ಬಿಗ್ ಬಾಸ್ ಆಟದಿಂದ ರೂಪೇಶ್ ರಾಜಣ್ಣ ಔಟ್: ಅಂತಿಮ ಕ್ಷಣಗಳಲ್ಲಿ ಸಾಥ್ ನೀಡದ ಅದೃಷ್ಟ
ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತರ (Bigg Boss Kannada) ಆಟ ಮುಗಿಯುವ ಸಮಯ ಹತ್ತಿರವಾಗಿದೆ. ಅಂತಿಮ ಘಟ್ಟವನ್ನು ತಲುಪಿರುವ ಬಿಗ್ ಬಾಸ್ ಆಟದಲ್ಲಿ ಟ್ರೋಫಿ ಗೆಲ್ಲೋರು ಯಾರು ? ಎನ್ನುವ ಪ್ರಶ್ನೆ ಕಾಡುತ್ತಿದೆ. ಟಾಪ್ ಐದಕ್ಕೆ ಬಂದಿದ್ದ ಸ್ಪರ್ಧಿಗಳಲ್ಲಿ ಈಗಾಗಲೇ ದಿವ್ಯಾ ಉರುಡುಗ(Divya Uruduga) ಎಲಿಮಿನೇಷನ್ (Elimination) ಆಗಿ ಮನೆಯಿಂದ ಹೊರ ಬಂದಾಗಿದೆ. ಅದಾದ ಮೇಲೆ ಮನೆಯಲ್ಲಿ ಉಳಿದಿದ್ದು ನಾಲ್ಕು ಜನ ಸ್ಪರ್ಧಿಗಳು. ಇವರಲ್ಲಿ ಯಾರು ಹೊರಗೆ ಬರಲಿದ್ದಾರೆ, ಯಾರೆಲ್ಲಾ ಮನೆಯಲ್ಲಿ ಕೊನೆಯ ಕ್ಷಣದ ವರೆಗೂ ಉಳಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲು ಆರಂಭಿಸಿದೆ.
ಹೌದು, ಇದೀಗ ಬಿಗ್ ಬಾಸ್ ಶೋ ದಿಂದ ಹೊರ ಬಂದಿರುವ ಹೊಸದೊಂದು ಸುದ್ದಿಯ ಪ್ರಕಾರ ಮನೆಯಿಂದ ರೂಪೇಶ್ ರಾಜಣ್ಣ(Roopesh Rajanna) ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದ್ದು, ರೂಪೇಶ್ ರಾಜಣ್ಣ ಅವರ ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ. ರೂಪೇಶ್ ರಾಜಣ್ಣ ಎಲಿಮಿನೇಟ್ ಆಗಿದ್ದು ಅವರ ಅಭಿಮಾನಿಗಳಿಗೆ ಬಹಳ ನಿರಾಸೆ ಮೂಡಿಸಿದೆ. ಕನ್ನಡ ಪರ ಹೋರಾಟಗಾರನಾಗಿ ಜನಪ್ರಿಯತೆ ಪಡೆದಿದ್ದು ರೂಪೇಶ್ ರಾಜಣ್ಣ (Roopesh Rajanna) ಈ ಬಾರಿ ಬಿಗ್ ಬಾಸ್ ಮನೆಯನ್ನು ನವೀನರ ಸಾಲಿನಲ್ಲಿ ಒಬ್ಬ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು.
ಕೊನೆಗೆ ನವೀನರಲ್ಲಿ ಫಿನಾಲೆ ಪ್ರವೇಶಿಸಿದ ಏಕೈಕ ಸ್ಪರ್ಧಿಯಾಗಿ ಉಳಿದುಕೊಂಡರು. ಅನ್ಯ ಸ್ಪರ್ಧಿಗಳಿಗೆ ಟಫ್ ಪೈಪೋಟಿ ನೀಡುತ್ತಾ, ಜನರ ಮನಸ್ಸನ್ನು ಗೆದ್ದು ಟಾಪ್ 5 ರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು.
ಆದರೆ ಈಗ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತರ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ಅವರ ಬಿಗ್ ಬಾಸ್ ಆಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇನ್ನು ಮನೆಯಲ್ಲಿ ರೂಪೇಶ್ ಶೆಟ್ಟಿ(Roopesh Shetty), ರಾಕೇಶ್ ಅಡಿಗ(Rakesh Adiga) ಮತ್ತು ದೀಪಿಕಾ ದಾಸ್(Deepika Das) ಟಾಪ್ ತ್ರಿ ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದಾರೆ.