ಕೆಂಪು ಕಲ್ಲು ಸಕ್ಕರೆ ಬಳಸುವ ಪ್ರತಿಯೊಬ್ಬರೂ ತಪ್ಪದೆ ನೋಡ್ಲೇಬೇಕು!

0
28

Red rock sugar Benifits :ಕಲ್ಲು ಸಕ್ಕರೆಯಲ್ಲಿ ವಿಟಮಿನ್ ಬಿ12 ಸಿಗುತ್ತದೆ. ಸಕ್ಕರೆಗಿಂತಲೂ ಕಲ್ಲುಸಕ್ಕರೆ ಹೆಚ್ಚು ಆರೋಗ್ಯಕರವಾಗಿದೆ. ಈ ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ.

1, ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಈ ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದ್ದಾಗ ರಕ್ತಹೀನತೆ ತಲೆಸುತ್ತುವುದು ಹಾಗೂ ಮೊದಲಾದ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಕಲ್ಲು ಸಕ್ಕರೆಯಲ್ಲಿ ಇರುವಂತಹ ಪೌಷ್ಟಿಕಾಂಶಗಳು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ತೊಂದರೆಯನ್ನು ಕೂಡ ನಿವಾರಣೆ ಮಾಡುವ ಶಕ್ತಿ ಈ ಕಲ್ಲು ಸಕ್ಕರೆಯಲ್ಲಿ ಇದೆ.

2, ಕೆಮ್ಮು ಹಾಗೂ ಒಣ ಕೆಮ್ಮಿನ ನಿವಾರಣೆಗೆ ಕಲ್ಲುಸಕ್ಕರೆ ಉತ್ತಮ.
3, ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಆಗ ವಾಕರಿಕೆ ಮತ್ತು ವಾಂತಿಯಂತಹ ಸಮಸ್ಸೆಗಳು ಕಾಡುತ್ತ ಇರುತ್ತವೆ. ಕೆಲವರಿಗೆ ಅಜೀರ್ಣತೆ ಉಂಟಾಗಿ ಮಲಬದ್ಧತೆ ಸಮಸ್ಯೆ ಕೂಡ ಎದುರಾಗುತ್ತದೆ. ಈ ಸಮಯದಲ್ಲಿ ಆಹಾರ ಸೇವನೆ ಮಾಡಿದ ನಂತರ ಕಲ್ಲು ಸಕ್ಕರೆಯನ್ನು ಸೇವನೆ ಮಾಡಿದರೆ ಜೀರ್ಣಕ್ರಿಯೆ ಉತ್ತಮಗೊಳಿಸಲು ಸಹಾಯವಾಗುತ್ತದೆ.

4, ಕಲ್ಲುಸಕ್ಕರೆ ಜೊತೆಗೆ ಜೀರಿಗೆಯನ್ನು ಸೇರಿಸಿ ಸೇವನೆ ಮಾಡಿದರೆ ಜೀರ್ಣಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

5, ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಕೂಡ ಉತ್ತಮವಾಗುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಕಲ್ಲುಸಕ್ಕರೆ ಉತ್ತಮವಾಗಿದೆ. ಕಣ್ಣುಗಳ ದೃಷ್ಟಿಯನ್ನು ಉಳಿಸಿಕೊಳ್ಳಲು ಹಾಗೂ ಕಣ್ಣುಗಳಲ್ಲಿ ಹೂವು ಅಥವಾ ದುರ್ಮಾಂಸ ಕಣ್ಣಿನಲ್ಲಿ ಬರದೇ ಇರುವ ಹಾಗೆ ತಡೆಗಟ್ಟಲು ಈ ಕಲ್ಲುಸಕ್ಕರೆ ಸಹಾಯ ಮಾಡುತ್ತದೆ. ನಿಮ್ಮ ಕಣ್ಣುಗಳ ದೃಷ್ಟಿ ಉತ್ತಮವಾಗಿರಲು ಪ್ರತಿ ದಿನ ಕುಡಿಯುವ ನೀರಿನಲ್ಲಿ ಒಂದಿಷ್ಟು ಕಲ್ಲು ಸಕ್ಕರೆಯನ್ನು ಹಾಕಿ ಸೇವನೆ ಮಾಡುವುದರಿಂದ ನಿಮ್ಮ ಕಣ್ಣುಗಳ ಆರೋಗ್ಯ ಉತ್ತಮವಾಗಿರುತ್ತದೆ.

