Samantha: ಮತ್ತೆ ಮದುವೆ ಆಗ್ತಾರಾ ಸಮಂತಾ? ಮದುವೆ ಬಗ್ಗೆ ಸ್ಟಾರ್ ನಟಿ ಹೇಳಿದ್ದು ಹೀಗೆ?

0 12

Samantha: ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಇವರು ತಮ್ಮ ಸಿನಿಮಾಗಳ ವಿಚಾರಕ್ಕೆ ಸುದ್ದಿಯಾಗುವುದಕ್ಕಿಂತ, ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಸಮಂತಾ ಅವರು ನಾಲ್ಕು ವರ್ಷಗಳ ಹಿಂದೆ ತಮ್ಮ ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಕಾಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದರು. ಇದೀಗ ಸಮಂತಾ ಅವರು ಎರಡನೇ ಮದುವೆ ಬಗ್ಗೆ ಹೇಳಿಕೆ ನೀಡಿದ್ದು, ಏನು ಹೇಳಿದ್ದಾರೆ ಗೊತ್ತಾ?

ನಟಿ ಸಮಂತ 1 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇಂದಿಗೂ ಇವರಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ ಸಮಂತ. ಆದರೆ ಸಧ್ಯಕ್ಕೆ ಸಮಂತಾ ಅವರು ಸಿನಿಮಾ ಇಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ನಾಗಚೈತನ್ಯ ಅವರನ್ನು ಸಮಂತ ಅವರು ಪ್ರೀತಿಸಿ ಮದುವೆಯಾದರು. 2017ರಲ್ಲಿ ಮದುವೆಯಾದ ಈ ಜೋಡಿ, 2021ರಲ್ಲಿ ವಿಚ್ಚೇದನ ಪಡೆದರು.

ಈ ರೀತಿ ಆಗಲು ಕಾರಣ ಸಮಂತಾ ಅವರು ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಎಂದು ಹೇಳಲಾಗಿತ್ತು. ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ರೀತಿ ಆದ ಬಳಿಕ ಸಮಂತಾ ಅವರ ಆರೋಗ್ಯವು ಹದಗೆಟ್ಟಿತು, ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ತುತ್ತಾದರು ಸಮಂತಾ. ಅದರಿಂದ ಸುಧಾರಿಸಿಕೊಂಡರು, ಆದರೆ ಟ್ರೋಲಿಂಗ್ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಯಿತು.

ಸಮಂತಾ ಅವರು ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಕಷ್ಟು ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ಇತ್ತೀಚೆಗೆ ಸಮಂತಾ ಅವರು ನಟಿಸಿದ ಎರಡು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ಇದರಿಂದಲೂ ಸಮಂತಾ ಅವರು ಕಷ್ಟ ಅನುಭವಿಸಿದ್ದಾರೆ. ಇದೆಲ್ಲವೂ ಒಂದು ಕಡೆಯಾದರೆ ನಟಿ ಸಮಂತ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್, ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ಇವರು ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಆಗ ಒಬ್ಬ ಅಭಿಮಾನಿ, ಮತ್ತೆ ಮದುವೆ ಆಗೋ ಬಗ್ಗೆ ಯೋಚಿಸಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಸಮಂತ ಅವರು Statistics ಪ್ರಕಾರ ಎರಡನೇ ಮದುವೆಯಾಗೋದು ವ್ಯರ್ಥ ಎಂದು ಬರೆದು ಒಂದು ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಮೊದಲ ಸಾರಿ ಮದುವೆಯಾದ ದಂಪತಿಗಳ ನಡುಗೆ 50% ವಿಚ್ಚೇದನ ಪಡೆಯುವ ಚಾನ್ಸ್ ಇರುತ್ತದೆ..

IMG 20231218 150308
Source:Google

ಎರಡನೇ ಮತ್ತು ಮೂರನೇ ಮದುವೆಯಾದ ದಂಪತಿಗಳ ನಡುವೆ 67-73% ವಿಚ್ಛೇದನ ಪಡೆಯುವ ಚಾನ್ಸ್ ಇರುತ್ತದೆ ಎಂದು ಬರೆದಿದೆ, ಈ ಸ್ಕ್ರೀನ್ ಶಾಟ್ ಶೇರ್ ಮಾಡುವ ಮೂಲಕ ಸ್ಯಾಮ್ ಅವರು ತಾವು ಮತ್ತೆ ಮದುವೆ ಆಗೋದಿಲ್ಲ ಅನ್ನೋದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ.

Leave A Reply

Your email address will not be published.