Sangeetha Sringeri: ‘ಆ ಥರ ಹುಡುಗ ಸಿಗಲ್ಲ’: ಮದುವೆ ಆಗೋ ಹುಡುಗನ ಹೇಗಿರಬೇಕು ಎಂದು ತಿಳಿಸಿದ ಸಂಗೀತ!

0 17

Sangeetha Sringeri: ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆದು, ಹೊರಗಡೆ ದೊಡ್ಡ ಫ್ಯಾನ್ ಬೇಸ್ ಸೃಷ್ಟಿಸಿಕೊಂಡಿರುವವರು ನಟಿ ಸಂಗೀತ ಶೃಂಗೇರಿ ಎಂದರೆ ತಪ್ಪಲ್ಲ. ಚಾರ್ಲಿ ಸಿನಿಮಾ ಇಂದ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ಸಂಗೀತ, ಇದೀಗ ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗೆ ಹತ್ತಿರ ಬರುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಎಲ್ಲರ ವಿರೋಧ ಕಟ್ಟಿಕೊಂಡು, ಒಂಟಿಯಾಗಿ ಹೋರಾಟ ಮಾಡುತ್ತಿರುವ ಸಂಗೀತ ಅವರು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ?

ಅಡುಗೆ ಮನೆಯಲ್ಲಿ ನಮ್ರತಾ, ಸಿರಿ ಹಾಗೂ ಸಂಗೀತ ಮಾತನಾಡುತ್ತಿದ್ದಾಗ, ನಮ್ರತಾ ಅವರು ನಿಮಗೆ ಯಾವ ಥರ ಹುಡುಗ ಇಷ್ಟ ಎಂದು ಸಂಗೀತ ಅವರನ್ನ ಕೇಳುತ್ತಾರೆ, ಆಗ ಸಂಗೀತ ಅವರು ನನಗೆ ಹುಡುಗರೇ ಇಷ್ಟಇಲ್ಲ, ರಿಜೆಕ್ಟ್ ಮಾಡ್ತೀನಿ ಎಲ್ಲರನ್ನು ಅಂತ ಹೇಳ್ತಾರೆ. ಆಗ ನಮ್ರತಾ ಅವರು ಯಾವ ಥರ ಹುಡುಗ ಮದುವೆ ಅಗೋಕೆ ಇಷ್ಟ ಆಗ್ತಾರೆ ಹೇಳಿ ಎಂದು ಮತ್ತೆ ಕೇಳಿದಾಗ, ಸಂಗೀತ ಕೆಲವು ಗುಣಗಳನ್ನ ಹೇಳ್ತಾರೆ.

ಸಂಗೀತ ಅವರು ಮದುವೆಯಾಗೋ ಹುಡುಗ ಲೌಡ್ ಆಗಿರಬಾರದು ಅಂದರೆ ಹುಡುಗನಲ್ಲಿ ಜೋರು ಧ್ವನಿ ಇರಬಾರದು.. ‘ನಾನು ಏನ್ ಮಾಡ್ತೀನಿ ಅಂತ ನನಗಿಂತ ಮೊದಲು ನನ್ನ ಹುಡುಗನಿಗೆ ಗೊತ್ತಿರಬೇಕು. ನನ್ನ ಫ್ರೆಂಡ್ಸ್ ಇದನ್ನ ಊಹೆ ಮಾಡ್ತಾರೆ. ಸಂಗೀತದಲ್ಲಿ ಒಳ್ಳೆ ಟೇಸ್ಟ್ ಇರಬೇಕು, ಎ. ಆರ್. ರೆಹಮಾನ್ ಅವರ ಹಾಡುಗಳನ್ನ ಇಷ್ಟಪಡಬೇಕು. ರೊಮ್ಯಾಂಟಿಕ್ ಎಮೋಷನಲ್ ಹಾಡುಗಳು ಇಷ್ಟವಾಗಬೇಕು. ನನ್ನ ಹುಡುಗನಿಗೆ ಡ್ಯಾನ್ಸ್ ಬರಬೇಕು.

ನನ್ನ ಹುಡುಗನಿಗೆ ಗಿಟಾರ್ ನುಡಿಸೋಕೆ ಬರಬೇಕು. ನನ್ ಜೊತೆ ಜಗಳ ಆಡೋದು ಜಾಸ್ತಿನೇ ಇರುತ್ತೆ. ಅದನ್ನ ಅಲ್ಲೇ ಅರ್ಥ ಮಾಡಿಕೊಳ್ಳೋ ಹುಡುಗ ಆಗಿರಬೇಕು. ಅವನ ನಗು ಚೆನ್ನಾಗಿರಬೇಕು. ನನ್ನ ಕಟ್ಟಿಹಾಕಬಾರದು, ನಾನು ಫ್ರೀ ಬರ್ಡ್.. ಈ ಥರ ಇರೋ ಹುಡುಗ ಸಿಗಲ್ಲ.. ಅದಕ್ಕೆ ನಾನು ಮದುವೆ ಆಗಲ್ಲ..” ಎಂದು ಹೇಳಿದ್ದಾರೆ ಸಂಗೀತ. ಇವರು ಮದುವೆ ಆಗೋ ಹುಡುಗನಲ್ಲಿ ಈ ಎಲ್ಲಾ ಕ್ವಾಲಿಟಿ ಇರಬೇಕಂತೆ.

Leave A Reply

Your email address will not be published.