Salman Khan: ಬಿಗ್ ಬಾಸ್, ಈ ಶೋ ಭಾರತದ ಹಲವು ಭಾಷೆಗಳಲ್ಲಿ ಶುರುವಾಗಿದೆ. ಎಲ್ಲಾ ಭಾಷೆಗಳಲ್ಲು ಯಶಸ್ವಿಯಾಗಿದೆ. ಭಾರತದಲ್ಲಿ ಬಿಗ್ ಬಾಸ್ ಶುರುವಾಗಿದ್ದು ಮೊದಲಿಗೆ ಹಿಂದಿ ಭಾಷೆಯಲ್ಲಿ. ನಂತರ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಉತ್ತರ ಭಾರತದ ಇನ್ನಿತರ ಭಾಷೆಗಳಲ್ಲೂ ಬಿಗ್ ಬಾಸ್ ಶೋ ಜನಪ್ರಿಯವಾಗಿದೆ. ಹಿಂದಿಯಲ್ಲಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವವರು ನಟ ಸಲ್ಮಾನ್ ಖಾನ್, ಇವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ನಟ ಸಲ್ಮಾನ್ ಖಾನ್ ಬಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು, ಇಂದಿಗೂ ಕೂಡ ಇವರ ಮೇಲೆ ಅಭಿಮಾನಿಗಳಿಗೆ ಅಷ್ಟೇ ಪ್ರೀತಿ ಇದೆ. ಸಲ್ಮಾನ್ ಖಾನ್ ಅವರು ಸಿನಿಮಾ ಇಂದ ಎಷ್ಟು ಜನಪ್ರಿಯತೆ ಪಡೆದರೋ ಬಿಗ್ ಬಾಸ್ ಶೋ ಇಂದಲೂ ಅಷ್ಟೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಶೋ ಹೋಸ್ಟ್ ಮಾಡುತ್ತಿರುವುದು 2010ರಿಂದ
ಅಗಿನಿಂದಲು ಇವರು ಮಾತನಾಡುವ ಶೈಲಿ, ಕಾರ್ಯಕ್ರಮ ನಡೆಸಿಕೊಡುವ ರೀತಿ, ಇದೆಲ್ಲವೂ ಜನರಿಗೆ ಬಹಳ ಇಷ್ಟವಾಗಿದೆ. ಸಲ್ಮಾನ್ ಖಾನ್ ಅವರಿಂದ ಬಿಗ್ ಬಾಸ್ ಶೋ ಗೆ ಕೂಡ ಜನಪ್ರಿಯತೆ ಹೆಚ್ಚಾಗಿದೆ. ಬಿಗ್ ಬಾಸ್ ಹಿಂದಿ ಶೋನಲ್ಲಿ ಈಗಾಗಲೇ 16 ಸೀಸನ್ ಗಳು ಕಳೆದು, 17ನೇ ಸೀಸನ್ ಗೆ ಕಾಲಿಟ್ಟಿದೆ. ನಿನ್ನೆ ಆಕ್ಟೊಬರ್ 14ರಂದು ಬಿಗ್ ಬಾಸ್ ಹಿಂದಿ ಸೀಸನ್ 17 ಲಾಂಚ್ ಆಗಿದೆ.
ನಾಳೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ 17ರ ಎಪಿಸೋಡ್ ಗಳು ಶುರುವಾಗಲಿದೆ. ಈ ವೇಳೆ ನಟ ಸಲ್ಮಾನ್ ಖಾನ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆ ಈಗ ಶುರುವಾಗಿದ್ದು, ದುಬಾರಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನುವುದಂತೂ ನಿಜ. ಹಾಗಿದ್ದಲ್ಲಿ ಸಲ್ಮಾನ್ ಖಾನ್ ಅವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ..
ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ನಟ ಸಲ್ಮಾನ್ ಖಾನ್ ಅವರು ಒಂದು ವಾರಕ್ಕೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಬಂದಿದೆ. ಅಂದರೆ ಒಂದು ವಾರಕ್ಕೆ 6 ಕೋಟಿ ರೂಪಾಯಿ ಸಂಭಾವನೆ. ಒಟ್ಟಾರೆಯಾಗಿ ಒಂದು ಸೀಸನ್ ಗೆ ಬರೋಬ್ಬರಿ 200 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಒಬ್ಬರು ನಟ ಸಲ್ಮಾನ್ ಖಾನ್.