Rashmika Mandanna: ವಿಜಯ್ ದೇವರಕೊಂಡ ಅವರಿಗೆ ಮನಸ್ಸಿನ ಮಾತನ್ನು ಹೇಳಿದ್ರ ರಶ್ಮಿಕಾ?

0 11

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಹಾಗೆಯೇ ಬಾಯ್ ಫ್ರೆಂಡ್ ವಿಜಯ್ ದೇವರಕೊಂಡ ಅವರ ವಿಚಾರಕ್ಕೂ ಸುದ್ದಿಯಾಗುತ್ತಾರೆ. ಇದೀಗ ವಿಜಯ್ ದೇವರಕೊಂಡ ಅವರ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸೀಕ್ರೆಟ್ ಪೋಸ್ಟ್ ಮಾಡಿರುವ ಹಾಗೆ ಕಾಣುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡು, ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಬಿಡುಗಡೆಯಾಗಿ ಹಿಟ್ ಲಿಸ್ಟ್ ಗೆ ಸೇರಿದೆ. ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರು ಅಪ್ಡೇಟ್ ಮಾಡಿರುವ ಒಂದು ಸ್ಟೋರಿ ವಿಜಯ್ ದೇವರಕೊಂಡ ಅವರಿಗೆ ಹಾಕಿರುವ ಹಾಗಿದೆ. ನನ್ನ ಜೀವನಕ್ಕೆ ಬಂದಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಸ್ಟೋರಿಯಲ್ಲಿ ಒಂದು quote ಪೋಸ್ಟ್ ಮಾಡಿದ್ದಾರೆ ರಶ್ಮಿಕಾ ಮಂದಣ್ಣ. ಇದನ್ನು ನೋಡಿದ ನೆಟ್ಟಿಗರು, ವಿಜಯ್ ದೇವರಕೊಂಡ ಅವರಿಗೆ ಹಾಕಿರಬಹುದು ಎನ್ನುತ್ತಿದ್ದಾರೆ.

Leave A Reply

Your email address will not be published.