ನ್ಯೂ ಇಯರ್ ವಿಶ್ ಮಾಡಿ ತಗ್ಲಾಕ್ಕೊಂಡ ವಿಜಯ ದೇವರಕೊಂಡ: ರಶ್ಮಿಕಾ, ವಿಜಯ್ ಸೀಕ್ರೆಟ್ ಬಟಾ ಬಯಲು

0
33

Rashmika vijay devarakonda ಟಾಲಿವುಡ್‌ ನಲ್ಲಿ ಆಗಾಗ ಸದ್ದು ಸುದ್ದಿಯಾಗುವ ಜೋಡಿ ಎಂದರೆ ವಿಜಯ್ ದೇವರಕೊಂಡ(Vijaya Devarakonda) ಹಾಗೂ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಜೋಡಿ. ಈ ಇಬ್ಬರ ನಡುವೆ ಸ್ನೇಹ ಮಾತ್ರವೇ ಇಲ್ಲ, ಇವರು ಪರಸ್ಪರ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ವಿಚಾರಗಳು ಸಹಾ ಆಗಾಗ ಫ್ಯಾನ್ಸ್‌ ವಲಯದಲ್ಲಿ ಕೇಳಿ ಬರುತ್ತವೆ ಮತ್ತು ಸುದ್ದಿಗಳು ಸಹಾ ಹರಿದಾಡುತ್ತವೆ. ಆದರೆ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಾತ್ರ ಇದನ್ನು ನಿರಾಕರಿಸುತ್ತಲೇ ಬಂದಿದ್ದು, ತಾವಿಬ್ಬರೂ ಸ್ನೇಹಿತರು ಮಾತ್ರವೇ ಎಂದು ಹೇಳುತ್ತಾ ಬರುತ್ತಿದ್ದಾರೆ.‌ ಕಳೆದ ಅಕ್ಟೋಬರ್ ಬರ್ ನಲ್ಲಿ ಈ ಜೋಡಿ ಮಾಲ್ಡೀವ್ಸ್ ಗೆ ತೆರಳಿದ್ದರು ಎನ್ನುವ ಸುದ್ದಿ ಕೂಡಾ ಹರಿದಾಡಿತ್ತು.

ಭಾರತೀಯ ಚಿತ್ರರಂಗದಲ್ಲಿ ಮಿಂಚ್ತಾರೆ: ನಟಿ ಶ್ರೀಲೀಲಾನ ಹಾಡಿ ಹೊಗಳಿದ ತೆಲುಗಿನ ಸ್ಟಾರ್ ನಟ

ರಶ್ಮಿಕಾ(Rashmika) ಮತ್ತು ವಿಜಯ ದೇವರಕೊಂಡ (Vijay Devarakonda) ಏರ್ ಪೋರ್ಟ್ ನಲ್ಲಿ ಬೇರೆ ಬೇರೆಯಾಗಿ ಕಾಣಿಸಿಕೊಂಡರೂ ಹತ್ತಿದ್ದ ಮಾಲ್ಡೀವ್ಸ್ (Maldives) ವಿಮಾನ ಎನ್ನಲಾಗಿತ್ತು. ಅನಂತರ ರಶ್ಮಿಕಾ ಮಾಲ್ಡೀವ್ಸ್ ನ ಫೋಟೋಗಳನ್ನು ಹಂಚಿಕೊಂಡಿದ್ದರಾದರೂ, ವಿಜಯ ದೇವರಕೊಂಡ ಮಾತ್ರ ಯಾವ ಫೋಟೋ ಸಹಾ ಶೇರ್ ಮಾಡಿರಲಿಲ್ಲ. ಆದರೆ ಈಗ ಅವರು ಹೊಸ ವರ್ಷಕ್ಕೆ ಮಾಡಿದ ಪೋಸ್ಟ್ ಮತ್ತು ಶೇರ್ ಮಾಡಿದ ಫೋಟೋ ಈಗ ಸಖತ್ ಸದ್ದು ಮಾಡಿದ್ದು, ರಶ್ಮಿಕಾ ಮತ್ತು ವಿಜಯ ದೇವರಕೊಂಡ ಮಾಲ್ಡೀವ್ಸ್ ಟ್ರಿಪ್ ಬಗ್ಗೆ ಈಗ ಪುಷ್ಟಿ ನೀಡುವಂತಾಗಿದೆ.

ನಟ ವಿಜಯ ದೇವರಕೊಂಡ(Vijay Devarakonda) ಮಾಲ್ಡೀವ್ಸ್ ನ ಪೂಲ್ ಒಂದರಲ್ಲಿ ಇರುವ ಪೋಟೋ ಶೇರ್ ಮಾಡಿಕೊಂಡು ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. ರಶ್ಮಿಕಾ(Rashmika beach photo) ಕೂಡಾ ಬೀಚ್ ನಲ್ಲಿರುವ ಹಾಟ್ ಫೋಟೋ ಒಂದನ್ನು ಶೇರ್ ಮಾಡಿಕೊಂಡು ವಿಶ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಈ ಇಬ್ಬರೂ ಜೊತೆಯಾಗಿ ಹೊಸ ವರ್ಷದ ಸಂಭ್ರಮವನ್ನು ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಈ ಹಿಂದೆ ರಶ್ಮಿಕಾ ಶೇರ್ ಮಾಡಿದ್ದ ಫೋಟೋ ಒಂದರಲ್ಲಿ ಕಂಡ ಅದೇ ಜಾಗ ಈಗ ವಿಜಯ ದೇವರಕೊಂಡ ಶೇರ್ ಮಾಡಿದ ಫೋಟೋದಲ್ಲೂ ಕಂಡಿದೆ.

ಇದನ್ನು ಗಮನಿಸಿದ ನೆಟ್ಟಿಗರು ಇದು ಹಳೆಯ ಫೋಟೋ ಎಂದಿದ್ದಾರೆ. ನೀವಿಬ್ಬರೂ ಒಟ್ಟಿಗೆ ಹೊಸ ವರ್ಷದ ಸಂಭ್ರಮ ಸೆಲೆಬ್ರೇಟ್ ಮಾಡಿದ್ರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ಫೋಟೋ ಇವರು ಜೊತೆಯಾಗಿ ಮಾಲ್ಡೀವ್ಸ್ ಗೆ ಹೋಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಒಟ್ಟಾರೆ ಫೋಟೋಗಳು ಮಾತ್ರ ಈಗ ಭರ್ಜರಿಯಾಗಿ ವೈರಲ್ ಆಗಿದೆ. ಇದಕ್ಕೆ ವಿಜಯ ದೇವರಕೊಂಡ ಅಥವಾ ರಶ್ಮಿಕಾ ಯಾವುದೇ ರೀತಿಯಲ್ಲಿ ಸಹಾ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here