Ramya Krishnan: ಮದುವೆಗಿಂತ ಮೊದಲೇ ಗರ್ಭಿಣಿ ಆಗಿದ್ದ ನಟಿ ರಮ್ಯಾ ಕೃಷ್ಣನ್ ಅವರು ಗರ್ಭಪಾತ ಮಾಡಿಸಲು ಕೇಳಿದ ಹಣವೆಷ್ಟು ಗೊತ್ತಾ?

Written by Pooja Siddaraj

Published on:

Ramya Krishnan: ಸೌತ್ ಸಿನಿದುನಿಯಾದ ಫೇವರೆಟ್ ನಟಿಯರಲ್ಲಿ ಒಬ್ಬರು ರಮ್ಯಾ ಕೃಷ್ಣನ್. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಹ ನಟಿಸಿ ಯಾವ ಹೀರೋಗೂ ಕಮ್ಮಿ ಇಲ್ಲ ಎನ್ನುವಂತೆ ಜನಪ್ರಿಯತೆ ಗಳಿಸಿಕೊಂಡವರು ರಮ್ಯಾ ಕೃಷ್ಣನ್. ಇಂದಿಗೂ ಇವರ ದೊಡ್ಡ ಮಟ್ಟದ ಬೇಡಿಕೆ ಇದೆ. ಈಗಲೂ ಯಂಗ್ ಆಗಿ ಕಾಣುವ ರಮ್ಯಾಕೃಷ್ಣನ್ ಅವರು ಮದುವೆಗಿಂತ ಮೊದಲೇ ಗರ್ಭಣಿ ಆಗಿದ್ದರು.

ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಿಗೂ ಒಂದು ಕಾಲದಲ್ಲಿ ರಮ್ಯಾ ಕೃಷ್ಣನ್ ಅವರೇ ನಾಯಕಿಯಗಬೇಕು ಎನ್ನುತ್ತಿದ್ದರು. ನಾಯಕರ ಸಮವಾಗಿ ನಿಂತು ಡೈಲಾಗ್ ಹೊಡೆಯುವಲ್ಲಿ ಯಶಸ್ವಿಯಾಗುತ್ತಿದ್ದವರು ರಮ್ಯಾ. ಪಡಯಪ್ಪ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ್ ಸರಿಸಮವಾಗಿ ನಟಿಸಿರುವ ನೀಲಾಂಬರಿ ಪಾತ್ರವನ್ನು ಇಂದಿಗೂ ಸಿನಿಪ್ರಿಯರು ಮರೆತಿಲ್ಲ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರವನ್ನ ಭಾರತ ಚಿತ್ರರಂಗ ಮರೆಯಲು ಸಾಧ್ಯವಿಲ್ಲ.

ರಮ್ಯಾ ಕೃಷ್ಣನ್ 90ರ ದಶಕದಿಂದ ಇಲ್ಲಿಯವರೆಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಷ್ಟೇ ದೊಡ್ಡ ಅಭಿಮಾನಿ ಬಳಗ ಇವರಿಗೆ ಇದೆ. ರಮ್ಯಾ ಕೃಷ್ಣನ್ ಅವರಿಗೆ 53 ವರ್ಷ ಆಗಿದ್ದರು, ಈಗಿನ ಹೀರೋಯಿನ್ ಗಳನ್ನೇ ನಾಚಿಸುವಷ್ಟು ಸುಂದರವಾಗಿ ಕಾಣಿಸುತ್ತಾರೆ ರಮ್ಯಾ ಕೃಷ್ಣನ್. ಇಂಥ ನಟಿ ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರೊಡನೆ ಬಹಳಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

2002ರಲ್ಲಿ ಇವರಿಬ್ಬರು ಪಂಚತಂತ್ರ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಈ ವೇಳೆ ಇಬ್ಬರ ನಡುವೆ ಸ್ನೇಹ, ಪ್ರೀತಿ, ಆತ್ಮೀಯತೆ ಸಲುಗೆ ಬೆಳೆದು ರಮ್ಯಾ ಕೃಷ್ಣನ್ ಅವರು ಗರ್ಭಿಣಿ ಆಗಿದ್ದರಂತೆ. ಆದರೆ ಕೆ.ಎಸ್ ರವಿಕುಮಾರ್ ಅವರಿಗೆ ಅದಾಗಲೇ ಮದುವೆಯಾಗಿತ್ತು. ಅವರ ಪತ್ನಿಗೆ ಇವರಿಬ್ಬರ ವಿಷಯ ಗೊತ್ತಾಗಿ, ರಮ್ಯಾ ಕೃಷ್ಣನ್ ಅವರಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದರಂತೆ. ಆದರೆ ಇವರು ಗರ್ಭಿಣಿ ಎಂದು ಗೊತ್ತಾದಾಗ ಪರಿಸ್ಥಿತಿ ಕಠಿಣವಾಗಿತ್ತು.

ಆ ವೇಳೆ ರಮ್ಯಾ ಕೃಷ್ಣನ್ ಅವರು ಗರ್ಭಪಾತ ಮಾಡಿಸುವುದಕ್ಕೆ 75 ಲಕ್ಷ ರೂಪಾಯಿ ಕೇಳಿದ್ದರಂತೆ. ಅಷ್ಟು ಹಣ ಪಡೆದು, ಗರ್ಭಪಾತ ಮಾಡಿಸಿಕೊಂಡಿದ್ದರಂತೆ. ಆದರೆ ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಇಬ್ಬರು ಅದನ್ನು ನಿರಾಕರಿಸಿದ್ದರು. ಆದರೆ ಈ ವಿಚಾರ ಅಂತು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

Leave a Comment