Samantha: ಶೀಘ್ರದಲ್ಲೇ ತಾಯಿ ಆಗಲಿದ್ದಾರಂತೆ ಸಮಂತಾ, ಅಭಿಮಾನಿಗಳಿಗೆ ಗುಡ್ ನ್ಯೂಸ್!

0 1

Samantha: ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಇವರು ತಮ್ಮ ಸಿನಿಮಾಗಳ ವಿಚಾರಕ್ಕೆ ಸುದ್ದಿಯಾಗುವುದಕ್ಕಿಂತ, ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಸಮಂತಾ ಅವರು ನಾಲ್ಕು ವರ್ಷಗಳ ಹಿಂದೆ ತಮ್ಮ ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಕಾಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದರು. ಇದೀಗ ಇವರು ಹೊಸ ಫೋಟೋಶೂಟ್ ಮಾಡಿಸಿದ್ದು, ಅದಕ್ಕೆ ಅವರು ಚಾರ್ಜ್ ಮಾಡಿರುವ ಹಣ ಎಷ್ಟು ಗೊತ್ತಾ?

ನಟಿ ಸಮಂತ 1 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇಂದಿಗೂ ಇವರಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ ಸಮಂತ. ಆದರೆ ಸಧ್ಯಕ್ಕೆ ಸಮಂತಾ ಅವರು ಸಿನಿಮಾ ಇಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ನಾಗಚೈತನ್ಯ ಅವರನ್ನು ಸಮಂತ ಅವರು ಪ್ರೀತಿಸಿ ಮದುವೆಯಾದರು. 2017ರಲ್ಲಿ ಮದುವೆಯಾದ ಈ ಜೋಡಿ, 2021ರಲ್ಲಿ ವಿಚ್ಚೇದನ ಪಡೆದರು.

ಈ ರೀತಿ ಆಗಲು ಕಾರಣ ಸಮಂತಾ ಅವರು ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಎಂದು ಹೇಳಲಾಗಿತ್ತು. ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ರೀತಿ ಆದ ಬಳಿಕ ಸಮಂತಾ ಅವರ ಆರೋಗ್ಯವು ಹದಗೆಟ್ಟಿತು, ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ತುತ್ತಾದರು ಸಮಂತಾ. ಅದರಿಂದ ಸುಧಾರಿಸಿಕೊಂಡರು, ಆದರೆ ಟ್ರೋಲಿಂಗ್ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಯಿತು.

ಸಮಂತಾ ಅವರು ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಕಷ್ಟು ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ಇತ್ತೀಚೆಗೆ ಸಮಂತಾ ಅವರು ನಟಿಸಿದ ಎರಡು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ಇದರಿಂದಲೂ ಸಮಂತಾ ಅವರು ಕಷ್ಟ ಅನುಭವಿಸಿದ್ದಾರೆ. ಆದರೆ ಅದೆಲ್ಲವನ್ನು ಬಿಟ್ಟು ಈಗ ಸಮಂತಾ ಅವರು ಹೊಸ ನಿರ್ಧಾರ ತೆಗೆದುಕೊಂಡಿದ್ದು, ಶೀಘ್ರದಲ್ಲೇ ತಾಯಿಯಾಗುವ ನಿರ್ಧಾರ ಮಾಡಿದ್ದಾರೆ ಸ್ಯಾಮ್.

ಹೌದು, ಪ್ರತ್ಯುಷಾ ಫೌಂಡೇಶನ್ ಜೊತೆಗಿರುವ ಸಮಂತಾ ಅವರು ಇದೀಗ ಇಬ್ಬರು ಮಕ್ಕಳನ್ನು ದತ್ತು ಪಡೆದು, ತಾವೇ ತಾಯಿಯಾಗಿ ಆ ಮಕ್ಕಳನ್ನು ನೋಡಿಕೊಳ್ಳುವ ಪ್ಲಾನ್ ಮಾಡಿದ್ದಾರೆ. ಈ ರೀತಿಯಲ್ಲಿ ತಾಯಿ ಆಗಬೇಕು ಎಂದುಕೊಂಡಿದ್ದಾರಂತೆ ಸಮಂತಾ. ಈ ವಿಚಾರ ಗೊತ್ತಾಗಿ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.

Leave A Reply

Your email address will not be published.