Rashmika Mandanna Boyfriend ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ(Rashmika Mandanna) ಸಿನಿಮಾ ರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ದಕ್ಷಿಣ ಮತ್ತು ಬಾಲಿವುಡ್ ಹೀಗೆ ಎರಡೂ ಕಡೆ ಬ್ಯುಸಿಯಿರುವ ರಶ್ಮಿಕಾ ಪ್ರಸ್ತುತ ದಕ್ಷಿಣದಲ್ಲಿ ಅಲ್ಲು ಅರ್ಜುನ್(Allu Arjun) ನಾಯಕನಾಗಿರುವ ಪುಷ್ಪ 2 (Pushap 2) ಮತ್ತು ಬಾಲಿವುಡ್ ನಲ್ಲಿ ಸ್ಟಾರ್ ನಟ ರಣಬೀರ್ ಕಪೂರ್(Ranbeer Kapoor) ಜೊತೆಗೆ ಅನಿಮಲ್(Animal) ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟಿ ರಶ್ಮಿಕಾ ಸಿನಿಮಾ ವಿಚಾರಗಳು ಮಾತ್ರವೇ ಅಲ್ಲದೇ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಅದರಲ್ಲೂ ವಿಶೇಷವಾಗಿ ನಟಿಯ ಲವ್ ಲೈಫ್ ಬಗ್ಗೆ ಆಗಾಗ ಸುದ್ದಿಗಳು ಆಗುತ್ತಲೇ ಇರುತ್ತದೆ.
ತನ್ನ ಕ್ರಶ್ ಮದ್ವೆ ಆಯ್ತು ಅಂತ ಬೇಸರಗೊಂಡ ಸಾನ್ವಿ ಸುದೀಪ್ ಮಾಡಿದ್ದೇನು ಗೊತ್ತಾ?

ನಿನ್ನೆ ಪ್ರೇಮಿಗಳ ದಿನದಂದು(Valentine’s Day) ನಟಿಯು ತಮ್ಮ ವ್ಯಾಲೆಂಟೈನ್ ಯಾರು ಎನ್ನುವುದನ್ನು ರಿವೀಲ್ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ರಶ್ಮಿಕಾ ಶೇರ್ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್(Rashmika Break up) ನಂತರ ರಶ್ಮಿಕಾ ಹೆಚ್ಚಾಗಿ ಕಾಣಿಸಿಕೊಂಡಿರುವುದು ನಟ ವಿಜಯ ದೇವರಕೊಂಡ(Vijaya Devarakonda) ಜೊತೆಗೆ ಎನ್ನುವುದು ಕೂಡಾ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಇವರ ನಡುವೆ ಸ್ನೇಹಕ್ಕಿಂತ ಹೆಚ್ಚಿನದೇನೋ ಇದೆ ಎನ್ನುವ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತದೆ. ಆದರೆ ಅಧಿಕೃತವಾಗಿ ಯಾವುದೂ ಘೋಷಣೆ ಆಗಿಲ್ಲ.
ಪ್ರಭಾಸ್ ಸ್ಟಾರ್ ಡಂ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಆದಿಪುರುಷ್ ನಿರ್ದೇಶಕ ಓಂ ರಾವತ್! ಸಿನಿಮಾ ಬಿಡುಗಡೆ ಯಾವಾಗ?
ಇವೆಲ್ಲವುಗಳ ನಡುವೆ ರಶ್ಮಿಕಾ ವ್ಯಾಲೆಂಟೈನ್ಸ್ ಡೇ ಗೂ ಮುನ್ನ ನನ್ನ ವ್ಯಾಲೆಂಟೈನ್ ಯಾರು? ಗೆಸ್ ಮಾಡಿ ಎನ್ನುವ ಪೋಸ್ಟ್ ಒಂದನ್ನು ಶೇರ್ ಮಾಡಿ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದರು. ಆದರೆ ಅನಂತರ ಅದು ಒಂದು ಜಾಹೀರಾತಿಗಾಗಿ ನಟಿಯು ಮಾಡಿದ ಗಿಮಿಕ್ ಅಷ್ಟೇ ಎಂದು ತಿಳಿದು ಬಂದಿದೆ. ನಟಿ ರಶ್ಮಿಕಾ ಮಂದಣ್ಣ ಪಾನೀಯ ಕಂಪನಿ 7UP ಜೊತೆ ಜಾಹೀರಾತಿನ ಒಪ್ಪಂದ ಮಾಡಿಕೊಂಡಿದ್ದು, ಈ ಪಾನೀಯ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದಾರೆ. ಈ ವಿಷಯವನ್ನು ನಟಿ ವ್ಯಾಲೆಂಟೈನ್ಸ್ ಡೇ ದಿನ ರಿವೀಲ್ ಮಾಡಿದ್ದಾರೆ.
7ಅಪ್ ಲೋಗೋಗೆ ಫ್ಲೈಯಿಂಗ್ ಕಿಸ್ ಕೊಡುತ್ತಿರುವ ವಿಡಿಯೋವನ್ನು ನಟಿ ರಶ್ಮಿಕಾ ಹಂಚಿಕೊಂಡಿದ್ದು, ‘ಈ ಕುಟುಂಬಕ್ಕೆ ಸೇರುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ. ಸಿನಿಮಾಗಳಲ್ಲಿ ನಟಿ ರಶ್ಮಿಕಾ ಜನಪ್ರಿಯತೆ ಹೆಚ್ಚುತ್ತಿರುವ ಹಾಗೆಯೇ ಇನ್ನೊಂದು ಕಡೆ ಅವರು ಹಲವು ಸುಪ್ರಸಿದ್ಧ ಕಂಪನಿಗಳಿಗೆ ಅಂಬಾಸಿಡರ್ ಆಗಿ ಮಿಂಚುತ್ತಿದ್ದಾರೆ. ಇನ್ನು ಇತ್ತೀಚಿಗೆ ರಶ್ಮಿಕಾ ನಟಿಸಿದ ತಮಿಳಿನ ವಾರಿಸು(Vaarisu) ಸಿನಿಮಾ ಮತ್ತು ಓಟಿಟಿಯಲ್ಲಿ ಬಿಡುಗಡೆ ಆದ ಹಿಂದಿ ಸಿನಿಮಾ ಮಿಷನ್ ಮಜ್ನು(Mission Majnu) ಎರಡೂ ಸಹಾ ಸಕ್ಸಸ್ ಪಡೆದಿದೆ.Rashmika Mandanna Boyfriend