Sagar Biligowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಸಾಗರ್ ಬಿಳಿಗೌಡ ದಂಪತಿ!

0 29

Sagar Biligowda: ಕನ್ನಡ ಕಿರುತೆರೆಯಲ್ಲಿ ಸತ್ಯ ಧಾರವಾಹಿ ಮೂಲಕ ಜನರ ಗಮನ ಸೆಳೆದು, ಅಮುಲ್ ಬೇಬಿ ಎಂದೇ ಹೆಸರು ಪಡೆದಿರುವವರು ನಟ ಸಾಗರ್ ಬಿಳಿಗೌಡ. ಸತ್ಯ ಧಾರವಾಹಿಯ ಮೂಲಕ ಇವರ ಜನಪ್ರಿಯತೆ ಭಾರಿ ಹೆಚ್ಚಾಗಿದೆ. ಇದೀಗ ಈ ನಟ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಟ ಸಾಗರ್ ಹಾಗೂ ಅವರ ಪತ್ನಿ ಸುಪ್ರಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸಂತೋಷದ ಸುದ್ದಿಯನ್ನು ಖುದ್ದು ಸಾಗರ್ ಅವರು ಇನ್ಸ್ಟಾಗ್ರಾಮ್ ಮೂಲಕ ಶೇರ್ ಮಾಡಿದ್ದು, ಪತ್ನಿ ಜೊತೆಗೆ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ, ಅವುಗಳನ್ನು ಶೇರ್ ಮಾಡಿ, “ನಿನ್ನನ್ನು ಭೇಟಿ ಮಾಡಲು ಕಾತುರನಾಗಿದ್ದೇನೆ..” ಎಂದು ಕ್ಯಾಪ್ಶನ್ ಬರೆದು ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಸಾಗರ್. ಕಿರುತೆರೆಯ ಇನ್ನಿತರ ಕಲಾವಿದರು ಹಾಗೂ ಅಭಿಮಾನಿಗಳು ಈ ಜೋಡಿಗೆ ವಿಶ್ ಮಾಡುತ್ತಿದ್ದಾರೆ.

ಸಾಗರ್ ಬಿಳಿಗೌಡ ಅವರು ಮದುವೆ ಆಗುತ್ತಿರುವ ವಿಚಾರ ಹೊರಬಂದಾಗ, ಅವರ ಮಹಿಳಾ ಅಭಿಮಾನಿಗಳಿಗೆ ಬೇಸರ ಆಗಿದ್ದಂತೂ ನಿಜ. ಆದರೆ ಇಂದು ಈ ಜೋಡಿಯನ್ನು ನೋಡಿ ಎಲ್ಲರೂ ಸಂತೋಷಪಡುತ್ತಿದ್ದಾರೆ.

Leave A Reply

Your email address will not be published.