Rukmini Vasanth: ವಿಜಯ್ ದೇವರಕೊಂಡ ಜೊತೆಗೆ ನಟಿಸಲು ರುಕ್ಮಿಣಿಗೆ ಆಫರ್! ಎರಡನೇ ರಶ್ಮಿಕಾ ಆಗ್ತಾರಾ ರುಕ್ಮಿಣಿ?

0 1

Rukmini Vasanth: ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನಟಿ ರುಕ್ಮಿಣಿ ವಸಂತ್ ಈಗ ಕರ್ನಾಟಕದ ಕ್ರಶ್ ಎಂದು ಹೇಳಿದರೆ ತಪ್ಪಲ್ಲ. ಈಕೆ ನಟನೆ ಶುರು ಮಾಡಿದ್ದು ಕನ್ನಡದ ಬೀರ್ಬಲ್ ಸಿನಿಮಾ ಮೂಲಕ. ನಟಿಸಿದ್ದು ಕೆಲವೇ ಸಿನಿಮಾ ಆದರೂ ನಟನೆಯ ಮೂಲಕ ಅಭಿಮಾನಿಗಳ ಫೇವರೆಟ್ ಆಗಿರುವ ನಟಿ ರುಕ್ಮಿಣಿ ಅವರು ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ರುಕ್ಮಿಣಿ ವಸಂತ್ ಅವರು ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಈ ಎರಡು ಸಿನಿಮಾಗಳು ಕೂಡ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ತೆರೆಕಂಡು, ಎರಡು ಭಾಷೆಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಹಾಗೆಯೇ ಎಲ್ಲಾ ಭಾಷೆಗಳಲ್ಲಿ ರುಕ್ಮಿಣಿ ಅವರಿಗೆ ಬೇಡಿಕೆ ಇದೆ. ಇದರಿಂದ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ರುಕ್ಮಿಣಿ ಅವರಿಗೆ ರುಕ್ಮಿಣಿ ಅವರಿಗೆ ಬಹಳಷ್ಟು ಅವಕಾಶಗಳು ಬರುತ್ತಿದೆ.

ಇದೀಗ ರುಕ್ಮಿಣಿ ವಸಂತ್ ಅವರಿಗೆ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಶ್ರೀಲೀಲಾ ಅವರು ಇದೇ ಪಾತ್ರಕ್ಕೆ ಆಯ್ಕೆಯಾಗಿದ್ದರು. ಆದರೆ ಶ್ರೀಲೀಲಾ ಅವರಿಗೆ ಡೇಟ್ಸ್ ಸಮಸ್ಯೆ ಆಗಿರುವ ಕಾರಣ ಅವರಿಗೆ ಅವರು ಸಿನಿಮಾ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾತ್ರಕ್ಕೆ ರುಕ್ಮಿಣಿ ಅವರನ್ನು ಸಂಪರ್ಕಿಸಲಾಗಿದೆಯಂತೆ.

ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ, ರುಕ್ಮಿಣಿ ಅವರು ಈ ಪಾತ್ರವನ್ನು ಒಪ್ಪಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವುದು ಕೂಡ ಕನ್ಫರ್ಮ್ ಆಗಿಲ್ಲ. ಆದರೆ ಈ ವಿಚಾರ ತಿಳಿದ ಬಳಿಕ ನೆಟ್ಟಿಗರು ಮಾತ್ರ, ರುಕ್ಮಿಣಿ ಅವರಿಗೆ ಅವಕಾಶ ಸಿಕ್ಕಿ, ಅವರು ತೆಲುಗು ಚಿತ್ರಗಳಲ್ಲಿ ನಟಿಸಲು ಶುರು ಮಾಡಿದರೆ, ಎರಡನೇ ರಶ್ಮಿಕಾ ಆಗಬಹುದು ಎಂದು ಹೇಳುತ್ತಿದ್ದಾರೆ.

Leave A Reply

Your email address will not be published.