Rashmika Mandanna: ಬೇರೆ ಊರಿನಲ್ಲಿದ್ದರು ವಿಜಯ್ ದೇವರಕೊಂಡ ಜೊತೆಗೆ ಟ್ವಿನ್ನಿಂಗ್ ಮಾಡಿದ ರಶ್ಮಿಕಾ!

0 1

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಹಾಗೆಯೇ ಬಾಯ್ ಫ್ರೆಂಡ್ ವಿಜಯ್ ದೇವರಕೊಂಡ ಅವರ ವಿಚಾರಕ್ಕೂ ಸುದ್ದಿಯಾಗುತ್ತಾರೆ. ಇದೀಗ ವಿಜಯ್ ಮತ್ತು ರಶ್ಮಿಕಾ ಬೇರೆ ಬೇರೆ ಊರುಗಳಲ್ಲಿ ಇದ್ದುಕೊಂಡು ಒಂದೇ ರೀತಿಯ ಬಟ್ಟೆ ಧರಿಸಿ ಟ್ವಿನ್ನಿಂಗ್ ಮಾಡಿ ಸುದ್ದಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡು, ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ.

ಅನಿಮಲ್ ಸಿನಿಮಾ ಡಿಸೆಂಬರ್ 1ರಂದು ಬಿಡುಗಡೆ ಆಗಲಿದ್ದು, ಸಿನಿಮಾ ಪ್ರೊಮೋಷನ್ ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಅವರು ಧರಿಸಿರುವ ಹೂಡಿ ಇಂದ ಸುದ್ದಿಯಾಗಿದ್ದಾರೆ, ಅನಿಮಲ್ ಪ್ರೊಮೋಷನ್ ನಲ್ಲಿ ರಶ್ಮಿಕಾ ಅವರು RWDY ಎಂದು ಬರೆದಿರುವ ಹೂಡಿ ಧರಿಸಿದ್ದು, ನಿನ್ನೆ ತೆಲಂಗಾಣದಲ್ಲಿ ನಡೆದ ಎಲೆಕ್ಷನ್ ನಲ್ಲಿ ವೋಟ್ ಹಾಕಲು ವಿಜಯ್ ದೇವರಕೊಂಡ ಕೂಡ ಇದೇ ಹೂಡಿ ಧರಿಸಿ ಹೋಗಿದ್ದಾರೆ.

ವಿಜಯ್ ಇದೇ ಫೋಟೋ ಶೇರ್ ಮಾಡಿದ್ದು, ರಶ್ಮಿಕಾ ಅವರು ಹೂಡಿ ಧರಿಸಿ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ತಿಂಗಳು RWDY ಬ್ರ್ಯಾಂಡ್ ನ ಬಟ್ಟೆ ಲಾಂಚ್ ಆಗುತ್ತಿದ್ದು, ಇಬ್ಬರು ಅದರ ಪ್ರೊಮೋಷನ್ ಶುರು ಮಾಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದೀಗ ಇವರಿಬ್ಬರ ಈ ಫೋಟೋಸ್ ವೈರಲ್ ಆಗಿದ್ದು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಕ್ಕೆ ರೆಕ್ಕೆ ಪುಕ್ಕ ಸಿಕ್ಕ ಹಾಗೆ ಆಗಿದೆ.

Leave A Reply

Your email address will not be published.