Sangeetha Sringeri: ಸಂಗೀತ ಮೇಲಿನ ಪ್ರೀತಿಯಿಂದ ಕೆಲಸವನ್ನೇ ಬಿಟ್ಟಿದ್ದರಂತೆ ಅವರ ಅತ್ತಿಗೆ ಸುಚಿ! ಅತ್ತಿಗೆ ನಮ್ಮವಳಲ್ಲ ಎನ್ನುವ ಪ್ರಪಂಚದ ನಡುವೆ ಮಾದರಿ ಅತ್ತಿಗೆ ನಾದಿನಿ!

0 17

Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ಸಂಗೀತ ಶೃಂಗೇರಿ ಎಂದು ಹೇಳಿದರೆ ತಪ್ಪಲ್ಲ. ಮನೆಯೊಳಗೆ ಸಿಂಗಲ್ ಸಿಂಹಿಣಿ ಆಗಿ ಗುರುತಿಸಿಕೊಂಡವರು ಸಂಗೀತ. ಹೊರಗಡೆ ಇವರನ್ನು ಸ್ಟ್ರಾಂಗ್ ಲೇಡಿ ಎಂದು ಗುರುತಿಸಿದ್ದಾರೆ ಜನ. ಸಂಗೀತ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲದೆ ಇದ್ದರು ಜನರ ಅಪಾರ ಪ್ರೀತಿ ಗಳಿಸಿದ್ದಾರೆ. ಇಂಥ ಸಂಗೀತ ಅವರಿಗೆ ಅವರ ಅತ್ತಿಗೆ ಲಕ್ಕಿ ಚಾರ್ಮ್ ಎಂದರೆ ತಪ್ಪಲ್ಲ.

ನಟಿ ಸಂಗೀತ ಶೃಂಗೇರಿ ಅವರು ಈ ಮೊದಲು ಕೋಟಿ ಕೊಟ್ರು ಬಿಗ್ ಬಾಸ್ ಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಬಂದು, 112 ದಿನಗಳ ಕಾಲ ಇದ್ದು, 2ನೇ ರನ್ನರ್ ಅಪ್ ಆಗಿ ಇಂದು ಸಿಂಹಿಣಿ ಸಂಗೀತ ಎಂದು ಹೆಸರು ಪಡೆದುಕೊಂಡಿದ್ದಾರೆ. ಸಂಗೀತ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು ಹರಹರ ಮಹಾದೇವ ಧಾರವಾಹಿ ಮೂಲಕ, ಬಳಿಕ ಚಾರ್ಲಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು.

ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಒಂದು ಹಾಡು, ಸೇರಿದಂತೆ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ಇವರ ಕೆರಿಯರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಗೆ ಹೋದ ಬಳಿಕ ಸಂಗೀತ ಅವರಿಗೆ ಫ್ಯಾನ್ ಫಾಲೋಯಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಹೇಳಬಹುದು. ಸಂಗೀತ ಅವರ ಫ್ಯಾಮಿಲಿ ಬಗ್ಗೆ ಕೂಡ ಜನರಿಗೆ ಗೌರವ್ ಜಾಸ್ತಿಯಾಗಿದೆ. ಬಿಗ್ ಮನೆಯೊಳಗೆ ಸಂಗೀತ ಇದ್ದಾಗ ಹೊರಗಿದ್ದು ಎಲ್ಲವನ್ನು ನೋಡಿಕೊಂಡಿದ್ದು ಅವರ ಅತ್ತಿಗೆ ಸುಚಿ.

ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಕೂಡ ಸಂಗೀತ ಅವರು ಬಹಳಷ್ಟು ಸಾರಿ ಸುಚಿ ಅವರ ಹೆಸರನ್ನು ಹೇಳಿದ್ದರು. ಸುಚಿ ಅವರು ಕಂಪನಿಯೊಂದರಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಸಂಗೀತ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಎಲ್ಲವನ್ನು ನೋಡಿಕೊಳ್ಳಬೇಕಿರುವ ಸಲುವಾಗಿ ಕೆಲಸವನ್ನೇ ಬಿಟ್ಟು, ಸಂಗೀತ ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಹಾಗೂ ಇನ್ನಿತರ ವಿಚಾರಗಳನ್ನು ನೋಡಿಕೊಂಡಿದ್ದಾರೆ.

ಸಂಗೀತ ಅವರು ಮನೆಯವರನ್ನು ತಮ್ಮ ಕೆರಿಯರ್ ಇಂದ ದೂರವೇ ಇಟ್ಟಿದ್ದರು. ಆದರೆ ಅವರ ಅತ್ತಿಗೆ ಇಂದು ಎಲ್ಲರಿಗು ಮಾದರಿ ಆಗಿದ್ದಾರೆ ಎಂದರೆ ತಪ್ಪಲ್ಲ. ಸಂಗೀತ ಅವರ ಅತ್ತಿಗೆ ಸುಚಿತ್ರ ಮತ್ತು ಅಣ್ಣ ಸಂತೋಷ್ ಕುಮಾರ್ ಅವರದ್ದು 13 ವರ್ಷಗಳ ಲವ್ ಸ್ಟೋರಿ ಆಗಿದ್ದು, 2 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದಾರೆ. ಸಂಗೀತ ಅವರಿಗೆ ಸುಚಿತ್ರ ಅವರು ಎರಡನೇ ತಾಯಿಯ ಹಾಗೆ ಆಗಿದ್ದಾರೆ.

Leave A Reply

Your email address will not be published.