಳ ಕೊಡುತ್ತಿದ್ದಾರಾ ಎಂದು ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave A Reply

Your email address will not be published.