Ramya Krishnan: ನಟಿ ರಮ್ಯಾಕೃಷ್ಣನ್ ಅವರ ಮಗ ಯಾರು?ಹೇಗಿದ್ದಾರೆ ಗೊತ್ತಾ?

Written by Pooja Siddaraj

Published on:

Ramya Krishnan: ಸೌತ್ ಸಿನಿದುನಿಯಾದ ಫೇವರೆಟ್ ನಟಿಯರಲ್ಲಿ ಒಬ್ಬರು ರಮ್ಯಾ ಕೃಷ್ಣನ್. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಹ ನಟಿಸಿ ಯಾವ ಹೀರೋಗೂ ಕಮ್ಮಿ ಇಲ್ಲ ಎನ್ನುವಂತೆ ಜನಪ್ರಿಯತೆ ಗಳಿಸಿಕೊಂಡವರು ರಮ್ಯಾ ಕೃಷ್ಣನ್. ಇಂದಿಗೂ ಇವರ ದೊಡ್ಡ ಮಟ್ಟದ ಬೇಡಿಕೆ ಇದೆ. ಈಗಲೂ ಯಂಗ್ ಆಗಿ ಕಾಣುವ ರಮ್ಯಾಕೃಷ್ಣನ್ ಅವರ ಮಗ ಹೇಗಿದ್ದಾರೆ? ಇವರ ಮಗನಿಗೆ ವಯಸ್ಸೆಷ್ಟು ಗೊತ್ತಾ?

ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಿಗೂ ಒಂದು ಕಾಲದಲ್ಲಿ ರಮ್ಯಾ ಕೃಷ್ಣನ್ ಅವರೇ ನಾಯಕಿಯಗಬೇಕು ಎನ್ನುತ್ತಿದ್ದರು. ನಾಯಕರ ಸಮವಾಗಿ ನಿಂತು ಡೈಲಾಗ್ ಹೊಡೆಯುವಲ್ಲಿ ಯಶಸ್ವಿಯಾಗುತ್ತಿದ್ದವರು ರಮ್ಯಾ. ಪಡಯಪ್ಪ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ್ ಸರಿಸಮವಾಗಿ ನಟಿಸಿರುವ ನೀಲಾಂಬರಿ ಪಾತ್ರವನ್ನು ಇಂದಿಗೂ ಸಿನಿಪ್ರಿಯರು ಮರೆತಿಲ್ಲ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರವನ್ನ ಭಾರತ ಚಿತ್ರರಂಗ ಮರೆಯಲು ಸಾಧ್ಯವಿಲ್ಲ.

ರಮ್ಯಾ ಕೃಷ್ಣನ್ 90ರ ದಶಕದಿಂದ ಇಲ್ಲಿಯವರೆಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಷ್ಟೇ ದೊಡ್ಡ ಅಭಿಮಾನಿ ಬಳಗ ಇವರಿಗೆ ಇದೆ. ರಮ್ಯಾ ಕೃಷ್ಣನ್ ಅವರಿಗೆ 53 ವರ್ಷ ಆಗಿದ್ದರು, ಈಗಿನ ಹೀರೋಯಿನ್ ಗಳನ್ನೇ ನಾಚಿಸುವಷ್ಟು ಸುಂದರವಾಗಿ ಕಾಣಿಸುತ್ತಾರೆ ರಮ್ಯಾ ಕೃಷ್ಣನ್. ಈಗಲೂ ಇವರಿಗೆ ಚಿತ್ರರಂಗದಲ್ಲಿ ಅಷ್ಟೇ ಬೇಡಿಕೆ. ಅನೇಕ ಸಿನಿಮಾಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸುತ್ತಾರೆ ರಮ್ಯಾ.

ಇವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ರಮ್ಯಾ ಕೃಷ್ಣನ್ ಅವರು ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣವಂಶಿ ಅವರೊಡನೆ ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮುದ್ದಾದ ಇದ್ದು, ಇವರ ಮಗನ ಹೆಸರು ರಿತ್ವಿಕ್ ವಂಶಿ. ರಮ್ಯಾ ಕೃಷ್ಣನ್ ಅವರ ಮಗನಿಗೆ ಈಗ 18 ವರ್ಷ. ರಮ್ಯಾ ಕೃಷ್ಣನ್ ಅವರೇ ನೋಡಲು ಇಷ್ಟು ಯಂಗ್ ಆಗಿರುವಾಗ ಇಷ್ಟು ದೊಡ್ಡ ಮಗ ಇದ್ದಾನಾ ಎಂದು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಮ್ಯಾ ಕೃಷ್ಣನ್ ಅವರು ಮಗನ ಜೊತೆಗೆ ಆಗಾಗ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಶೀಘ್ರದಲ್ಲೇ ಮಗನನ್ನು ಹೀರೋ ಮಾಡುವ ಪ್ಲಾನ್ ಕೂಡ ಇದೆಯಂತೆ. ಒಟ್ಟಿನಲ್ಲಿ ಅಮ್ಮ ಮಗನ ಫೋಟೋ ಭಾರಿ ವೈರಲ್ ಆಗಿದೆ.

IMG 20231203 075119
Source:Google

Leave a Comment