Ramya: 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಮ್ಯಾ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

0 1

Ramya: ಚಂದನವನದ ಎರಡು ದಶಕಗಳಿಂದ ಸಕ್ರಿಯವಾಗಿರುವವರು ನಟಿ ರಮ್ಯಾ. ಅಪ್ಪು ಅವರೊಡನೆ ಅಭಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಮ್ಯಾ ಅವರನ್ನು ಅಭಿಮಾನಿಗಳು ಸ್ಯಾಂಡಲ್ ವುಡ್ ಕ್ವೀನ್ ಎಂದೇ ಕರೆಯುತ್ತಾರೆ. ಇಂದಿಗೂ ರಮ್ಯಾ ಅವರ ಮೇಲೆ ಕನ್ನಡ ಸಿನಿಪ್ರಿಯರಿಗೆ ಅಷ್ಟೇ ಪ್ರೀತಿ ಇದೆ ಎಂದರೆ ತಪ್ಪಲ್ಲ..

ನಟಿ ರಮ್ಯಾ ಅವರು ಕನ್ನಡ, ತಮಿಳು ಎರಡು ಭಾಷೆಗಳಲ್ಲಿ ಅಭಿನಯಿಸಿದ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿರುವ ನಟಿ. ಇಂದು ರಮ್ಯಾ ಅವರ ಹುಟ್ಟುಹಬ್ಬ. 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್. ಇದೀಗ ರಮ್ಯಾ ಅವರ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಎನ್ನುವ ವಿಚಾರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಒಂದು ತಮಿಳು ಮಾಧ್ಯಮ ರಮ್ಯಾ ಅವರ ಆಸ್ತಿ ಬಗ್ಗೆ ವರದಿ ಮಾಡಿದೆ..

ನಟಿ ರಮ್ಯಾ ಅವರ ಬಳಿ ಇರುವ ಒಟ್ಟು ಆಸ್ತಿ 4 ರಿಂದ 5 ಕೋಟಿ ರೂಪಾಯಿಗಳು ಎಂದು ತಮಿಳು ಮೀಡಿಯಾ ವರದಿ ಮಾಡಿದೆ. ಆದರೆ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದ ರಮ್ಯಾ ಅವರ ಆಸ್ತಿ ಇಷ್ಟೇನಾ ಎಂದು ನಿಮ್ಮಲ್ಲೂ ಪ್ರಶ್ನೆ ಶುರುವಾಗುತ್ತದೆ. ಅದಕ್ಕೆ ಇಂದು ಉತ್ತರ ನೀಡುತ್ತೇವೆ. ರಮ್ಯಾ ಅವರು ಚಂದನವನದಲ್ಲಿ ಅತ್ಯಂತ ಬೇಡಿಕೆ ಹೊಂದಿದ್ದ, ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಕೂಡ ಹೌದು.

2014ರಲ್ಲಿ ರಮ್ಯಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ತಮ್ಮ ಆಸ್ತಿ 2,80,43,931 ರೂಪಾಯಿಗಳು ಎನ್ಸ್ಸ್ ಘೋಷಿಸಿದ್ದರು. ಅಲ್ಲದೆ 55 ಲಕ್ಷದ 30 ಸಾವಿರ ರೂಪಾಯಿ ಬೆಲೆ ಬಾಳುವ ಸ್ವತ್ತು ಇದೆ ಎಂದು ಘೋಷಿಸಿದ್ದರು. 9 ವರ್ಷದ ಹಿಂದೆ ಇಷ್ಟು ಆಸ್ತಿ ಇತ್ತು ಎಂದರೆ, ಈಗ ಈ ಆಸ್ತಿ ಇನ್ನು ಹೆಚ್ಚಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ತಮ್ಮದೇ ಆದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.

ಐಷಾರಾಮಿ ಕಾರ್ ಇದೆ ಜೊತೆಗೆ ತಮ್ಮದೇ ಆದ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಹಾಗಾಗಿ ರಮ್ಯಾ ಅವರ ಬಳಿ ಎಷ್ಟು ಆಸ್ತಿ ಇರಬಹುದು ಎಂದು ಊಹಿಸಬಹುದು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಮ್ಯಾ ಅವರಿಗೆ ಶುಭ ಕೋರೋಣ..

Leave A Reply

Your email address will not be published.