Ramya: ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರ ವಿದ್ಯಾಭ್ಯಾಸ ಎಷ್ಟು ಗೊತ್ತಾ?

0 1

Ramya: 20ನೇ ಶತಮಾನದ ಆರಂಭದ ಸಮಯದಲ್ಲಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಒಂದು ದಶಕಕ್ಕಿಂತಲಲೂ ಹೆಚ್ಚಿನ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಿ ರಮ್ಯಾ. ರಮ್ಯಾ ಅವರನ್ನು ಅಭಿಮಾನಿಗಳು ಸ್ಯಾಂಡಲ್ ವುಡ್ ಕ್ವೀನ್ ಎಂದೇ ಕರೆಯುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಭಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಂತರ ತಮಿಳು ಸಿನಿಮಾಗಳಲ್ಲೂ ಅಭಿನಯಿಸಿ ಯಶಸ್ಸಿನ ಉತ್ತುಂಗಕ್ಕೆ ಏರಿದ ನಟಿ ರಮ್ಯಾ.

ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಯಶ್, ಶಿವ ರಾಜ್ ಕುಮಾರ್, ದುನಿಯಾ ವಿಜಯ್, ಚಿರಂಜೀವಿ ಸರ್ಜಾ ಸೇರಿದಂತೆ ಎಲ್ಲಾ ನಟರೊಂದಿಗೂ ತೆರೆ ಹಂಚಿಕೊಂಡಿದ್ದರು.
ಇನ್ನು ತಮಿಳಿನಲ್ಲಿ ಸೂರ್ಯ, ಸಿಂಬು, ಧನುಷ್ ಸೇರಿದಂತೆ ಅಲ್ಲಿನ ಯಶಸ್ವಿ ನಟರೊಂದಿಗೂ ನಟಿಸಿ ಖ್ಯಾತಿ ಗಳಿಸಿದ್ದರು ರಮ್ಯಾ. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿ ರಾಜಕಾರಣಕ್ಕೂ ಕಾಲಿಟ್ಟಿದ್ದರು.

ಇದರಿಂದ ಸಿನಿ ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದ್ದರೂ ಮೆಚ್ಚಿನ ನಟಿಗೆ ಪ್ರೋತ್ಸಾಹ ನೀಡಿದ್ದರು. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದ ರಮ್ಯಾ, ಅದರಿಂದಲೂ ಹೊರಬಂದರು. ಕಳೆದ ವರ್ಷ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದಲೂ ಕಾಣೆಯಾಗಿದ್ದರು. 2020ರಲ್ಲಿ ಮತ್ತೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ ರಮ್ಯಾ ಅವರು ಈಗ ಡಾಲಿ ಧನಂಜಯ್ ಅವರೊಡನೆ ಉತ್ತರಕಾಂಡ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.

ತಮ್ಮದೇ ಪ್ರೊಡಕ್ಷನ್ ಕಂಪನಿ ಶುರು ಮಾಡಿರುವ ರಮ್ಯಾ ಅವರು ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಇವರ ವಿದ್ಯಾಭ್ಯಾಸ ಎಷ್ಟು ಎನ್ನುವ ವಿಷಯ ಈಗ ಚರ್ಚೆಯಾಗುತ್ತಿದ್ದು, ಊಟಿಯ ಹಾಸ್ಟೆಲ್ ನಲ್ಲಿ ಓದುತ್ತಿದ್ದ ರಮ್ಯಾ ಅಲ್ಲೇ 10ನೇ ತರಗತಿ ಮುಗಿಸಿದ್ದಾರೆ. ಚೆನ್ನೈನಲ್ಲಿ ಪಿಯುಸಿ ಓದಿದ್ದಾರೆ. ಇದಾದ ನಂತರ ಇವರು ಓದನ್ನು ಮುಂದುವರೆಸಿಲ್ಲ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.