ನಟಿ ಸಮಂತಾ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು!

0
31

Samantha Health ನಟಿ ಸಮಂತಾ ಅವರು ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರ ‘ಯಶೋದಾ’ ಮತ್ತು ‘ಶಾಕುಂತಲಂ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಚಿತ್ರದಲ್ಲೂ ಸಮಂತಾ ಬಣ್ಣ ಹಚ್ಚಿದ್ದಾರೆ. ಈ ಮಧ್ಯೆ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯವರ ಜೊತೆ ವಿಚ್ಚೆದನ ಅದನಂತರ ಸಮಂತಾ ಅವರು ತುಂಬಾನೇ ಚಿಂತೆಗೆ ಒಳಗಾಗುತ್ತಾರೆ.

Darshan Thoogudeepa :ಹೊಸ ಪೇಟೆಯಲ್ಲಿ ದರ್ಶನ್ ಗೆ ಆಗಿದ್ದೇನು ?ನಟ ದರ್ಶನ್ ಏನಂದ್ರು ?

ನಟಿ ಸಮಂತಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ‘ಯಶೋದಾ’ ಮತ್ತು ‘ಶಾಕುಂತಲಂ’ ಸಿನಿಮಾಗಳು ರಿಲೀಸ್ಗೆ ರೆಡಿ ಆಗಿವೆ. ಈ ಮಧ್ಯೆ ಒಂದು ಗಂಭೀರ ವಿಚಾರ ಸಮಂತಾ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದೆ. ಏನದು? ಸಮಂತಾಗೆ ಆರೋಗ್ಯ ಸಮಸ್ಯೆ. ಹೌದು, ಸಮಂತಾ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಸಾರ್ವಜನಿಕವಾಗಿ ಎಲ್ಲಿಯೂ ಹೊರಗೆ ಹೋಗದಂತೆ ಅವರಿಗೆ ವೈದ್ಯರಿಂದ ಕಟ್ಟುನಿಟ್ಟಿನ ಸೂಚನೆ ಸಿಕ್ಕಿದೆ. ಆದ್ದರಿಂದ ಸಮಂತಾ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಸದ್ಯದ ಮಾಹಿತಿ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಮಂತಾ ಈಚೆಗೆ ಎಲ್ಲಿಯೂ ಹೆಚ್ಚು ಕಾಣಿಸುತ್ತಿರಲಿಲ್ಲ. ಇದೀಗ ಈ ವಿಚಾರ ಕೇಳಿಬಂದಿರುವುದರಿಂದ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಅಷ್ಟಕ್ಕೂ ಸಮಂತಾಗೆ ಏನಾಗಿದೆ? ಸದ್ಯಕ್ಕೆ ಅವರಿಗೆ ಯಾವ ರೀತಿಯ ಅನಾರೋಗ್ಯ ಕಾಡುತ್ತಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಸಾರ್ವಜನಿಕವಾಗಿ ಎಲ್ಲಿಯೂ ಹೊರಗೆ ಹೋಗಬಾರದು ಎಂದು ವೈದ್ಯರು ಸಮಂತಾಗೆ ಸಲಹೆ ನೀಡಿದ್ದಾರಂತೆ. ಹಾಗಾಗಿ, ಸದ್ಯ ಸಮಂತಾ ನಟಿಸುತ್ತಿರುವ ‘ಖುಷಿ’ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಸಮಂತಾ ಸಿನಿಮಾಗಳು ಯಾವಾಗ ಬಿಡುಗಡೆ?

