ತುಳು ನಾಡಿನವರು ಹೆಣ್ಣಿಗೆ ಗೌರವ ಕೊಡ್ತಾರೆ: ಸಾನ್ಯಾ ಜೊತೆಗಿನ ಘಟನೆ ಬಗ್ಗೆ ರೂಪೇಶ್ ಶೆಟ್ಟಿ ಸ್ಪಷ್ಟನೆ

0
40

Roopesh shetty ಕನ್ನಡ ಬಿಗ್ ಬಾಸ್(Big Boss Kannada) ಸೀಸನ್ ಒಂಬತ್ತರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ ನಂತರ ಈ ಬಾರಿಯ ಸೀಸನ್ ಗೆ ತೆರೆ ಬಿದ್ದಾಗಿದೆ. ಇನ್ನು ಓಟಿಟಿ ಯಿಂದ ಬಿಗ್ ಬಾಸ್ ಜರ್ನಿ ಆರಂಭಿಸಿದ ರೂಪೇಶ್ ಶೆಟ್ಟಿ(Roopesh Shetty) ಅವರ ಟಿವಿ ಬಿಗ್ ಬಾಸ್ ಟ್ರೋಫಿ (Big Boss Winner) ಗೆಲ್ಲುವವರೆಗೆ ಯಶಸ್ವಿ ಪಯಣವನ್ನು ಮಾಡಿದ್ದು, ಈಗ ಗೆಲುವಿನ ನಗೆ ಬೀರಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ಘಟನೆಯಿಂದ ರೂಪೇಶ್ ಶೆಟ್ಟಿ ಬಹಳ ನೊಂದಿದ್ದರು. ಹೌದು, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ (Sanya Iyyer) ಮೂವರು ಕ್ಯಾಪ್ಟನ್ ರೂಮ್ ಬೆಡ್ ಮೇಲೆ ಮಲಗಿ ಮಾತಾಡುತ್ತಿದ್ದ ವಿಚಾರಕ್ಕೆ ಸುದೀಪ್ (Sudeep) ಅವರು ಸಹಾ ಖಡಕ್ ಎಚ್ಚರಿಕೆಯನ್ನು ನೀಡಿದ್ದರು.

ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ರೂಪೇಶ್ ಶೆಟ್ಟಿ ಈ ವಿಚಾರಕ್ಕೆ ಮಾದ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ರೂಪೇಶ್ ಶೆಟ್ಟಿ ಮಾತನಾಡುತ್ತಾ, ಈ ಘಟನೆ ನಡೆದಿದ್ದು ಮೂರನೇ ವಾರದಲ್ಲಿ. ಓಟಿಟಿಗೆ ಕಾಲಿಟ್ಟಾಗ ಮನೆಯಲ್ಲಿ ಕ್ಯಾಮೆರಾಗಳಿವೆ ಎನ್ನುವ ಬಗ್ಗೆ ಮೊದಲೆರಡು ದಿನಗಳ ಕಾಲ ಎಚ್ಚರವಾಗಿರುತ್ತೇವೆ. ಹೊರಗೆ ಜನ ನೋಡುತ್ತಾ ಇರುತ್ತಾರೆ ಎನ್ನುವುದು ತಲೆಯಲ್ಲಿರುತ್ತದೆ. ಹೊಸ ದಿನ ಹಾಡಿನೊಂದಿಗೆ ಆರಂಭವಾದಾಗ, ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ದಿನಚರಿಗೆ ಹೊಂದಿಕೊಂಡ ಮೇಲೆ ಹೊರಗಡೆ ಪ್ರಪಂಚದ ಬಗ್ಗೆ ಮರೆತು ಬಿಡ್ತೀವಿ.

ನಮ್ಮವರು ಜೊತೆ ಇದ್ದಾಗ ಜನ ನಮ್ಮನ್ನು ನೋಡ್ತಾ ಇದ್ದಾರೆ ಅನ್ನೋದು ಮರೆತು ಬಿಡ್ತೀವಿ. ಸುದೀಪ್ ಸರ್(Kichcha Sudeep) ಆ ವಿಚಾರವನ್ನು ಹೇಳಿದ ಸಂದರ್ಭದಲ್ಲಿ ಶಾ ಕ್ ಆಗಿತ್ತು. ಟಾಸ್ಕ್ ಸಮಯದಲ್ಲಿ ಬ್ಲೈಂಡ್ ಕ್ಲೋಸ್ ಆದಾಗ ಮಾತ್ರ ನಾವು ಕ್ಯಾಪ್ಟನ್ ರೂಮ್ ಬಾತ್ ರೂಮ್ ಬಳಸಬಹುದು. ಆದರೆ ನಾವು ಅಲ್ಲಿ ಬೆಡ್ ಬಳಸಿದ್ದು ತಪ್ಪು. ನನ್ನ ಫೋಕಸ್ ಯಾವ ಕಡೆ ಇರಬೇಕು ಎನ್ನುವುದಕ್ಕಾಗಿಯೇ ಖಾರವಾಗಿ ಯಾಕೆ ಹೇಳಿದ್ರು. ನಾನು ಎಮೋಷನಲ್ ಪರ್ಸನ್ ಆಗಿರೋದ್ರಿಂದ ಏನೇನೋ ಆಲೋಚನೆ ಮಾಡುತ್ತೇನೆ. ನಾನು ತುಳು ಬೆಲ್ಟ್ ನಿಂದ ಬಂದವನು. ಅಲ್ಲಿ ಜನರು ಸಂಪ್ರದಾಯಗಳು ಮತ್ತು ಆಚರಣೆಗೆ ಎಷ್ಟು ಬೆಲೆ ಕೊಡುತ್ತಾರೆಂದು ನಿಮಗೆ ತಿಳಿದೇ ಇದೆ.

