Samantha: ಎರಡನೇ ಮದುವೆಗೆ ರೆಡಿ ಆದ್ರ ಸ್ಯಾಮ್? ಸಮಂತಾ ಮದುವೆ ಬಗ್ಗೆ ಹೊಸ ಸುದ್ದಿ!

Written by Pooja Siddaraj

Published on:

Samantha: ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಇವರು ತಮ್ಮ ಸಿನಿಮಾಗಳ ವಿಚಾರಕ್ಕೆ ಸುದ್ದಿಯಾಗುವುದಕ್ಕಿಂತ, ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಸಮಂತಾ ಅವರು ನಾಲ್ಕು ವರ್ಷಗಳ ಹಿಂದೆ ತಮ್ಮ ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಕಾಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದರು. ಇದೀಗ ಸಮಂತಾ ಅವರು ಎರಡನೇ ಮದುವೆ ಆಗ್ತಾರಾ ಎನ್ನುವ ವಿಚಾರ ವೈರಲ್ ಆಗಿದೆ. ಸತ್ಯ ಏನು?

ನಟಿ ಸಮಂತ 1 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇಂದಿಗೂ ಇವರಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ ಸಮಂತ. ಆದರೆ ಸಧ್ಯಕ್ಕೆ ಸಮಂತಾ ಅವರು ಸಿನಿಮಾ ಇಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ನಾಗಚೈತನ್ಯ ಅವರನ್ನು ಸಮಂತ ಅವರು ಪ್ರೀತಿಸಿ ಮದುವೆಯಾದರು. 2017ರಲ್ಲಿ ಮದುವೆಯಾದ ಈ ಜೋಡಿ, 2021ರಲ್ಲಿ ವಿಚ್ಚೇದನ ಪಡೆದರು.

ಈ ರೀತಿ ಆಗಲು ಕಾರಣ ಸಮಂತಾ ಅವರು ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಎಂದು ಹೇಳಲಾಗಿತ್ತು. ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ರೀತಿ ಆದ ಬಳಿಕ ಸಮಂತಾ ಅವರ ಆರೋಗ್ಯವು ಹದಗೆಟ್ಟಿತು, ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ತುತ್ತಾದರು ಸಮಂತಾ. ಅದರಿಂದ ಸುಧಾರಿಸಿಕೊಂಡರು, ಆದರೆ ಟ್ರೋಲಿಂಗ್ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಯಿತು.

ಸಮಂತಾ ಅವರು ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಕಷ್ಟು ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ಇತ್ತೀಚೆಗೆ ಸಮಂತಾ ಅವರು ನಟಿಸಿದ ಎರಡು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ಇದರಿಂದಲೂ ಸಮಂತಾ ಅವರು ಕಷ್ಟ ಅನುಭವಿಸಿದ್ದಾರೆ. ಆದರೆ ಸಮಂತ ಅವರು ಹಿಂದೆ ಸರಿದಿಲ್ಲ, ಚಿತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಹಾಗೆಯೇ ಸಮಂತಾ ಅವರು ಎರಡನೇ ಮದುವೆ ಆಗುತ್ತಾರಾ ಎನ್ನುವ ವಿಷಯ ವೈರಲ್ ಆಗಿದೆ.

ಹೌದು, ನಟಿ ಸಮಂತಾ ಅವರಿಗೆ ಮತ್ತೊಂದು ಮದುವೆ ಮಾಡಬೇಕು ಎಂದು ಅವರ ತಂದೆ ತಾಯಿ ಸಿಕ್ಕಾಪಟ್ಟೆ ಒತ್ತಡ ಹೇರುತ್ತಿದ್ದಾರಂತೆ. ಸಮಂತಾ ಅವರು ಯಾವುದೇ ಹುಡುಗನನ್ನು ಇಷ್ಟಪಟ್ಟರೆ ಮದುವೆ ಮಾಡುತ್ತೇವೆ ಎಂದಿದ್ದಾರಂತೆ. ಈ ಒಂದು ವಿಚಾರ ಈಗ ವೈರಲ್ ಆಗಿದ್ದು, ಸಮಂತಾ ಅವರು ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರಾ ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

Leave a Comment