ಕೃತಜ್ಞತೆ ಇಲ್ಲದ ನಟಿ: ರಶ್ಮಿಕಾ ಮುಟ್ಟಿ ನೋಡಿಕೊಳ್ಳುವಂತೆ ಕೌಂಟರ್ ಕೊಟ್ಟ ರಿಷಬ್ ಶೆಟ್ಟಿ

0
36
Rishab shetty about Rashmika

Rishab shetty about Rashmika ರಶ್ಮಿಕಾ ಮಂದಣ್ಣ(Rashmika Mandanna) ಪ್ರಸ್ತುತ ದಕ್ಷಿಣ ಸಿನಿಮಾಗಳು ಮತ್ತು ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದರೂ ಕೂಡಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ತಮ್ಮ ಕಿರಿಕ್ ಪಾರ್ಟಿ (Kirik Party)ಸಿನಿಮಾದ ಮೂಲಕ ಎನ್ನುವುದು ಸತ್ಯವಾದ ವಿಷಯವಾಗಿದೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಅವರ ನಿರ್ದೇಶನದ ಕಾಂತರಾ(Kantara) ಸಿನಿಮಾ ಇಡೀ ದೇಶದಲ್ಲಿ ಯಶಸ್ಸನ್ನು ಕಂಡು ಸಂಚಲನ ಸೃಷ್ಟಿಸಿದೆ. ಕಾಂತರಾ ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ರಶ್ಮಿಕಾ(Rashmika) ತಾನು ಇನ್ನೂ ಆ ಸಿನಿಮಾವನ್ನು ವೀಕ್ಷಣೆ ಮಾಡಿಲ್ಲ ಎಂದು ಹೇಳುವ ಮೂಲಕ ಸಿಕ್ಕಾಪಟ್ಟೆ ಟ್ರೋಲಾಗಿದ್ದರು. ಕನ್ನಡಿಗರು ನಟಿಗೆ ಕೃತಜ್ಞತೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನು ಹೊರಹಾಕಿದ್ದರು.

ಆದಿಪುರುಷ್ ಸಿನಿಮಾಕ್ಕೆ ಹೊಸ ಕಂಟಕ: ಸೆನ್ಸಾರ್ ಬೋರ್ಡ್ ಗೆ ನೋಟೀಸ್ ಜಾರಿ ಮಾಡಿದ ಕೋರ್ಟ್

ಇದೀಗ ರಿಷಬ್ ಶೆಟ್ಟಿ(Rishab Shetty) ಅವರು ವಿ ವಾ ದ ದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ವೈರಲ್ ಆದ ಒಂದು ಹಳೆಯ ಸಂದರ್ಶನದ ವಿಡಿಯೋ ಕ್ಲಿಪ್ ನಲ್ಲಿ ರಶ್ಮಿಕಾ ತಮ್ಮ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡುವಾಗ ಹೆಸರನ್ನು ಹೇಳದೇ ಸನ್ನೆಯ ಮೂಲಕ ವಿಚಿತ್ರ ವರ್ತನೆಯನ್ನು ತೋರಿಸಿದ್ದು ಅನೇಕರ ಸಿಟ್ಟಿಗೆ ಕಾರಣವಾಗಿತ್ತು. ಕನ್ನಡದ ಸಿನಿಮಾ ಅಭಿಮಾನಿಗಳು ರಶ್ಮಿಕಾಗೆ ಸ್ವಲ್ಪವೂ ಕೃತಜ್ಞತೆ ಎನ್ನುವುದೇ ಇಲ್ಲ, ಕನ್ನಡಿಗರು ರಶ್ಮಿಕಾ ಸಿನಿಮಾಗಳನ್ನು ನೋಡಬೇಡಿ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಿಟ್ಟನ್ನು ವ್ಯಕ್ತಪಡಿಸಿದ್ದರು. ರಶ್ಮಿಕಾ ನ ಬ್ಯಾನ್ ಮಾಡಬೇಕು ಎನ್ನುವ ಮಾತು ಕೂಡಾ ಕೇಳಿ ಬಂದಿತ್ತು.

ಮಾಧ್ಯಮವೊಂದರ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಕಾಮೆಂಟ್ ಗಳಿಗೆ ರಿಷಬ್ ಶೆಟ್ಟಿಯವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಹಲವು ಕಲಾವಿದರನ್ನು ಲಾಂಚ್ ಮಾಡಿದ್ದು ಹಲವು ನಿರ್ದೇಶಕರು ನಿರ್ಮಾಪಕರು ಅವರಿಗೆ ಅವಕಾಶಗಳನ್ನು ನೀಡಿದ್ದಾರೆ. ಅಂತಹ ಜನರ ದೊಡ್ಡ ಪಟ್ಟಿಯೇ ಇದೆ ಎಂದು ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಕಿರಿಕ್ ಪಾರ್ಟಿ(Kirik Party) ಸಿನಿಮಾ ಆರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ತ್ರೋ ಬ್ಯಾಕ್ ಫೋಟೋ ಒಂದನ್ನು ಹಂಚಿಕೊಂಡ ರಿಷಬ್ ಶೆಟ್ಟಿಯವರು ರಶ್ಮಿಕಾ ಮಂದಣ್ಣ ಅವರನ್ನು ಬಿಟ್ಟು ಉಳಿದ ಎಲ್ಲರನ್ನೂ ಟ್ಯಾಗ್ ಮಾಡಿ ಕೌಂಟರ್ ನೀಡಿದ್ದಾರೆ.

LEAVE A REPLY

Please enter your comment!
Please enter your name here