Sangeetha Sringeri: ಕರ್ನಾಟಕದ ಸಿಂಹಿಣಿ ಸಂಗೀತ ಬಿಗ್ ಬಾಸ್ ಮನೆಗೆ ಬರಲು ಕಾರಣ ಈ ವ್ಯಕ್ತಿ ಅಂತೆ.. ಯಾರು ಗೊತ್ತಾ?

0 16

Sangeetha Sringeri: ನಟಿ ಸಂಗೀತ ಶೃಂಗೇರಿ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಬಗ್ಗೆ ಈಗ ಎಲ್ಲರಿಗೂ ಗೊತ್ತಿದೆ. ಸಂಗೀತ ಅವರು ಇಂದು ಕರ್ನಾಟಕದಲ್ಲಿ ಸಿಂಹಿಣಿ ಎಂದೇ ಹೆಸರು ಪಡೆದಿದ್ದಾರೆ. ಬಿಗ್ ಬಾಸ್ ಮನೆಯ ಅತ್ಯಂತ ಸ್ಟ್ರಾಂಗ್ ಲೇಡಿ ಸ್ಪರ್ಧಿ ಆಗಿದ್ದ ಸಂಗೀತ ಅವರು ಬಿಗ್ ಬಾಸ್ ಸ್ಪರ್ಧೆಗೆ ಹೋಗೋದಕ್ಕೆ ಕಾರಣ ಯಾರು ಗೊತ್ತಾ? ಸಂಗೀತ ಅವರೇ ನೀಡಿರುವ ಮಾಹಿತಿ ಇದು…

ಸಂಗೀತ ಶೃಂಗೇರಿ ಅವರು ನಟನೆ ಶುರು ಮಾಡಿದ್ದು ಹರ ಹರ ಮಹಾದೇವ ಧಾರವಾಹಿ ಮೂಲಕ. ಸತಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ಸಂಗೀತ. ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಚಾರ್ಲಿ777 ಮೂಲಕ ಎಲ್ಲಾ ಭಾಷೆಯ ಚಿತ್ರರಂಗಕ್ಕೂ ಪರಿಚಯವಾಗಿದ್ದರು. ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು ಸಂಗೀತ. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟರು..

ಬಿಗ್ ಬಾಸ್ ಮನೆಗೆ ಹೋದ ಮೊದಲ ವಾರ ಕರ್ನಾಟಕ ಕ್ರಶ್ ಎಂದು ಹೆಸರು ಪಡೆದಿದ್ದ ಸಂಗೀತ, ಮನೆಯಿಂದ ಹೊರಬರುವ ವೇಳೆ Lioness of Karnataka ಎಂದೇ ಹೆಸರು ಪಡಿದಿದ್ದಾರೆ. ಈ ಸೀಸನ್ ನಲ್ಲಿ ಸಂಗೀತ ಅವರೇ ಗೆಲ್ಲುತ್ತಾರೆ ಎಂದು ಹೆಚ್ಚು ಜನ ಊಹೆ ಮಾಡಿದ್ದರು. ಸಂಗೀತ ಅವರು ವಿನ್ನರ್ ಆಗದೆ ಇದ್ದರು ಸಹ, ಕೋಟ್ಯಾಂತರ ಕನ್ನಡಿಗರ ಹೃದಯ ಗೆದ್ದು, ಒಳ್ಳೆಯ ಸ್ಥಾನ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮುಗಿದ ನಂತರ್ಸ್ ಸಂಗೀತ ಅವರು ಇಂಟರ್ವ್ಯೂ ಮತ್ತು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಇಂಟರ್ವ್ಯೂ ಗಳಲ್ಲಿ ಬಿಗ್ ಬಾಸ್ ಜರ್ನಿ ಬಗ್ಗೆ ಸಾಕಷ್ಟು ವಿಚಾರ ತಿಳಿಸಿದ್ದಾರೆ. ಹಾಗೆಯೇ ಅಭಿಮಾನಿಗಳನ್ನು ಸಹ ಭೇಟಿ ಮಾಡುತ್ತಿದ್ದಾರೆ. ಜನರ ಪ್ರೀತಿಯಿಂದ ತುಂಬಾ ಖುಷಿಯಾಗಿದೆ ಎಂದು ಕೂಡ ಹೇಳಿದ್ದಾರೆ ಸಂಗೀತ. ಇದೀಗ ಸಂಗೀತ ಅವರ ಬಗ್ಗೆ ಮತ್ತೊಂದು ವಿಚಾರ ತಿಳಿದುಬಂದಿದೆ.

ಸಂಗೀತ ಅವರು ಬಿಗ್ ಬಾಸ್ ಗೆ ಹೋಗಲು, ಇಷ್ಟು ಸ್ಟ್ರಾಂಗ್ ಆಗಿ ಇರಲು ಕಾರಣ ಯಾರು ? ಎನ್ನುವ ಪ್ರಶ್ನೆಯೊಂದು ಕೇಳಿಬಂದಿದ್ದು, ಅದಕ್ಕೆ ಸಂಗೀತ ಅವರೇ ಉತ್ತರ ಕೊಟ್ಟಿದ್ದಾರೆ. ಬಿಗ್ ಬಾಸ್ ಗೆ ಹೋಗುವುದಕ್ಕೆ ಕಾರಣ ಅವರ ಅತ್ತಿಗೆ ಸುಚಿ, ಅವರ ಸಪೋರ್ಟ್ ಇಂದಲೇ ಸಂಗೀತ ಬಿಗ್ ಬಾಸ್ ಗೆ ಹೋಗಿ ಅಷ್ಟು ಸ್ಟ್ರಾಂಗ್ ಆಗಿದ್ದರು ಎಂದು ತಿಳಿಸಿದ್ದಾರೆ ಸಂಗೀತ.

Leave A Reply

Your email address will not be published.