Ranjani Raghavan: ಪರ್ಪಲ್ ಡ್ರೆಸ್ ನಲ್ಲಿ ರಂಜನಿ ಮಿಂಚಿಂಗ್! ನೆಟ್ಟಿಗರು ಕ್ಲೀನ್ ಬೋಲ್ಡ್

Written by Pooja Siddaraj

Published on:

Ranjani Raghavan: ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗಿವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕನ್ನಡತಿ ಧಾರಾವಾಹಿ. ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನ್ ಆಗಿದ್ದು ಎಲ್ಲರಿಗು ಗೊತ್ತು. ದೊಡ್ಡ ಕಂಪನಿಯ ಸಿಇಒ ಆಗಿ ಹರ್ಷ, ಸರಳವಾದ ಮಧ್ಯಮ ಕುಟುಂಬದ ಕನ್ನಡ ಪ್ರೇಮ ಹೊಂದಿರುವ ಕನ್ನಡ ಟೀಚರ್ ಪಾತ್ರ ಭುವಿಯದ್ದು.

ಸೀರಿಯಲ್ ನಲ್ಲಿ ಭುವಿ ಪಾತ್ರ ನಿರ್ವಹಿಸಿದ್ದು ನಟಿ ರಂಜನಿ ರಾಘವನ್. ಈ ಮೊದಲು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಎರಡು ಧಾರಾವಾಹಿಗಳಲ್ಲೂ ಕೂಡ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಯಾವಾಗಲೂ ಸೀರೆ ಅಥವಾ ಕುರ್ತಾ ಧರಿಸಿ ಅಪ್ಪಟ ಕನ್ನಡತಿಯ ಹಾಗೆ ಕಾಣಿಸಿಕೊಳ್ಳುತ್ತಾರೆ. ಧಾರಾವಾಹಿ ಮುಗಿಯುವ ಸಮಯದಲ್ಲಿ ಪ್ರತಿ ಸಂಚಿಕೆಯಲ್ಲೂ ಇವರು ಹೇಳಿಕೊಡುವ ಕನ್ನಡ ಪಾಠ ಬಹಳ ಫೇಮಸ್ ಆಗಿತ್ತು.

ಕನ್ನಡತಿ ಧಾರಾವಾಹಿಯಲ್ಲಿ ಭುವನೇಶ್ವರಿ ಮತ್ತು ಸೌಪರ್ಣಿಕಾ ಪಾತ್ರದಲ್ಲಿ ನಟಿಸಿದ್ದಾರೆ. ರಿಯಲ್ ಲೈಫ್ ನಲ್ಲಿ ಮಾಡರ್ನ್ ಆಗಿರುವ ರಂಜಿನಿ, ಜೀನ್ಸ್ ಟೀ ಶರ್ಟ್ ಗಳಲ್ಲಿ ಬಹಳ ಕ್ಯೂಟ್ ಆಗಿ ಕಾಣುತ್ತಾರೆ. ಅವರ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಫೋಟೋಗಳನ್ನು ನೋಡಿದರೆ ಮಾಡರ್ನ್ ಲುಕ್ ನಲ್ಲೂ ಕನ್ನಡ ಟೀಚರ್ ಸೂಪರ್ ಎಂಬುದು ತಿಳಿಯುತ್ತದೆ. ಇವರ ಮಾಡರ್ನ್ ಲುಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಉಂಟು.

ಕಿರುತೆರೆ ಮಾತ್ರವಲ್ಲದೆ ಬೆಳ್ಳಿ ತೆರೆಯಲ್ಲಿ ಕೂಡ ರಂಜನಿ ರಾಘವನ್ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ದೂದ್ ಪೇಡಾ ದಿಗಂತ್ ಅವರೊಡನೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ನಟಿಸಿದ್ದರು ರಂಜನಿ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಂಜನಿ ಅವರು ಇದೀಗ ಪರ್ಪಲ್ ಕಲರ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು, ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ಈ ಫೋಟೋಸ್ ಶೇರ್ ಮಾಡಿದ್ದಾರೆ. ಇದೀಗ ಈ ಫೋಟೋಸ್ ವೈರಲ್ ಆಗಿದೆ.

Leave a Comment