Sai Pallavi: ತಂಗಿ ಮದುವೆ ಮಾಡುತ್ತಿರುವ ನಟಿ ಸಾಯಿಪಲ್ಲವಿ ತಾವು ಇನ್ನು ಸಿಂಗಲ್ ಆಗಿರೋದ್ಯಾಕೆ?

0 17

Sai Pallavi: ಸಾಯಿಪಲ್ಲವಿ ಇವರ ಹೆಸರು ಕೇಳಿದರೆ ಎಲ್ಲರಿಗೂ ಸಂತೋಷವಾಗುತ್ತದೆ ಎಂದರೆ ತಪ್ಪಲ್ಲ. ಚಿತ್ರರಂಗ ಕಂಡಿರುವ ಅದ್ಭುತವಾದ ನಟಿಯರಲ್ಲಿ ಇವರು ಕೂಡ ಒಬ್ಬರು. ಸಾಯಿಪಲ್ಲವಿ ಅವರು ನಟಿಸುವ ಎಲ್ಲಾ ಸಿನಿಮಾಗಳು, ಅವರ ಪಾತ್ರಗಳು ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಇತ್ತೀಚೆಗೆ ಸಾಯಿ ಪಲ್ಲವಿ ಅವರ ಮನೆಯಲ್ಲಿ ಆಕೆಯ ತಂಗಿಯ ಎಂಗೇಜ್ಮೆಂಟ್ ನಡೆದು, ಫೋಟೋಸ್ ವೈರಲ್ ಆದವು..

ಸಾಯಿಪಲ್ಲವಿ ಅವರು ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಹುಡುಗಿ. ಆದರೆ ಇವರು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಮಲಯಾಳಂ ಚಿತ್ರರಂಗದ ಮೂಲಕ, ಪ್ರೇಮಂ ಇವರ ಮೊದಲ ಸಿನಿಮಾ, ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯ ಮತ್ತು ನಟನೆಯ ಮೂಲಕ ಭಾರಿ ದೊಡ್ಡ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ ಸಾಯಿಪಲ್ಲವಿ. ನ್ಯಾಚುರಲ್ ಬ್ಯೂಟಿ ಎಂದೇ ಅಭಿಮಾನಿಗಳು ಇವರನ್ನು ಕರೆಯುತ್ತಾರೆ.

ಸಾಯಿಪಲ್ಲವಿ ಅವರು ಬೇರೆ ನಟಿಯರ ಹಾಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಿಲ್ಲ, ನಮ್ಮ ಮನೆಯ ಹುಡುಗಿ ಎಂದು ಅನ್ನಿಸುವ ಹಾಗೆ ಇರುತ್ತಾರೆ. ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡ ಅದೇ ರೀತಿ, ಮನಸ್ಸಿಗೆ ತುಂಬಾ ಹತ್ತಿರ ಎನ್ನಿಸುವಂಥ ಪಾತ್ರಗಳೇ ಆಗಿರುತ್ತದೆ. ಸಾಯಿಪಲ್ಲವಿ ಅವರ ಡ್ಯಾನ್ಸ್ ಬಗ್ಗೆ ಅಂತೂ ಹೇಳುವ ಹಾಗೆ ಇಲ್ಲ, ಎಲ್ಲಾ ಅಭಿಮಾನಿಗಳಿಗೆ ಇವರ ಡ್ಯಾನ್ಸ್ ಮೇಲೆ ವಿಶೇಷವಾದ ಕ್ರೇಜ್ ಇದೆ. ಅವರ ಡ್ಯಾನ್ಸ್ ಕೂಡ ಅಷ್ಟೇ ಅದ್ಭುತ ಎನ್ನಬಹುದು.

ಭಾರತದೆಲ್ಲೆಡೆ ದೊಡ್ಡ ಅಭಿಮಾನಿ ಹೊಂದಿರುವ ನಟಿ ಸಾಯಿಪಲ್ಲವಿ ಅವರು ಅಷ್ಟೇ ದೊಡ್ಡ ಹೆಸರು ಮಾಡಿದ್ದಾರೆ, ಇನ್ನು ಇತ್ತೀಚೆಗೆ ಸಾಯಿಪಲ್ಲವಿ ಅವರ ತಂಗಿ ಪೂಜಾ ಕಣ್ಣನ್ ಅವರ ನಿಶ್ಚಿತಾರ್ಥ ನಡೆಯಿತು. ಶೀಘ್ರದಲ್ಲೇ ಮದುವೆ ಕೂಡ ನಡೆಯಲಿದೆ. ಆದರೆ ಇದೀಗ ಸಾಯಿಪಲ್ಲವಿ ಅವರು ತಾವು ಮದುವೆಯಾಗದೆ ತಂಗಿ ಮದುವೆ ನಡೆಯುತ್ತಿದೆ, ಸಾಯಿಪಲ್ಲವಿ ಅವರು ಯಾಕೆ ಸಿಂಗಲ್ ಆಗಿದ್ದಾರೆ ಎನ್ನುವ ಪ್ರಶ್ನೆ ಶುರುವಾಗಿದೆ.

ಸಾಯಿಪಲ್ಲವಿ ಅವರು ಈ ಹಿಂದೆ ಬೇರೆ ರೀತಿಯಲ್ಲೇ ಅಂದುಕೊಂಡಿದ್ದರು, 23ನೇ ವಯಸ್ಸಿಗೆ ಮದುವೆ ಆಗಿರುತ್ತದೆ, 30ನೇ ವಯಸ್ಸಿಗೆ ಇಬ್ಬರು ಮಕ್ಕಳು ಇರುತ್ತಾರೆ ಎಂದು ಅಂದುಕೊಂಡಿದ್ದರಂತೆ ನಟಿ ಸಾಯಿಪಲ್ಲವಿ. ಆದರೆ ಈಗ ಅವರಿಗೆ 31 ವರ್ಷವಾಗಿದೆ, ಆದರೆ ಸಾಯಿಪಲ್ಲವಿ ಅವರು ಈಗ ಮದುವೆ ಆಗಬೇಕು ಎಂದು ಬಯಸ್ಸಿಲ್ಲವಂತೆ, ಅವರು ಈಗಿರುವ ಜೀವನವನ್ನೇ ತುಂಬಾ ಇಷ್ಟಪಡುತ್ತಿದ್ದಾರಂತೆ. ಸಾಯಿಪಲ್ಲವಿ ಅವರು ಯಾವಾಗ ಮದುವೆಯಾಗುವ ಮನಸ್ಸು ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Leave A Reply

Your email address will not be published.