Royal Challengers Bangalore: ಪ್ರತಿ ಋತುವಿನಲ್ಲಿ ಟ್ರೋಫಿ ಗೆಲ್ಲುವ ಉದ್ದೇಶದಿಂದ ಟೂರ್ನಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷವೂ ಅದೇ ಉದ್ದೇಶದಿಂದ ಮೈದಾನಕ್ಕಿಳಿಯಲು ಪ್ರಯತ್ನಿಸಲಿದೆ. ಆದಾಗ್ಯೂ, ಆರ್‌ಸಿಬಿಗೆ, ಐಪಿಎಲ್‌ನ ಎಲ್ಲಾ ಸೀಸನ್‌ಗಳು ದುಃಸ್ವಪ್ನಕಂಡಂತಾಗಿದೆ . ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಟೂರ್ನಿ ಆರಂಭಕ್ಕೂ ಮುನ್ನ ಉತ್ತಮ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಗಾಯಕ್ಕೆ ತುತ್ತಾಗಿರುವುದು ತಂಡದ ಸಂಕಷ್ಟವನ್ನು ಹೆಚ್ಚಿಸಿದೆ. ಗಾಯದಿಂದಾಗಿ ಈ ಬ್ಯಾಟ್ಸ್‌ಮನ್ ತಂಡದಿಂದ ಹೊರಗುಳಿದಿದ್ದಾರೆ.
IPL 2023 ರಲ್ಲಿ ರಿಷಬ್ ಪಂತ್ ಕಾಣಿಸಿಕೊಳ್ಳುತ್ತಾರಾ?ಪಾಂಟಿಂಗ್ ನೀಡಿದ್ರು ಈ ಸುದ್ದಿ!
ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭರ್ಜರಿ ಸ್ಕೋರ್ ಮಾಡಿದ್ದ ರಜತ್ ಪಾಟಿದಾರ್ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ ಸೀಸನ್‌ನ ಅರ್ಧದಷ್ಟು ಪಂದ್ಯದಿಂದ ಹೊರಗುಳಿಯಬಹುದು. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ತಂಡದ ತರಬೇತಿ ಶಿಬಿರಕ್ಕೂ ಮುನ್ನ ಪಾಟಿದಾರ್ ಗಾಯಗೊಂಡಿದ್ದಾರೆ. ಪಾಟಿದಾರ್‌ಗೆ 3 ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. MRI ಸ್ಕ್ಯಾನ್ ಮಾಡಿದ ನಂತರವೇ ಪಾಟಿದಾರ್ ಫಿಟ್ ಇದ್ದಾರಯೆ ಎಂದು ತಿಳಿಯಲಿದೆ. ತಂಡಕ್ಕೆ ಸೇರುವ ಮೊದಲು ಅವರು ಎನ್‌ಸಿಎಯಿಂದ ಅನುಮೋದನೆ ಪಡೆಯಬೇಕಾಗುತ್ತದೆ.
ಐಪಿಎಲ್ ಆರಂಭಕ್ಕೂ ಮುನ್ನ ಈ ತಂಡಕ್ಕೆ ದೊಡ್ಡ ಪೆಟ್ಟು!ಈ ಅನುಭವಿ ಆಟಗಾರ ಇಡೀ ಸೀಸನ್ ನಿಂದ ಹೊರಕ್ಕೆ!
2022ರ ಐಪಿಎಲ್‌ನಲ್ಲಿ ಭಾರೀ ಬ್ಯಾಟಿಂಗ್
2022 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರಜತ್ ಪಾಟಿದಾರ್ ಅದ್ಭುತ ಬ್ಯಾಟಿಂಗ್ ಮಾಡಿದರು. ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಪಾಟಿದಾರ್ ಅವರನ್ನು ಖರೀದಿಸದಿದ್ದರೂ, ವಿಕೆಟ್ ಕೀಪರ್ ಲವ್ನಿತ್ ಸಿಸೋಡಿಯಾ ಗಾಯಗೊಂಡ ನಂತರ Royal Challengers Bangalore ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು . RCB ಗಾಗಿ, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ನಂತರ ಪಾಟಿದಾರ್ 2022 ರ IPL ನಲ್ಲಿ ಅತಿ ಹೆಚ್ಚು ರನ್ ಗಳಿಸಿದರು. ಆಡಿದ 8 ಪಂದ್ಯಗಳಲ್ಲಿ 333 ರನ್ ಗಳಿಸಿದ್ದರು.