Rama navami Date :ಸಾಮನ್ಯವಾಗಿ ರಾಮ ನವಮಿ ವ್ರತವನ್ನು ಹೆಚ್ಚಾಗಿ ಮಹಿಳೆಯರು ಮಾಡುತ್ತರೆ. ಇಂತಹ ಸ್ಥಿತಿಯಲ್ಲಿ ರಾಮನವಮಿ ಹಬ್ಬಕ್ಕೆ ತುಂಬಾನೇ ವಿಶೇಷವಾದ ಮಹತ್ವ ಕೂಡ ಸಿಗುತ್ತದೆ.ಶ್ರೀ ರಾಮ ನವಮಿ ದಿನ ಹಲವಾರು ಜನರು ಭಗವಂತನಾದ ಶ್ರೀರಾಮರ ಜನ್ಮಉತ್ಸವವನ್ನು ಮಾಡುತ್ತಾರೆ. ರಾಮ ನವಮಿಯನ್ನು ಭಗವಂತನಾದ ಶ್ರೀರಾಮರ ಜನ್ಮ ದಿನ ಎಂದು ತಿಳಿಯಲಾಗಿದೆ. ಈ ವರ್ಷ ಗುರುವಾರ 30 ಮಾರ್ಚ್ 2023ರ ದಿನದಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಮನವಮಿ ಶುಭ ದಿನವೂ ಚೈತ್ರ ನವರಾತ್ರಿಯ ಅಂತಿಮ ದಿನದಂದು ಇರುತ್ತದೆ.
ಚೈತ್ರ ನವರಾತ್ರಿ 22 ಮಾರ್ಚ್ 2023ರಂದು ಶುರುವಾಗಿದ್ದು. 30 ಮಾರ್ಚ್ 2023ಕ್ಕೆ ಮುಗಿಯುತ್ತದೆ.ಹಿಂದೂ ಪೌರಾಣಿಕ ಕಥೆಗಳ ಅನುಸಾರವಾಗಿ ಭಗವಂತರಾದ ಶ್ರೀರಾಮರ ಜನ್ಮವು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯೊಂದು ಆಗಿದ್ದು. ಇದೆ ಒಂದು ಕಾರಣದಿಂದ ಪ್ರತಿ ವರ್ಷ ಭಗವಂತರಾದ ಶ್ರೀರಾಮರ ಜನ್ಮ ದಿನ ಎಂದು ಎಲ್ಲಾರು ಆಚರಣೆ ಮಾಡುತ್ತೇವೆ.
ರಾಮನವಮಿ ತಿಥಿ ಸಮಯದ ಬಗ್ಗೆ ಹೇಳುವುದಾದರೆ 29 ಮಾರ್ಚ್ 2023 ರಾತ್ರಿ 9:07 ನಿಮಿಷಕ್ಕೆ ಶುರು ಆಗುತ್ತದೆ. ಚೈತ್ರ ಮಾಸ 2023 ನವಮಿ ತಿಥಿ ಸಮಾಪ್ತಿಯ ಸಮಯ ಅಂದರೆ 30 ಮಾರ್ಚ್ 2023 ರಂದು ರಾತ್ರಿ 11:30 ನಿಮಿಷಕ್ಕೆ ಸಮಾಪ್ತಿ ಆಗುತ್ತಾದೆ.ಹಾಗಾಗಿ ರಾಮ ನವಮಿ ಹಬ್ಬವನ್ನು ಮಾರ್ಚ್ 30ಕ್ಕೆ ಆಚರಣೆ ಮಾಡಬೇಕು.
ಈ ವರ್ಷ ರಾಮ ನವಮಿ ಹಬ್ಬವು ಗುರುವಾರ 30 ಮಾರ್ಚ್ 2023 ರಂದು ಆಚರಿಸಲಾಗುತ್ತದೆ.ರಾಮನವಮಿ ಮಧ್ಯಾಹ್ನ ಮುಹೂರ್ತ 11:11 ನಿಮಿಷದಿಂದ ಮಧ್ಯಾಹ್ನ 1:40 ನಿಮಿಷದವರೆಗೆ ಇರುತ್ತದೆ.
Rama navami Date ರಾಮ ನವಮಿಯ ಪೂಜಾ ವಿಧಿವಿಧಾನ-ಶ್ರೀ ರಾಮ ಚರಿತ ಮಾನಸವನ್ನು ನೀವು ಓದಬಹುದು. ಭಗವಂತನಾದ ಶ್ರೀ ರಾಮರಿಗೆ ಆರತಿಯನ್ನು ನೀವು ಮಾಡಬಹುದು. ಭಗವಂತರಾದ ಶ್ರೀ ರಾಮರ ಭಕ್ತರು ಈ ದಿನ ಬೇಗ ಎದ್ದು ಮುಂಜಾನೆ ಸ್ನಾನ ಮಾಡಿ.ನಂತರ ದೇವರ ಕೋಣೆಯನ್ನು ಚೆನ್ನಾಗಿ ಕ್ಲೀನ್ ಮಾಡಬೇಕು.ಪೂಜೆಯ ಕಕ್ಷೆಯಲ್ಲಿ ಭಗವಂತರಾದ ಶ್ರೀ ರಾಮರ ಫೋಟೋವನ್ನು ಇಡಬೇಕು. ದೇವರಿಗೆ ನೈವೈದ್ಯ ಅರ್ಪಿಸಲು ಪ್ರಸಾದವನ್ನು ತಯಾರು ಮಾಡಿಕೊಳ್ಳಬೇಕು.ಶುಭ ಸಮಯದಲ್ಲಿ ರಾಮಾಯಣ ಪವಿತ್ರ ಗ್ರಂಥವನ್ನು ಓದಿರಿ.ಇದರ ನಂತರ ಆರತಿಯನ್ನು ಮಾಡಿರಿ. ಇನ್ನು ಈ ಒಂದು ಮಂತ್ರವನ್ನು 108 ಬಾರಿ ಜಪ ಮಾಡಿ.ಓಂ ಶ್ರೀಂ ಹ್ರೀಂ ಕ್ಲಿಂ ರಾಮಚಂದ್ರಾಯ ಶ್ರೀಂ ನಮಃ