ಅಪ್ಪಿ ತಪ್ಪಿಯೂ ಮನೆಯಲ್ಲಿ ಓಡುವ ಕುದುರೆಯ ಪೇಂಟಿಂಗ್ ಹೀಗೆ ಹಾಕಬೇಡಿ!

0
61

Running horse vastu in kannada ಮನೆಯಲ್ಲಿ ಓಡುವ ಕುದುರೆಯ ಚಿತ್ರ ಅಥವಾ ಪೇಂಟಿಂಗ್ ಅನ್ನು ಹೇಗೆ ಹಾಕುವುದು ಸಕಾರಾತ್ಮಕತೆಯನ್ನು ತರುತ್ತದೆ?ಮನೆಯಲ್ಲಿ ಹಾರ್ಸ್ ಪೇಂಟಿಂಗ್ ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯಲು, ವಾಸ್ತು ಶಾಸ್ತ್ರದಲ್ಲಿ ನೀಡಲಾದ ಕೆಲವು ಕ್ರಮಗಳನ್ನು ಅಳವಡಿಸಿಕೊಂಡರೆ, ನಿಮ್ಮ ಶ್ರಮವು ಸುಲಭವಾಗಿ ಫಲ ನೀಡುತ್ತದೆ. ನಿಮ್ಮ ಜೀವನದಲ್ಲಿ ನೀವು ಯಾವಾಗಲೂ ಮುಂದುವರಿಯುತ್ತೀರಿ.

ತೊಂಡೆಕಾಯಿ ಮಾತ್ರ ಅಲ್ಲ ಹಣ್ಣು ಎಲೆ ಕೂಡ ಬಳಸಬಹುದು!ಹೇಗೆ ಗೊತ್ತಾ?

ಜೀವನದಲ್ಲಿ ಮುಂದುವರಿಯಲು ನಿಮಗೆ ಪ್ರೇರಣೆ ಬೇಕಾದರೆ, ಖಂಡಿತವಾಗಿಯೂ ಮನೆಯಲ್ಲಿ ಓಡುವ ಕುದುರೆಗಳ ಚಿತ್ರವನ್ನು ಇರಿಸಿ ಅದು ಶಕ್ತಿಯ ಸಂಕೇತವಾಗಿದೆ. ಕುದುರೆಯ ಚಿತ್ರವನ್ನು ನೋಡಿದ ಮೇಲೆ ಸೋಮಾರಿತನ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಇರುತ್ತದೆ. ಅದಕ್ಕೇ ಕುದುರೆಯ ಚಿತ್ರ ಹಾಕುವ ಮೂಲಕ ನಾವೂ ಓಡುವ ಉತ್ಸಾಹ, ಬದುಕಿನ ಓಟದಲ್ಲಿ ಯಶಸ್ವಿಯಾಗುತ್ತೇವೆ.

ಯಾವ ಮನೆಯಲ್ಲಿ ವಾಸ್ತು ದೋಷ ಇರುತ್ತದೆಯೋ ಆ ಮನೆಯಲ್ಲಿ ಏಳಿಗೆ ಎನ್ನುವುದೇ ಇರುವುದಿಲ್ಲ. ಅಲ್ಲದೆ, ಮನೆಯ ಸದಸ್ಯರು ಕೂಡಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಮನೆ ನಿರ್ಮಾಣಕ್ಕೂ ಮುನ್ನ ಅಥವಾ ಮನೆ ಖರೀದಿಗೆ ಮುನ್ನ ವಾಸ್ತು ನೋಡುವ ಸಲಹೆಯನ್ನು ಹಿರಿಯರು ನೀಡುತ್ತಾರೆ. ಒಂದು ವೇಳೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯನ್ನು ಒಡೆದು ಹಾಕಬೇಕು ಎಂದೇನಿಲ್ಲ. ಮನೆಯಲ್ಲಿನ ಕೆಲವು ವಸ್ತುಗಳ ದಿಕ್ಕು ಬದಲಾವಣೆಯಿಂದ ಅಥವಾ ವಾಸ್ತುವಿನಲ್ಲಿ ಸೂಚಿಸಿದ ಕೆಲ  ವಸ್ತುಗಳಿಂದ ಈ ದೋಷಗಳನ್ನು ಸರಿಪಡಿಸಬಹುದು. 7 ಬಿಳಿ ಕುದುರೆಗಳ ಫೋಟೋಗೆ ವಾಸ್ತುವಿನಲ್ಲಿ ಬಹಳ ಪ್ರಾಮುಖ್ಯತೆಯಿದೆ. 

ಏಳು ಬಿಳಿ ಕುದುರೆಗಳ ಫೋಟೋವನ್ನು ಮನೆಯಲ್ಲಿಟ್ಟರೆ ಆಗುವ ಪ್ರಯೋಜನಗಳು ಇವೆ : ಕೆಲವೊಮ್ಮೆ ಮನೆಯಲ್ಲಿ ಇದಕ್ಕಿದ್ದಂತೆ ಗೊಂದಲ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ 7 ಬಿಳಿ ಕುದುರೆಗಳ ಫೋಟೋವನ್ನು ಮನೆಯಲ್ಲಿನ  ನಕಾರಾತ್ಮಕ ಶಕ್ತಿ ದೂರವಾಗುತ್ತದೆ.  ಇನ್ನು ನಿಮ್ಮ ಕೆಲಸದ ಸ್ಥಳದಲ್ಲಿ ಕುದುರೆಯ ಚಿತ್ರವನ್ನು ಇರಿಸಿದರೆ, ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗೆ ಕಾರಣವಾಗುತ್ತದೆ. ನೀವು ಮನೆಯಿಂದಲೇ  ಕೆಲಸ ಮಾಡುತ್ತಿದ್ದರೆ, ಈ ಫೋಟೋವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಿ. ಕಚೇರಿಗೆ ಹೋಗುವುದಾದರೆ, ಅದನ್ನು ಕಚೇರಿಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇರಿಸಿ.

LEAVE A REPLY

Please enter your comment!
Please enter your name here