Rashmika Mandanna: ಅನಿಮಲ್ ಯಶಸ್ಸಿನ ಬಳಿಕ ಸಂಭಾವನೆ ಜಾಸ್ತಿ ಮಾಡಿಕೊಂಡ್ರಾ ರಶ್ಮಿಕಾ?

0 16

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಹಾಗೆಯೇ ಬಾಯ್ ಫ್ರೆಂಡ್ ವಿಜಯ್ ದೇವರಕೊಂಡ ಅವರ ವಿಚಾರಕ್ಕೂ ಸುದ್ದಿಯಾಗುತ್ತಾರೆ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡು, ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಬಿಡುಗಡೆಯಾಗಿ ಹಿಟ್ ಲಿಸ್ಟ್ ಗೆ ಸೇರಿದೆ. ಅನಿಮಲ್ ಯಶಸ್ಸಿನಿಂದ ರಶ್ಮಿಕಾ ಅವರ ಸಂಭಾವನೆ ಕೂಡ ಜಾಸ್ತಿಯಾಗಿದೆ ಎನ್ನುವ ಮಾತು ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಒಂದು ಸಿನಿಮಾಗೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿತ್ತು. ಅದರ ಬೆನ್ನಲ್ಲೇ ರಶ್ಮಿಕಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ರಶ್ಮಿಕಾ ಅವರೇ ಉತ್ತರ ಕೊಟ್ಟಿದ್ದಾರೆ..

ಇತ್ತೀಚೆಗೆ ಮಾಧ್ಯಮದವರ ಜೊತೆಗೆ ಮಾತನಾಡಿದ ರಶ್ಮಿಕಾ ಅವರು, ಈ ಥರದ ಸುದ್ದಿಗಳನ್ನ ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ..ನನ್ನ ಮಾತಿಗೆ ಬದ್ಧವಾಗಿ ನಾನು ಇರುತ್ತೇನೆ.. ಎಂದಿದ್ದಾರೆ ರಶ್ಮಿಕಾ. ಈ ಮೂಲಕ ತಾವು ಸಂಭಾವನೆ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿರುವ ರಶ್ಮಿಕಾ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

Leave A Reply

Your email address will not be published.