Ramola: ವೆಡ್ಡಿಂಗ್ ಪ್ಲಾನರ್ ಆದ ಕನ್ನಡತಿ ನಟಿ ರಾಮೋಲಾ! ನಟನೆ ಬಿಟ್ಟುಬಿಟ್ರ?

Written by Pooja Siddaraj

Published on:

Ramola: ಕನ್ನಡತಿ ಧಾರವಾಹಿ ಕನ್ನಡ ಕಿರುತೆರೆ ವೀಕ್ಷಕರ ಫೇವರೆಟ್ ಧಾರಾವಾಹಿಗಳಲ್ಲಿ ಒಂದು ಎಂದರೆ ತಪ್ಪಲ್ಲ. ಧಾರವಾಹಿ ಮುಗಿದು ಒಂದು ವರ್ಷಕ್ಕಿಂತ ಆಗುತ್ತಿದ್ದರು ಸಹ ವೀಕ್ಷಕರು ಇಂದಿಗೂ ತಮ್ಮ ಆಲ್ ಟೈಮ್ ಫೇವರೆಟ್ ಧಾರವಾಹಿ ಇದು ಎಂದು ಹೇಳುತ್ತಾರೆ. ಕನ್ನಡತಿ ಧಾರಾವಾಹಿಯ ಎಲ್ಲಾ ಪಾತ್ರಗಳು ಕೂಡ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಹರ್ಷ, ಭುವಿ, ವರುಧಿನಿ ಮಾತ್ರವಲ್ಲ ವಿಲ್ಲನ್ ಸಾನ್ಯ ಪಾತ್ರ ಕೂಡ ಜನರ ಫೇವರೆಟ್ ಆಗಿತ್ತು.

ಸಾನ್ಯ ಒಂದು ಸುಂದರವಾದ ವಿಲ್ಲನ್ ಪಾತ್ರ ಎಂದರೆ ತಪ್ಪಲ್ಲ. ಈ ಪಾತ್ರದಲ್ಲಿ ನಟಿಸಿ ವಿಲ್ಲನ್ ಆಗಿ ಎಲ್ಲರ ಮನ ಗೆದ್ದವರು ನಟಿ ರಾಮೋಲಾ. ಕನ್ನಡತಿ ಧಾರವಾಹಿ ಇವರಿಗೆ ಒಳ್ಳೆಯ ಹೆಸರು, ಯಶಸ್ಸು ಎಲ್ಲವನ್ನು ತಂದುಕೊಟ್ಟಿತು ಎಂದರೆ ತಪ್ಪಲ್ಲ. ಹಲವು ದಿನಗಳ ಕಾಲ ಕನ್ನಡತಿ ಧಾರಾವಾಹಿಯ ಸಾನ್ಯ ಪಾತ್ರದಲ್ಲಿ ನಟಿಸಿದ್ದ ರಾಮೋಲಾ ಅವರು ಇದ್ದಕ್ಕಿದ್ದ ಹಾಗೆ ಧಾರವಾಹಿ ಇಂದ ಹೊರಬಂದಿದ್ದರು.

ಧಾರವಾಹಿ ಚಿತ್ರೀಕರಣದಲ್ಲಿ ಕೆಲವರು ವರ್ತಿಸುವ ರೀತಿ ತಮಗೆ ಇಷ್ಟವಾಗಿಲ್ಲ, ಮನಸ್ಸಿಗೆ ನೋವಾಗಿತ್ತು ಅದೇ ಕಾರಣಕ್ಕೆ ಹೊರಬಂದಿದ್ದಾಗಿ ತಿಳಿಸಿದ್ದರು ರಾಮೋಲಾ. ಇದೀಗ ಕನ್ನಡತಿ ನಂತರ ರಾಮೋಲಾ ಅವರು ಬೇರೆ ಯಾವುದೇ ಧಾರವಾಹಿಯಲ್ಲಿ ನಟಿಸಿರಲಿಲ್ಲ. ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ತಮ್ಮ ಸಿನಿಮಾ ವಿಚಾರಕ್ಕೆ ವಿವಾದ ಸಹ ಮಾಡಿಕೊಂಡಿದ್ದರು.

ಇದೆಲ್ಲವೂ ನಡೆದ ಬಳಿಕ ಇದೀಗ ರಾಮೋಲಾ ಅವರು ವೆಡ್ಡಿಂಗ್ ಪ್ಲಾನರ್ ಆಗಿದ್ದಾರೆ. ಹೌದು ನೀವು ಕೇಳುತ್ತಿರುವುದು ನಿಜವೇ, ರಾಮೋಲಾ ಅವರು ವೆಡ್ಡಿಂಗ್ ಪ್ಲಾನರ್ ಆಗಿದ್ದಾರೆ. ಆದರೆ ಅದು ನಿಜ ಜೀವನದಲ್ಲಿ ಅಲ್ಲ, ಬದಲಾಗಿ ಸೀರಿಯಲ್ ನಲ್ಲಿ. ಹೌದು ಇದೀಗ ರಾಮೋಲಾ ಅವರು ಕಲರ್ಸ್ ಕನ್ನಡ ವಾಹಿನಿಯ ಅಂತರಪಟ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ..

ಈ ಧಾರವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ಆಗಿ ಕಾಣಿಸಿಕೊಂಡಿದ್ದಾರೆ ರಾಮೋಲಾ. ಇದು ಒಂದು ರೀತಿ ಗೆಸ್ಟ್ ಅಪಿಯರೆನ್ಸ್ ರೀತಿಯ ಪಾತ್ರವಾಗಿದ್ದು, ನಿನ್ನೆಯ ಸಂಚಿಕೆಯಲ್ಲಿ ರಾಮೋಲಾ ಅವರ ಪಾತ್ರ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ನಾಯಕಿ ಆರಾಧನಾ ಗೆ ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಮುಂದುವರೆದು, ತನ್ನದೇ ಆದ ಸ್ವಂತ ಕಂಪನಿ ಶುರು ಮಾಡಬೇಕು ಅಂತ ಆಸೆ, ಅವಳಿಗೆ ಈಗ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ.

ಆದರೆ ಅಡೆತಡೆಗಳು ಎದುರಾಗುತ್ತಿದೆ. ಇವರಿಗೆ ರೈವಲ್ ಆಗಿರುವ ಕಂಪನಿಯನ್ನು ನಡೆಸುತ್ತಿರುವುದು ರಾಮೋಲಾ ಅವರ ಪಾತ್ರ ಆಗಿದೆ. ಬಹಳ ದಿನಗಳ ನಂತರ ರಾಮೋಲಾ ಅವರು ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿರುವುದು ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ.

Leave a Comment