Samantha gave befiting reply to fan ಟಾಲಿವುಡ್ ಬ್ಯೂಟಿ ಸಮಂತಾ(Samantha) ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ನಟಿ ಸಮಂತಾ ಮೈಯೋಸಿಟಿಸ್ (Samantha Health) ಎನ್ನುವ ವಿಚಿತ್ರ ಕಾಯಿಲೆಗೆ ಗುರಿಯಾದ ಮೇಲೆ ಅದರ ಚಿಕಿತ್ಸೆಗಾಗಿ ಸಿನಿಮಾ ಮತ್ತು ಸೋಶಿಯಲ್ ಮೀಡಿಯಾಗಳಿಂದ ಕೊಂಚ ಕಾಲ ಬ್ರೇಕ್ ಅನ್ನು ಪಡೆದುಕೊಂಡಿದ್ದರು. ಇದೀಗ ನಟಿ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದೇ ವೇಳೆ ನಟಿಯು ತನ್ನ ಬಗ್ಗೆ ಟ್ರೋಲ್ ಮಾಡಿದ್ದವರಿಗೆ ಸಹಾ ಸರಿಯಾದ ತಿರುಗೇಟನ್ನು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಅಪರೂಪದ ಕಾಯಿಲೆಗೆ ಗುರಿಯಾದ ನಟಿ ಸಮಂತಾ ಕೆಲವು ತಿಂಗಳುಗಳ ಕಾಲದವರೆಗೆ ಸಿನಿಮಾದಿಂದ ಬ್ರೇಕ್ ಅನ್ನು ಪಡೆದುಕೊಂಡಿದ್ದರು. ಇದೀಗ ಮತ್ತೆ ನಟಿ ತಮ್ಮ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಗುಣಮುಖರಾಗಿ ಬಂದ ನಟಿಯ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ (Samantha gave befiting reply) ಮಾಡಲು ತೊಡಗಿದ್ದಾರೆ. ಗುಣಮುಖರಾಗಿ ಮತ್ತೆ ಅಭಿಮಾನಿಗಳ ಮುಂದೆ ಬಂದ ಸಮಂತಾರನ್ನು ನೋಡಿದ ನೆಟ್ಟಿಗರು ನಟಿಯ ಮುಖದಲ್ಲಿ ಮೊದಲಿನ ಕಳೆ ಇಲ್ಲ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಮತ್ತೆ ಕೆಲವರು ನಟಿಯ ಆರೋಗ್ಯದ ಬಗ್ಗೆ ವ್ಯಂಗ್ಯ ಸಹಾ ಮಾಡಿದ್ದಾರೆ.
ಶಾಕುಂತಲಂ(Shakuntalam) ಸಿನಿಮಾದ ಟ್ರೈಲರ್ ಲಾಂಚ್ ಗೆ ಬಂದಿದ್ದ ಸಮಂತಾ ಫೋಟೋಗಳು ವೈರಲ್ ಆದ ಮೇಲೆ ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಿದ್ದರು. ಮೊದಲಿನ ಹಾಗೆ ಸಮಂತಾ ಸ್ಟ್ರಾಂಗ್ ಇಲ್ಲ, ನಟಿ ದುರ್ಬಲರಾಗಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಸಮಂತಾ,
“ನನ್ನಂತೆ ನೀವೂ ಕೂಡ ತಿಂಗಳುಗಳ ಕಾಲ ಟ್ರಿಟ್ಮೆಂಟ್, ಟ್ಯಾಬ್ಲೆಟ್ ತೆಗೆದುಕೊಳ್ಳುವಂತೆ ಆಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ನಯವಾಗಿಯೇ ಟ್ರೋಲಿಗರಿಗೆ ಖಡಕ್ಕಾಗಿ ಸೋಶಿಯಲ್ ಮೀಡಿಯಾ ಮೂಲಕ ತಿರುಗೇಟು ನೀಡಿದ್ದಾರೆ.