ಟ್ರೋಲ್ ಮಾಡೋರಿಗೆ ತಿರುಗೇಟು ಕೊಡುತ್ತಾ, ಶೋ ಹೆಸರನ್ನೇ ಟಾರ್ಗೆಟ್ ಮಾಡಿದ್ರಾ ನಟಿ ರಮ್ಯಾ?

0
41

Ramya weekend with Ramesh: ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಸೀಸನ್ ಐದರ ಮೊದಲ ಸಾಧಕಿಯಾಗಿ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯಾ (Actress Ramya) ಎಂಟ್ರಿ ನೀಡಿ, ಸಾಧಕರ ಕುರ್ಚಿಯಲ್ಲಿ ಕುಳಿತು, ತಮ್ಮ ಜೀವನದ ಏಳು ಬೀಳುಗಳ ಬಗ್ಗೆ ಮಾತನಾಡಿದ್ದಾರೆ. ನಟಿಯನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಬಯಸಿದ್ದ ಅಭಿಮಾನಿಗಳ ಆಸೆ ನೆರವೇರಿದರೂ, ಮತ್ತೊಂದು ಕಡೆ ಶೋ ಮತ್ತು ರಮ್ಯಾ ಅವರ ಕುರಿತಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಆಸ್ಕರ್ ನಲ್ಲಿ NTR ಧರಿಸಿದ್ದ ಡ್ರೆಸ್ ಮೇಲಿನ ಗೋಲ್ಡನ್ ಟೈಗರ್ ಸಿಂಬಲ್ ನ 3 ಅರ್ಥ ತಿಳಿದರೆ ಥ್ರಿಲ್ ಆಗ್ತೀರಾ!

ಈ ಟ್ರೋಲ್ ಗೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ನಟಿ ಶೋ ನಲ್ಲಿ ಹೆಚ್ಚು ಇಂಗ್ಲೀಷ್ ಭಾಷೆಯನ್ನು ಬಳಸಿದ್ದು, ಎರಡನೆಯದಾಗಿ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರನ್ನು ಡಾ.ಬ್ರೋ ನ ಶೋ ಗೆ ಕರೆಸ್ತೀರಾ ಎಂದು ಕೇಳಿದ್ದಕ್ಕೆ ಅವರು, ಡಾ.ಬ್ರೋ ನಿಮ್ಮ ತಾಯಿಗೆ ಗೊತ್ತಾ, ಅಜ್ಜಿಗೆ ಗೊತ್ತಾ ಎಂದು ಪ್ರಶ್ನೆ ಮಾಡಿದ್ದರು. ಈ ಎರಡು ಕಾರಣಗಳಿಂದ ನೆಟ್ಟಿಗರು ಸಿಕ್ಕಾಪಟ್ಟೆ ಅಸಮಾಧಾನಗೊಂಡಿದ್ದರು. ರಾಘವೇಂದ್ರ ಹುಣಸೂರು ಅವರ ಮಾತಿನ ಧಾಟಿಯಲ್ಲೇ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಹೌದು, ರಮ್ಯ ಅವರು ಇಂಗ್ಲಿಷ್ ನಲ್ಲಿ ಮಾತನಾಡಿದ್ದಕ್ಕೆ ನೆಟ್ಟಿಗರು, ರಮ್ಯಾ ಮಾತನಾಡಿದ್ದು ನಮ್ಮ ಅಜ್ಜಿಗೂ ಗೊತ್ತಾಗ್ಲಿಲ್ಲ, ನಮ್ಮಜ್ಜಿಗೆ ಅರ್ಥವಾಗಲಿಲ್ಲ ಎಂದೆಲ್ಲಾ ಟಾಂಗ್ ನೀಡಿದ್ದರು. ಆದ ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದು, ಸಾಕಷ್ಟು ಮೀಮ್ ಗಳು ಹರಿದಾಡುತ್ತಿದ್ದು, ನೆಟ್ಟಿಗರಿಂದಲೂ ದೊಡ್ಡ ಮಟ್ಟದಲ್ಲೇ ಪ್ರತಿಕ್ರಿಯೆಗಳು ಹರಿದು ಇರುವಾಗಲೇ ನಟಿ ನಟಿ ರಮ್ಯಾ ಈ ಟ್ರೋಲ್ ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮೀಮ್ ಒಂದಕ್ಕೆ ಅವರು ಕಾಮೆಂಟ್ ಮಾಡಿದ್ದಾರೆ ರಮ್ಯ.

ಅವರು ಕಾಮೆಂಟ್ ನಲ್ಲಿ ಬರೆದಿರುವ ಸಾಲುಗಳು ವೈರಲ್ ಆಗುತ್ತಿದೆ. ರಮ್ಯಾ ತಮ್ಮ ಕಾಮೆಂಟ್ ನಲ್ಲಿ,
ರಮ್ಯಾ ತಮ್ಮ ಕಾಮೆಂಟ್ ನಲ್ಲಿ, ಶೋ ಹೆಸರು ವೀಕೆಂಡ್ ವಿತ್ ರಮೇಶ್ weekend with Ramesh (ಸುಮ್ನೆ ಹೇಳ್ತಾ ಇದ್ದೇನೆ), ಶೋ ಬಂದಿದ್ದ ಅತಿಥಿಗಳು ಕನ್ನಡದವರಲ್ಲ, ಆದ್ದರಿಂದ ಅವರನ್ನು ಗಮನದಲ್ಲಿಸಿಕೊಂಡು ಮಾತನಾಡುವ ಪ್ರಯತ್ನ ಮಾಡಿದ್ದೆ ಅಷ್ಟೇ.. ಮುಂದಿನ ಸಲ ಎಲ್ಲಾ ಮುದ್ದಿನ ಅಜ್ಜಿಯರಿಗಾಗಿ ಪೂರ್ತಿ ಕನ್ನಡದಲ್ಲೇ ಮಾತಾಡ್ತೀನಿ ಎಂದಿದ್ದಾರೆ. ಕೊನೆಯ ಸಾಲಿನಲ್ಲಿ,ನಾವೆಲ್ಲರೂ ದಯೆ ಮತ್ತು ಪ್ರೀತಿಯ ಭಾಷೆಯನ್ನು ಮಾತನಾಡೋಣವೆಂದು ನಟಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here