6, ಇನ್ನು ಶಾಲೆಗೆ ಹೋಗುವ ಮಕ್ಕಳು ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕುಡಿದರೆ ಅವರ ಜ್ಞಾಪಕ ಶಕ್ತಿ ಕೂಡ ಹೆಚ್ಚಾಗುತ್ತದೆ ಹಾಗೂ ಉಸಿರಿನಲ್ಲಿ ತಾಜಾತನ ಹೆಚ್ಚಾಗುತ್ತದೆ.

7, ಊಟ ಮಾಡಿದ ಬಳಿಕ ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇದ್ದಾರೆ ತಿಂದ ಆಹಾರ ಹಲ್ಲುಗಳಲ್ಲಿ ಸಿಕ್ಕಿ ಹಾಕಿಕೊಂಡು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ ಹಾಗೂ ಬಾಯಿಯಲ್ಲಿ ದುರ್ವಾಸನೆಗೂ ಕೂಡ ಕಾರಣವಾಗುತ್ತದೆ. ಆದ್ದರಿಂದ ಊಟ ಆದ ಬಳಿಕ ಸಣ್ಣ ಕಲ್ಲು ಸಕ್ಕರೆಯನ್ನು ಚೀಪುವುದರಿಂದ ಬ್ಯಾಕ್ಟೀರಿಯವನ್ನು ಕೊಂದು ಹಾಕಲು ಸಹಾಯವಾಗುತ್ತದೆ.

8, ಊಟ ಮಾಡಿದ ನಂತರ ಕಲ್ಲುಸಕ್ಕರೆ ಬಡೇ ಸೊಪ್ಪು ಬೆರೆಸಿ ಸೇವನೆ ಮಾಡಿದರೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

9, ಇನ್ನು ಮೂಗಿನಿಂದ ರಕ್ತ ಸೋರುತ್ತಿದ್ದರೆ ತಕ್ಷಣವೇ ನೀರಿನಲ್ಲಿ ತುಂಡು ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿದರೆ ಮುಗಿನಿಂದ ರಕ್ತ ಬರುವ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ.

10, ವಿಶ್ರಾಂತಿ ಹಾಗೂ ಮಾನಸಿಕ ಒತ್ತಡ ದೂರವಾಗಲು ಒಂದು ಲೋಟ ನೀರಿಗೆ ಒಂದುವರೆ ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಕುಡಿಯುವುದರಿಂದ ದೇಹಕ್ಕೆ ತಕ್ಷಣವೇ ಆಯಾಸ ದೂರವಾಗುತ್ತದೆ ಹಾಗೂ ದೇಹಕ್ಕೆ ನವಚೈತನ್ಯ ಸಿಗುತ್ತದೆ.

A must see for everyone who uses red rock sugar!

Red rock sugar Benifits :ಇನ್ನೂ ಕೆಂಪು ಕಲ್ಲು ಸಕ್ಕರೆ ಹಾಗೂ ಬಿಳಿ ಕಲ್ಲು ಸಕ್ಕರೆ ಇರುವ ವ್ಯತ್ಯಾಸವೇನು ಎಂದರೆ ಬಿಳಿ ಸಕ್ಕರೆಗೆ ಹೋಲಿಕೆ ಮಾಡಿದರೆ ಕೆಂಪು ಕಲ್ಲು ಸಕ್ಕರೆಯಲ್ಲಿ ಸಾಕಷ್ಟು ಔಷಧಿ ಗುಣಗಳು ಇದೆ. ಕೆಂಪು ಕಲ್ಲು ಸಕ್ಕರೆಯಲ್ಲಿ ದೇಹಕ್ಕೆ ತಂಪು ನೀಡುವ ಶಕ್ತಿಯನ್ನು ಹೊಂದಿದೆ ಮತ್ತು ಶ್ವಾಸಕೋಶ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.ಗಂಟಲು ಕೆರೆತ,ಕೆಮ್ಮು ಇದ್ದಾಗ ಬಿಳಿಸಕ್ಕರೆ ಸೇವನೆ ಮಾಡುವ ಬದಲು ಕೆಂಪು ಕಲ್ಲು ಸಕ್ಕರೆ ಸೇವನೆ ಮಾಡಿದರೆ ಒಳ್ಳೆಯದು. ಸಕ್ಕರೆ ಕಾಯಿಲೆ ಸಮಸ್ಯೆ ಇರುವವರು ಕಲ್ಲು ಸಕ್ಕರೆಯನ್ನು ಸೇವನೆ ಮಾಡಬಾರದು.

LEAVE A REPLY

Please enter your comment!
Please enter your name here