ನಾವು ಹುಡುಗಿಯರನ್ನು ಬಹಳ ಗೌರವದಿಂದ ನೋಡುತ್ತೇವೆ. ಆಕೆ ನನ್ನ ಕ್ಲೋಸ್ ಫ್ರೆಂಡ್ ಆದ ಕಾರಣ ನಾವು ಫ್ರೆಂಡ್ಲಿಯಾಗಿ ವರ್ತಿಸುತ್ತಿದ್ದೆವು ಅಷ್ಟೇ. ಸರ್ ಆ ವಿಚಾರ ಹೇಳಿದಾಗ ಶಾ ಕ್ ಆಯ್ತು. ಗುರೂಜಿ(Guruji) ಮತ್ತು ನಾವು ಅಲ್ಲಿ ಮಾತಾಡುತ್ತಿದ್ದೆವು ಅಷ್ಟೇ ಎಂದಿದ್ದಾರೆ ರೂಪೇಶ್ ಶೆಟ್ಟಿ. ನಾನು ಮಂಗಳೂರಿನಿಂದ ಬಿಗ್ ಬಾಸ್ ಗೆ ಬಂದಿರುವುದರಿಂದ ಅಲ್ಲಿನ ಜನ ಹೆಮ್ಮೆ ಪಟ್ಟಿರುತ್ತಾರೆ. ಆದರೆ ಈ ಘಟನೆಯಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದ್ಯಾ? ಎನ್ನುವ ಆಲೋಚನೆ ಮೂಡಿತ್ತೆನ್ನುವ ಮಾತು ಹೇಳಿದ್ದಾರೆ ರೂಪೇಶ್ ಶೆಟ್ಟಿ. ಇನ್ನು ಆ ಘಟನೆ ನನ್ನ ಮನಸ್ಸಿಗೆ ಮುಟ್ಟಿದ ಕಾರಣದಿಂದಾಗಿ ನಾನು ಭಾವುಕನಾಗಿ ಬಿಟ್ಟೆ.

ಯಾರಿಗೂ ತೊಂದರೆ ನೀಡದೇ, ಯಾರ ಭಾವನೆಗೂ ನೋವು ಮಾಡದೇ ಒಳ್ಳೆಯ ವ್ಯಕ್ತಿಯಾಗಿರಬೇಕು ಎನ್ನುವುದು ನನ್ನ ಜೀವನದ ಪಾಲಿಸಿಯಾಗಿದ್ದು, ಇಷ್ಟು ವರ್ಷ ಬದುಕಿದ್ದ ರೀತಿಗೆ ಆ ಘಟನೆ ಕಪ್ಪು ಚುಕ್ಕಿ ಆಗಿದೆಯಾ ಎನ್ನುವ ಭಾವನೆ ಮೂಡಿತ್ತು. ನಾನು ಆಗ ಮನೆಯಿಂದ ಹೊರಗೆ ಹೋಗಲು ರೆಡಿಯಾಗಿದ್ದೆ, ನನ್ನಿಂದ ಬಿಗ್ ಬಾಸ್ ಮನೆಗೆ ಅ ವ ಮಾ ನ ಆಗಬಾರದೆನ್ನುವುದು ನನ್ನ ಆಲೋಚನೆಯಾಗಿತ್ತು. ಆದರೆ ಅನಂತರ ಸುದೀಪ್ ಸರ್ ಅವರು ಮಾತನಾಡಿ ಎಲ್ಲವನ್ನೂ ಅರ್ಥ ಮಾಡಿಸಿದರು ಎಂದಿದ್ದಾರೆ ಸಹಾ ರೂಪೇಶ್ ಶೆಟ್ಟಿ(Roopesh Shetty).

LEAVE A REPLY

Please enter your comment!
Please enter your name here