Sangeetha Sringeri: ನಟಿ ಸಂಗೀತ ಶೃಂಗೇರಿ ಮಾಡಿದ ಈ ಒಂದು ಕೆಲಸಕ್ಕೆ ಜನರು ಫಿದಾ!

Written by Pooja Siddaraj

Published on:

Sangeetha Sringei: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ಸಂಗೀತ ಶೃಂಗೇರಿ ಎಂದು ಹೇಳಿದರೆ ತಪ್ಪಲ್ಲ. ಮನೆಯೊಳಗೆ ಸಿಂಗಲ್ ಸಿಂಹಿಣಿ ಆಗಿ ಗುರುತಿಸಿಕೊಂಡವರು ಸಂಗೀತ. ಹೊರಗಡೆ ಇವರನ್ನು ಸ್ಟ್ರಾಂಗ್ ಲೇಡಿ ಎಂದು ಗುರುತಿಸಿದ್ದಾರೆ ಜನ. ಸಂಗೀತ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲದೆ ಇದ್ದರು ಜನರ ಅಪಾರ ಪ್ರೀತಿ ಗಳಿಸಿದ್ದಾರೆ. ಇದೀಗ ಸಂಗೀತ ಅವರು ಮಾಡಿರುವ ಈ ಒಂದು ಕೆಲಸಕ್ಕೆ ಜನರು ಫಿದಾ ಆಗಿದ್ದಾರೆ.

ನಟಿ ಸಂಗೀತ ಶೃಂಗೇರಿ ಅವರು ಈ ಮೊದಲು ಕೋಟಿ ಕೊಟ್ರು ಬಿಗ್ ಬಾಸ್ ಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಬಂದು, 112 ದಿನಗಳ ಕಾಲ ಇದ್ದು, 2ನೇ ರನ್ನರ್ ಅಪ್ ಆಗಿ ಇಂದು ಸಿಂಹಿಣಿ ಸಂಗೀತ ಎಂದು ಹೆಸರು ಪಡೆದುಕೊಂಡಿದ್ದಾರೆ. ಸಂಗೀತ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು ಹರಹರ ಮಹಾದೇವ ಧಾರವಾಹಿ ಮೂಲಕ, ಬಳಿಕ ಚಾರ್ಲಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು.

ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಒಂದು ಹಾಡು, ಸೇರಿದಂತೆ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ಇವರ ಕೆರಿಯರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಗೆ ಹೋದ ಬಳಿಕ ಸಂಗೀತ ಅವರಿಗೆ ಫ್ಯಾನ್ ಫಾಲೋಯಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಹೇಳಬಹುದು. ಸಂಗೀತ ಅವರ ಫ್ಯಾಮಿಲಿ ಬಗ್ಗೆ ಕೂಡ ಜನರಿಗೆ ಗೌರವ ಜಾಸ್ತಿಯಾಗಿದೆ.

ಕಳೆದ ವಾರದಿಂದ ಸಂಗೀತ ಅವರು ಅಭಿಮಾನಿಗಳ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಊರು ಶೃಂಗೇರಿ, ಮೈಸೂರು, ಬೆಂಗಳೂರು ಈ ಎಲ್ಲಾ ಊರುಗಳಿಗೆ ಹೋಗಿ ಸಂಗೀತ ಅವರು ತಮ್ಮ ಫ್ಯಾನ್ಸ್ ಅನ್ನು ಮೀಟ್ ಮಾಡಿದ್ದಾರೆ. ಶೃಂಗೇರಿಗೆ ಹೋದ ಸಂಗೀತ ಅವರಿಗೆ ತಮ್ಮ ಊರಿನಲ್ಲಿ ಜನರಿಂದ ಒಳ್ಳೆಯ ಸ್ವಾಗತವೇ ಸಿಕ್ಕಿದೆ. ಎಲ್ಲರೂ ಸಂಗೀತ ಅವರನ್ನು ಮೀಟ್ ಮಾಡಿ, ಫೋಟೋ ತೆಗೆಸಿಕೊಂಡು ಸಂತೋಷ ಪಟ್ಟಿದ್ದಾರೆ.

ಸಂಗೀತ ಅವರು ಶೃಂಗೇರಿಯಲ್ಲಿ ಮಾಡಿರುವ ಈ ಒಂದು ಕೆಲಸಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಆ ಕೆಲಸ ಏನು ಅಂದ್ರೆ, ಬಿಗ್ ಬಾಸ್ ಇಂದ ತಮಗೆ ಬಂದಿರುವ ಹಣವನ್ನು ಶೃಂಗೇರಿಯ ಸರ್ಕಾರಿ ಬಾಲಕಿಯರ ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ ನಟಿ ಸಂಗೀತ ಶೃಂಗೇರಿ. ಸಂಗೀತ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಯ ಈ ನಿರ್ಧಾರಕ್ಕೆ ಫಿದಾ ಆಗಿದ್ದಾರೆ.

Leave a Comment