Samantha: ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಇವರು ತಮ್ಮ ಸಿನಿಮಾಗಳ ವಿಚಾರಕ್ಕೆ ಸುದ್ದಿಯಾಗುವುದಕ್ಕಿಂತ, ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಸಮಂತಾ ಅವರು ನಾಲ್ಕು ವರ್ಷಗಳ ಹಿಂದೆ ತಮ್ಮ ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಕಾಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದರು. ಆದರೆ ಇದೀಗ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ.
ನಟಿ ಸಮಂತ 1 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇಂದಿಗೂ ಇವರಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ ಸಮಂತ. ಆದರೆ ಸಧ್ಯಕ್ಕೆ ಸಮಂತಾ ಅವರು ಸಿನಿಮಾ ಇಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ನಾಗಚೈತನ್ಯ ಅವರನ್ನು ಸಮಂತ ಅವರು ಪ್ರೀತಿಸಿ ಮದುವೆಯಾದರು. 2017ರಲ್ಲಿ ಮದುವೆಯಾದ ಈ ಜೋಡಿ, 2021ರಲ್ಲಿ ವಿಚ್ಚೇದನ ಪಡೆದರು.
ಈ ರೀತಿ ಆಗಲು ಕಾರಣ ಸಮಂತಾ ಅವರು ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಎಂದು ಹೇಳಲಾಗಿತ್ತು. ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ರೀತಿ ಆದ ಬಳಿಕ ಸಮಂತಾ ಅವರ ಆರೋಗ್ಯವು ಹದಗೆಟ್ಟಿತು, ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ತುತ್ತಾದರು ಸಮಂತಾ. ಅದರಿಂದ ಸುಧಾರಿಸಿಕೊಂಡರು, ಆದರೆ ಟ್ರೋಲಿಂಗ್ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಯಿತು.
ಸಮಂತಾ ಅವರು ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಕಷ್ಟು ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ಇತ್ತೀಚೆಗೆ ಸಮಂತಾ ಅವರು ನಟಿಸಿದ ಎರಡು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ಇದರಿಂದಲೂ ಸಮಂತಾ ಅವರು ಕಷ್ಟ ಅನುಭವಿಸಿದ್ದಾರೆ. ಈ ಕಷ್ಟಗಳೆಲ್ಲವು ಒಂದು ಕಡೆಯಾದರೆ, ನಟಿ ಸಾಮನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ತಮ್ಮ ಜೀವನದ ಹಲವು ವಿಚಾರಗಳನ್ನು ಶೇರ್ ಮಾಡಿಕಳ್ಳುತ್ತಾರೆ.
ಇದೀಗ ಸಮಂತಾ ಅವರು ಬೋಲ್ಡ್ ಲುಕ್ ನಲ್ಲಿ ಕೆಲವು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋಸ್ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ ಎಂದರೆ ತಪ್ಪಲ್ಲ. ಮದುವೆಯಾಗಿ, ವಿಚ್ಛೇದನ ಪಡೆದು, ಆರೋಗ್ಯ ಸಮಸ್ಯೆಯನ್ನು ಕೂಡ ಎದುರಿಸಿದ ಸಮಂತಾ ಅವರು ಇದೀಗ ಬೋಲ್ಡ್ ಅವತಾರದ ಮೂಲಕ ಫ್ಯಾನ್ಸ್ ಎದುರು ಬಂದಿರುವುದು ನಿಜಕ್ಕೂ ಅಭಿಮಾನಿಗಳಿಗೆ ಸಂತೋಷ ತಂದಿದೆ.