South Actress: ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ? ರಶ್ಮಿಕಾ, ತಮನ್ನಾ ಇವರ್ಯಾರು ಅಲ್ಲ!

Written by Pooja Siddaraj

Published on:

South Actress: ಭಾರತ ಚಿತ್ರರಂಗವನ್ನ ಮೊದಲೆಲ್ಲಾ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಬಾಲಿವುಡ್ ನಲ್ಲಿ ಕಲಾವಿದರಿಗೆ ಸಿಗುವ ಸಂಭಾವನೆ, ಸಿನಿಮಾ ಮೇಕಿಂಗ್, ಇದೆಲ್ಲವೂ ಅದ್ಧೂರಿಯಾಗಿರುತ್ತಿತ್ತು. ಹಾಗೆಯೇ ಹಿಂದಿ ಸಿನಿಮಾದಲ್ಲಿ ನಟಿಸಿದರೆ ಇಡೀ ಭಾರತ ನೋಡುತ್ತಿತ್ತು, ಜೊತೆಗೆ ಬೇರೆ ದೇಶಗಳಲ್ಲಿ ಕೂಡ ಬಾಲಿವುಡ್ ಸಿನಿಮಾ ನೋಡುತ್ತಾರೆ.

ಹಾಗಾಗಿ ಬಾಲಿವುಡ್ ಕಲಾವಿದರಿಗೆ ಸೌತ್ ಕಲಾವಿದರಿಗಿಂತ ಹೆಚ್ಚು ಬೇಡಿಕೆ ಮತ್ತು ಜನಪ್ರಿಯತೆ ಇರುತ್ತಿತ್ತು. ಆದರೆ ಕೆಲ ವರ್ಷಗಳಿಂದ ಈ ಟ್ರೆಂಡ್ ಇಲ್ಲ, ಈಗ ಹಿಂದಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಾವಿರ ಕೋಟಿ ಗಳಿಕೆ ಮಾಡುತ್ತಿವೆ ಸೌತ್ ಸಿನಿಮಾಗಳು. ಹಾಗೆಯೇ ನಮ್ಮ ನಾಯಕಿಯರಿಗೆ ಬಾಲಿವುಡ್ ನಲ್ಲಿ ಬೇಡಿಕೆ ಇದೆ ಎಂದರೆ ತಪ್ಪಲ್ಲ.

ಸೌತ್ ನ ಸಾಕಷ್ಟು ನಟಿಯರು ಬಾಲಿವುಡ್ ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರಶ್ಮಿಕಾ, ಪೂಜಾ ಹೆಗ್ಡೆ, ತಮನ್ನಾ ಇವರೆಲ್ಲರೂ ಇದೆ ಸಾಲಿಗೆ ಸೇರುತ್ತಾರೆ. ಇನ್ನು ಬಾಲಿವುಡ್ ನಟಿಯರು ಸೌತ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಕಾಲ ಈ ರೀತಿ ಬದಲಾಗುತ್ತಿರುವಾಗ ಪ್ರಸ್ತುತ ದಕ್ಷಿಣ ಭಾರತ ಚಿತ್ರರಂಗದ ಅತಿ ಶ್ರೀಮಂತ ನಟಿ ಯಾರು ಗೊತ್ತಾ?

ಮೊದಲ ಸ್ಥಾನದಲ್ಲಿ ಇರುವವರು ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ. ಈ ವರ್ಷ ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ನಯನ್ ಅವರು ಒಂದು ಸಿನಿಮಾಗೆ 10 ಕೋಟಿ ಸಂಭಾವನೆ ಪಡೆಯುತ್ತಾರೆ. ಇವರ ಒಟ್ಟು ಆಸ್ತಿ 165 ಕೋಟಿ ಆಗಿದೆ.
ಎರಡನೇ ಸ್ಥಾನದಲ್ಲಿ ನಟಿ ತಮನ್ನಾ ಇದ್ದಾರೆ. ಬಾಲಿವುಡ್ ನಪಿಲಿ ಸಿನಿಮಾ ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಇರುವ ತಮನ್ನಾ ಅವರಿಗು ಭಾರಿ ಬೇಡಿಕೆ ಇದೆ. ಇವರ ಒಟ್ಟು ಆಸ್ತಿ, 110 ಕೋಟಿ ರೂಪಾಯಿ.

ಮೂರನೇ ಸ್ಥಾನದಲ್ಲಿ ಇರುವವರು ನಟಿ ಅನುಷ್ಕಾ ಶೆಟ್ಟಿ, ಇತ್ತೀಚೆಗೆ ಇವರು ನಟಿಸಿದ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಸದ್ದು ಮಾಡಿತ್ತು. 41 ವರ್ಷದ ಅನುಷ್ಕಾ ಅವರ ಒಟ್ಟು ಆಸ್ತಿ 100 ಕೋಟಿ.
ನಾಲ್ಕನೇ ಸ್ಥಾನದಲ್ಲಿ ಇರುವವರು ನಟಿ ಸಮಂತಾ. ಇವರಿಗೂ ಬಾಲಿವುಡ್ ಮತ್ತು ಸೌತ್ ಎರಡು ಕಡೆ ಭಾರಿ ಬೇಡಿಕೆ ಇದೆ. ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ಸಮಂತಾ ಅವರ ಒಟ್ಟು ಆಸ್ತಿ ಸುಮಾರು 89 ಕೋಟಿ ರೂಪಾಯಿ ಆಗಿದೆ.
ಐದನೇ ಸ್ಥಾನದಲ್ಲಿ ನಟಿ ಪೂಜಾ ಹೆಗ್ಡೆ ಇದ್ದು, ಇವರ ಒಟ್ಟು ಆಸ್ತಿ 50 ಕೋಟಿ ರೂಪಾಯಿ ಎನ್ನಲಾಗಿದೆ.
ಆರನೇ ಸ್ಥಾನದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದು, ಇವರ ಒಟ್ಟು ಆಸ್ತಿ 28 ಕೋಟಿ ರೂಪಾಯಿ ಎನ್ನಲಾಗಿದೆ.

Leave a Comment