ಕನ್ನಡ ಕಿರುತೆರೆಯಲ್ಲಿ ಒಳ್ಳೆಯ ರೀಚ್ ಪಡೆದುಕೊಳ್ಳುತ್ತಿರುವ ಧಾರವಾಹಿ ಸತ್ಯ. ಈ ಧಾರವಾಹಿ ತಮಿಳಿನ ರಿಮೇಕ್ ಆಗಿದ್ದರು ಕನ್ನಡದಲ್ಲಿ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸತ್ಯ ಧಾರವಾಹಿಗೆ ಅಭಿಮಾನಿ ಬಳಗ ಕೂಡ ಇದೆ. ಈ ಧಾರವಾಹಿಯಲ್ಲಿ ನಾಯಕಿ ಸತ್ಯ ಪಾತ್ರದಲ್ಲಿ ನಟಿ ಗೌತಮಿ ಜಾಧವ್ ನಟಿಸುತ್ತಿದ್ದಾರೆ. ಈ ಧಾರವಾಹಿ ಇವರಿಗೆ ಒಳ್ಳೆಯ ಕ್ರೇಜ್ ಮತ್ತು ಜನಪ್ರಿಯತೆ ತಂದುಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ..
ಸತ್ಯ ಧಾರವಾಹಿಯಲ್ಲಿ ನಾಯಕಿ ಸತ್ಯ ಪಾತ್ರ ಮಾತ್ರವಲ್ಲದೆ ಬೇರೆ ಪಾತ್ರಗಳು ಕೂಡ ಜನರಿಗೆ ತುಂಬಾ ಇಷ್ಟವಾಗಿದೆ. ಎಲ್ಲಾ ಪಾತ್ರಗಳನ್ನು ಮತ್ತು ಕಥೆಗಳನ್ನು ಜನರು ಅಷ್ಟೇ ಇಷ್ಟಪಡುತ್ತಿದ್ದಾರೆ. ಈ ಧಾರವಾಹಿಯಲ್ಲಿ ವಿಲ್ಲನ್ ಕೀರ್ತನ ಪಾತ್ರ ಎಲ್ಲರಿಗೂ ಗೊತ್ತೇ ಇದೆ. ಕೀರ್ತನ ಗಂಡನ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದನ ಬಗ್ಗೆ ನಿಮಗೆ ಗೊತ್ತಾ? ಅವರ ನಿಜವಾದ ಹೆಸರೇನು? ಅವರ ಫ್ಯಾಮಿಲಿಯಲ್ಲಿ ಯಾರೆಲ್ಲಾ ಇದ್ದಾರೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..
ಸತ್ಯ ಧಾರವಾಹಿಯಲ್ಲಿ ಕೀರ್ತನ ಗಂಡನ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದನ ಹೆಸರು ರೂಪೇಶ್ ಕುಮಾರ್. ಇವರು ಮೂಲತಃ ಉತ್ತರ ಕರ್ನಾಟಕದ ಗುಲ್ಬರ್ಗ ಕಡೆಯವರು. ರೂಪೇಶ್ ಕುಮಾರ್ ಅವರ ತಂದೆ ವೀರನಪ್ಪ ತಿಮ್ಮಾಜಿ ಅವರು ಸ್ವಾತಂತ್ರ್ಯ ಹೋರಾಟಗರರಂತೆ. ರೂಪೇಶ್ ಕುಮಾರ್ ಅವರು ಇಂದು ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿದ್ದಾರೆ. ರೂಪೇಶ್ ಕುಮಾರ್ ಅವರು ಸತ್ಯ ಧಾರವಾಹಿ ಮಾತ್ರವಲ್ಲ, ರಾಮಾಚಾರಿ ಧಾರವಾಹಿಯಲ್ಲು ನಟಿಸುತ್ತಿದ್ದಾರೆ.
ರಾಮಾಚಾರಿ ಧಾರವಾಹಿಯಲ್ಲಿ ಶ್ರುತಿ ಆಫೀಸ್ ನ ಬಾಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ರೂಪೇಶ್ ಕುಮಾರ್. ಇವರು ಹೆಚ್ಚಾಗಿ ನೆಗಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾಸಿಟಿವ್ ಪಾತ್ರಗಳಲ್ಲಿ ನಟಿಸಿದ್ದು ಕಡಿಮೆ ಎಂದೇ ಹೇಳಬಹುದು. ರೂಪೇಶ್ ಅವರು ಪ್ರೊಫೆಷನಲ್ ಆಗಿ ನಟನೆ ಕಲಿತಿದ್ದಾರೆ, ಮುಂಬೈನಲ್ಲಿರುವ ರಮಾನಂದ್ ಸಾಗರ್ ಸಂಸ್ಥೆಯಲ್ಲಿ ನಟನೆ ಕಲಿತರು, ಅಲ್ಲಿದ್ದಾಗಲೇ ಅವರಿಗೆ 2 ಧಾರವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಇವರು ಕನ್ನಡದಲ್ಲಿ ರಂಗೋಲಿ, ರಾಧಾ ಕಲ್ಯಾಣ, ಲಕ್ಷ್ಮಿ ಬಾರಮ್ಮ, ಅಗ್ನಿಸಾಕ್ಷಿ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಹಿಂದಿ ಧಾರವಾಹಿಯಲ್ಲಿ ಕೂಡ ನಟಿಸಿದ್ದು, ಸ್ಟಾರ್ ಪ್ಲಸ್ ಚಾನೆಲ್ ನ ಸಾಯಿಬಾಬಾ, ನಾಗಕನ್ನಿಕೆ ಧಾರವಾಹಿಯಲ್ಲಿ ಕೂಡ ನಟಿಸಿದ್ದಾರೆ. ಮಹಾಭಾರತ ಧಾರವಾಹಿಯಲ್ಲಿ ಕೂಡ ಇವರು ನಟಿಸಿದ್ದರು. ಕಿರುತೆರೆ ಜೊತೆಗೆ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮೀನಾ ಬಜಾರ್, ಭಾಗ್ಯರಾಜ್, ದುನಿಯಾ2 ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ ರೂಪೇಶ್ ಕುಮಾರ್.
ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ತಮ್ಮ ಫ್ಯಾಮಿಲಿ ಜೊತೆಗೆ ಇರುವ ಫೋಟೋಸ್ ಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಫ್ಯಾಮಿಲಿ ಗ್ರೂಪ್ ಕೂಡ ಇದ್ದು, ಅದರಲ್ಲಿ ತಾಯಿ ಜೊತೆಗೆ ತಮಾಷೆಯ ರೀಲ್ಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.