Rashmika Mandanna: ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸೋದು ಯಾಕೆ? ರಶ್ಮಿಕಾ ಕೊಟ್ಟ ಉತ್ತರವಿದು!

Written by Pooja Siddaraj

Published on:

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಲಿಪ್ ಲಾಕ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ಮೊದಲು ನಟ ವಿಜಯ್ ದೇವರಕೊಂಡ ಅವರೊಡನೆ 2 ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು, ಸಿನಿಮಾ ಗಳಲ್ಲಿ ಲಿಪ್ ಲಾಕ್ ಸೀನ್ ಗಳಲ್ಲಿ ನಟಿಸೋದು ಯಾಕೆ? ರಶ್ಮಿಕಾ ಅವರು ಕೊಟ್ಟ ಉತ್ತರ ಹೀಗಿದೆ.

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡು, ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ.

ಅನಿಮಲ್ ಸಿನಿಮಾ ಡಿಸೆಂಬರ್ 1ರಂದು ಬಿಡುಗಡೆ ಆಗಲಿದ್ದು, ಸಿನಿಮಾ ಪ್ರೊಮೋಷನ್ ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ನಿನ್ನೆಯಷ್ಟೇ ಪ್ರೊಮೋಷನ್ ಗಾಗಿ, ಪ್ರೆಸ್ ಮೀಟ್ ಗಾಗಿ ಬೆಂಗಳೂರಿಗೆ ಬಂದಿದ್ದರು ರಶ್ಮಿಕಾ. ಆ ವೇಳೆ ಪ್ರೆಸ್ ಮೀಟ್ ನಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸೋದು ಯಾಕೆ ಎಂದು ಪತ್ರಕರ್ತರು ರಶ್ಮಿಕಾ ಅವರಿಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿದ್ದಾರೆ.

“ನಿರ್ದೇಶಕರಿಗೆ ಬೇಕು ಅಂದ್ರೆ ನಾವು ಮಾಡಬೇಕು. ಈ ಸೀನ್ ಮಾಡೋದ್ರಿಂದ ಸಿನಿಮಾ ದೊಡ್ಡ ಹಿಟ್ ಆಗುತ್ತೆ ಅಂತ ಮಾಡಲ್ಲ. ನಿರ್ದೇಶಕರಿಗೆ ಅದು ಬೇಕು ಎಂದು ಅನ್ನಿಸಿದರೆ ಮಾತ್ರ ಮಾಡುತ್ತೇವೆ. ನಿರ್ದೇಶಕರು ತೆಗೆದುಕೊಳ್ಳುವ ನಿರ್ಧಾರವನ್ನು ಮರುಮಾತಾಡದೆ ಒಪ್ಪಿಕೊಳ್ಳುತ್ತೇವೆ..ನಾನು ಕೂಡ ಅದನ್ನೇ ಮಾಡಿದ್ದೇನೆ..” ಎಂದು ಹೇಳಿದ್ದಾರೆ ರಶ್ಮಿಕಾ.

Leave a Comment