ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಲಿಪ್ ಲಾಕ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ಮೊದಲು ನಟ ವಿಜಯ್ ದೇವರಕೊಂಡ ಅವರೊಡನೆ 2 ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು, ಇರ್8ಯ ಮತ್ತೊಮ್ಮೆ ಲಿಪ್ ಲಾಕ್ ಮಾಡಿದ್ದು, ಈ ಬಾರಿ ಯಾವ ನಟನ ಜೊತೆಗೆ ಗೊತ್ತಾ?
ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.
ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ನಟ ಕಾರ್ತಿ ಅವರೊಡನೆ ವಿಜಯ್ ಅವರೊಡನೆ ಸಿನಿಮಾಗಳಲ್ಲಿ ನಟಿಸಿದರು. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಅವರಿಗೆ ಪುಷ್ಪ ಸಿನಿಮಾ ಇನ್ನು ದೊಡ್ಡ ಮಟ್ಟದ ಕ್ರೇಜ್ ತಂದುಕೊಟ್ಟಿತು, ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡರು. ಬಾಲಿವುಡ್ ಇಂದಲೂ ಅವಕಾಶ ಪಡೆದುಕೊಂಡರು.
ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡಲು ಚಿತ್ರತಂಡ ತಯಾರಾಗಿದೆ. ಹಾಡಿನ ಕುರಿತ ಹಾಗೆ ರಶ್ಮಿಕಾ ಮಂದಣ್ಣ ಅವರು ಪೋಸ್ಟ್ ಮಾಡಿದ್ದಾರೆ.
ಹಾಡಿನ ಫೋಟೋ ಶೇರ್ ಮಾಡಿ, ಯಾವ ದಿನಾಂಕದಂದು ಹಾಡು ಬಿಡುಗಡೆ ಆಗುತ್ತದೆ ಎನ್ನುವ ಮಾಹಿತಿಯನ್ನು ರಶ್ಮಿಕಾ ಅವರಃ ಹಂಚಿಕೊಂಡಿದ್ದು, ಆ ಫೋಟೋದಲ್ಲಿ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಲಿಪ್ ಲಾಕ್ ಮಾಡಿರುವುದನ್ನು ನೋಡಬಹುದಾಗಿದೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಿಪ್ ಲಾಕ್ ಮಾಡಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿದ್ದಾರೆ.