ಅರ್ ಸಿಬಿ ಗೆ ಬಿಗ್ ಶಾಕ್! ಸ್ಟಾರ್ ಆಟಗಾರನಿಗೆ ಕೊರೊನಾ ಪಾಸಿಟಿವ್!
ಐಪಿಎಲ್ 2021ರ ಸೀಸನ್ ಸದ್ಯದಲ್ಲೆ ಶುರುವಾಗಲಿದೆ ಆದರೆ ಐಪಿಎಲ್ ತಂಡಗಳಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ ಕಟೀಣವಾದ ಬಯೋ ಬಬಲ್ ರೂಲ್ಸ್ ಇದ್ದರೂ ಕೆಲ ಆಟಗಾರರು ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (ಆರ್ಸಿಬಿ) ದೇವದತ್ ಪಡಿಕ್ಕಲ್ ಅವರು COVID-19 ಪರೀಕ್ಷಿಸಲ್ಪಟ್ಟಿದ್ದು ಪಾಸಿಟಿವ್ ವರದಿ ಬಂದ ನಂತರ ಹೋಟೆಲ್ ನಲ್ಲಿ ಕ್ಯಾರಂಟೈನ್ ಆಗಿದ್ದಾರೆ ,ಸದ್ಯ ಪಂದ್ಯಾವಳಿ ಪ್ರಾರಂಭವಾಗಲು ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿ ಆದ್ದರಿಂದ ಪ್ರಥಮ ಎರಡು ಪಂದ್ಯದಲ್ಲಿ ದೇವದತ್ ಆಲಬ್ಯರಾಗಿದ್ದಾರೆ.
ಏಪ್ರಿಲ್ 9 ರ ಶುಕ್ರವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚಾಲೆಂಜರ್ಸ್ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಆರಂಭಿಕ ಪಂದ್ಯದಿಂದ ಅರ್ಸಿಬಿ ಶುಭಾರಂಬ ಪಡೆಯಲು ಉತ್ಸುಕರಾಗಿದ್ದರು.ಸದ್ಯ ಈ ಬೆಳವಣಿಗೆ ತಂಡಕ್ಕೆ ಬಿಗ್ ಶಾಕ್ ನೀಡಿದೆ.
ಇದಕ್ಕೂ ಮೊದಲು ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ನ ನಿತೀಶ್ ರಾಣಾ ಮತ್ತು ದೆಹಲಿ ಕ್ಯಾಪಿಟಲ್ಸ್ (ಡಿಸಿ)ನ ಆಕ್ಸರ್ ಪಟೇಲ್ ಕೊರೊನಾ ಪಾಸಿಟಿವ್ ಆಗಿದ್ದರು.