Raviteja: ರಾಕಿ ಭಾಯ್ ಬಗ್ಗೆ ಮಾತನಾಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ನಟ ರವಿತೇಜ, ಯಶ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ?

0 13

ಸಿನಿಮಾ ಸೆಲೆಬ್ರಿಟಿಗಳು ಎಂದರೆ ಮಾಧ್ಯಮದವರು ಕಣ್ಣು ಸದಾ ಅವರ ಮೇಲೆ ಇರುತ್ತದೆ. ಏನೇ ಮಾತನಾಡಿದರು ಜನರು ಅದನ್ನು ಕೂಲಂಕುಶವಾಗಿ ನೋಡುತ್ತಾರೆ. ಒಂದು ಸಣ್ಣ ಏರುಪೇರು ಕಾಣಿಸಿದರು ಅದು ವಿವಾದ ಆಗುವುದರಲ್ಲಿ ಸಂಶಯವಿಲ್ಲ. ಇಂಥ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದೀಗ ಯಶ್ ಅವರ ಬಗ್ಗೆ ತೆಲುಗು ನಟ ರವಿತೇಜ ನೀಡಿರುವ ಹೇಳಿಕೆ ಅದೇ ರೀತಿ ಸುದ್ದಿಯಾಗಿದೆ.

ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ಮಾತ್ರವಲ್ಲ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಹೆಸರು ಮಾಡಿರುವ ನಟ. ಕೆಜಿಎಫ್ ಸಿನಿಮಾವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿತು. ಯಶ್ ಅವರು ರಾಕಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಮಿಂಚಿದರು, ಆ ನಟನೆ ಗತ್ತು ಗಂಭೀರ್ಯ ಇದೆಲ್ಲವನ್ನು ಜನರು ಇಷ್ಟಪಟ್ಟರು.

ತಮ್ಮ ಕೆರಿಯರ್ ನ ಸುಮಾರು ಆರೇಳು ವರ್ಷಗಳನ್ನು ಕೆಜಿಎಫ್ ಸರಣಿಗಾಗಿಯೇ ಮೀಸಲಿಟ್ಟು, ಅದ್ಭುತ ಸಿನಿಮಾ ಒಂದನ್ನು ಮಾಡಬೇಕು ಎಂದು ಪರಿಶ್ರಮ ಹಾಕಿದರು. ಕನ್ನಡದಲ್ಲಿ ಮಾತ್ರ ಮಾಡಬೇಕು ಎಂದುಕೊಂಡಿದ್ದ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯಶ್ ಅವರೇ ನಿರ್ಧಾರ ಮಾಡಿ ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ಗೆ ತೆಗೆದುಕೊಂಡು ಹೋದರು.

ಇಂದು ಆ ಪರಿಶ್ರಮ ಅವರನ್ನು ಎಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ ಎನ್ನುವುದು ಕೂಡ ನಮಗೆ ಗೊತ್ತಿದೆ. ಇಂಥ ಯಶ್ ಅವರ ಬಗ್ಗೆ ನಟ ರವಿತೇಜ ಅವರು ಹೇಳಿರುವ ಮಾತುಗಳು ಈಗ ವೈರಲ್ ಆಗುತ್ತಿದೆ. ತೆಲುಗು ಚಿತ್ರರಂಗದ ಖ್ಯಾತ ನಟ ರವಿತೇಜ ಅವರು ಪ್ರಸ್ತುತ ದಸರಾ ಹಬ್ಬಕ್ಕೆ ಬಿಡುಗಡೆ ಆಗುತ್ತಿರುವ ತಮ್ಮ ಸಿನಿಮಾ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

ಸಿನಿಮಾ ಬಗ್ಗೆ ಹಿಂದಿ ಮಾಧ್ಯಮಗಳಲ್ಲಿ ಸಹ ಇಂಟರ್ವ್ಯೂ ಕೊಡುತ್ತಿದ್ದು, ಅದರಲ್ಲಿ ನಿರೂಪಕರು ಹೇಳುವ ನಾಯಕರ ಹೆಸರನ್ನು ಕೇಳಿ ತಮಗೆ ಅನ್ನಿಸಿದ್ದನ್ನು ತಕ್ಷಣವೇ ಹೇಳುವ ರಾಪಿಡ್ ಫೈರ್ ರೌಂಡ್ ಇಡಲಾಗಿತ್ತು, ಆ ರೌಂಡ್ ನಲ್ಲಿ ರವಿತೇಜ ಅವರಿಗೆ ರಾಮ್ ಚರಣ್, ಪ್ರಭಾಸ್, ರಾಜಮೌಳಿ ಎಲ್ಲರ ಹೆಸರನ್ನು ಹೇಳಿದಾಗ, ಅವರೆಲ್ಲರ ಬಗ್ಗೆ ತಮಗೆ ಅನ್ನಿಸಿದ್ದನು ಹೇಳಿದರು.

ಬಳಿಕ ಯಶ್ ಅವರ ಹೆಸರನ್ನು ಹೇಳಿದಾಗ, “ಯಶ್ ಅವರ ಕೆಜಿಎಫ್ ಸಿನಿಮಾವನ್ನು ಮಾತ್ರ ನೋಡಿದ್ದೇನೆ, ಕೆಜಿಎಫ್ ಸಿಗೋದಕ್ಕೆ ಯಶ್ ತುಂಬಾ ಲಕ್ಕಿ..” ಎಂದು ಹೇಳಿದ್ದಾರೆ. ಈ ಮಾತು ಯಶ್ ಅವರ ಅಭಿಮಾನಿಗಳ ಆಕ್ರೋಶ ಹೆಚ್ಚಿಸಿದ್ದು, ಯಶ್ ಹಿಂದಿನ ಸಿನಿಮಾಗಳ ಮೂಲಕ ಕೂಡ ಸಾಧನೆ ಮಾಡಿದ್ದಾರೆ, ಅದನ್ನೆಲ್ಲಾ ತಿಳಿದುಕೊಂಡು ಮಾತನಾಡಿ ಎಂದಿದ್ದು, ಈ ಮಾತುಗಳನ್ನ ವಾಪಸ್ ತೆಗೆದುಕೊಳ್ಳಬೇಕು, ಯಶ್ ಅವರಿಗೆ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ನಟ ರವಿತೇಜ ಅವರನ್ನು ಒತ್ತಾಯಿಸಿದ್ದಾರೆ

Leave A Reply

Your email address will not be published.