ಸದ್ಯ ಸಮಂತಾ ನಟನೆಯ 2 ಸಿನಿಮಾಗಳು ರಿಲೀಸ್ಗೆ ಸಿದ್ಧವಾಗಿವೆ. ‘ಶಾಕುಂತಲಂ’ ಹಾಗೂ ‘ಯಶೋದಾ’ ಆ ಎರಡು ಸಿನಿಮಾಗಳು. ರಾಣಿ ಶಾಕುಂತಲ ದೇವಿ ಕಥೆಯನ್ನು ಆಧರಿಸಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿದೆ. ಈ ಸಿನಿಮಾವನ್ನು ‘ರುದ್ರಮದೇವಿ’ ಖ್ಯಾತಿಯ ಗುಣಶೇಖರ್ ನಿರ್ದೇಶನ ಮಾಡಿದ್ದಾರೆ. ಅದರ ಜೊತೆಗೆ ಮಾಡಿರುವ ಮತ್ತೊಂದು ಸಿನಿಮಾ ‘ಯಶೋದಾ’ ಮಹಿಳಾ ಪ್ರಧಾನ ಸೈನ್ಸ್ ಫಿಕ್ಷನ್ ಸಿನಿಮಾವಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ 2022ರ ಸ್ವಾತಂತ್ರ್ಯ ದಿನಾಚರಣೆ ವೇಳೆ ‘ಯಶೋದಾ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸಾಕಷ್ಟು ಸಿನಿಮಾಗಳು ಪೈಪೋಟಿಯಲ್ಲಿ ಇದ್ದಿದ್ದರಿಂದ ‘ಯಶೋದಾ’ ಸಿನಿಮಾವನ್ನು ರಿಲೀಸ್ ಮಾಡಲಿಲ್ಲ. ಸದ್ಯ ಹೊಸ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿಲ್ಲ.

‘ಯಶೋದಾ’ ತೆರೆಕಂಡ ಬಳಿಕ ‘ಶಾಕುಂತಲಂ’ ಪ್ರಮೋಷನ್ನಲ್ಲಿ ಸಮಂತಾ ಬ್ಯುಸಿ ಆಗಲಿದ್ದಾರೆ. ಸದ್ಯ ಸಮಂತಾಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಈ ಸಿನಿಮಾಗಳ ರಿಲೀಸ್ ಡೇಟ್ನಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ರಿಲೀಸ್ ದಿನಾಂಕ ಮತ್ತಷ್ಟು ಮುಂದೂಡಿಕೆ ಆಗಬಹುದು. ಈ ಮಧ್ಯೆ ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿರುವ ‘ಖುಷಿ’ ಚಿತ್ರದ ಚಿತ್ರೀಕರಣವನ್ನು ಮುಂದೂಡಲಾಗಿದೆಯಂತೆ. ಈ ಕಾಯಿಲೆ ಸಮಂತಾ ಅವರ ಬದುಕನ್ನೇ ಕಿತ್ತುಕೊಂಡಿತ್ತು. ಈ ಕಾಯಿಲೆ ಬಂದರೆ ಇಡೀ ದೇಹ ನೋವಿನಿಂದ ಕೂಡಿರುತ್ತದೆ. ಎದ್ರೆ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ ಮತ್ತು ಕುಳಿತುಕೊಂಡರೆ ಎದ್ದೇಳುವುದಕ್ಕೆ ಆಗುವುದಿಲ್ಲ. ಇದಕ್ಕೆ ಸರಿಯಾದ ಟ್ರೀಟ್ಮೆಂಟ್ ಎಂದರೆ ಯೋಗ ಮೆಡಿಟೇಶನ್ ಮಾತ್ರ.3rd ಸ್ಟೇಜ್ ಲಿ ಇದ್ದಾಗ ಟ್ರೀಟ್ಮೆಂಟ್ ಕೊಡುವುದು ಕಷ್ಟ.ಸದ್ಯಕ್ಕೆ ದಕ್ಷಿಣ ಕೊರಿಯಾಗೇ ಟ್ರೀಟ್ಮೆಂಟ್ ಗೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ದುಡ್ಡಿನ ಹಿಂದೆ ಒಡಬೇಡಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಒಳ್ಳೆಯದು.

LEAVE A REPLY

Please enter your comment!
Please enter your name here