Sangeetha Sringeri: ಶೃಂಗೇರಿಗೆ ಹೋದ ಸಂಗೀತ ಅವರಿಗೆ ಅಭಿಮಾನಿಯಿಂದ ಸಿಕ್ತು ಸ್ಪೆಷಲ್ ಗಿಫ್ಟ್! ಏನದು ಗೊತ್ತಾ?

Written by Pooja Siddaraj

Published on:

Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ಸಂಗೀತ ಶೃಂಗೇರಿ ಎಂದು ಹೇಳಿದರೆ ತಪ್ಪಲ್ಲ. ಮನೆಯೊಳಗೆ ಸಿಂಗಲ್ ಸಿಂಹಿಣಿ ಆಗಿ ಗುರುತಿಸಿಕೊಂಡವರು ಸಂಗೀತ. ಹೊರಗಡೆ ಇವರನ್ನು ಸ್ಟ್ರಾಂಗ್ ಲೇಡಿ ಎಂದು ಗುರುತಿಸಿದ್ದಾರೆ ಜನ. ಸಂಗೀತ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲದೆ ಇದ್ದರು ಜನರ ಅಪಾರ ಪ್ರೀತಿ ಗಳಿಸಿದ್ದಾರೆ. ಇಂಥ ಸಂಗೀತ ಅವರಿಗೆ ಅಭಿಮಾನಿಯಿಂದ ಸಿಕ್ಕ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?

ನಟಿ ಸಂಗೀತ ಶೃಂಗೇರಿ ಅವರು ಈ ಮೊದಲು ಕೋಟಿ ಕೊಟ್ರು ಬಿಗ್ ಬಾಸ್ ಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಬಂದು, 112 ದಿನಗಳ ಕಾಲ ಇದ್ದು, 2ನೇ ರನ್ನರ್ ಅಪ್ ಆಗಿ ಇಂದು ಸಿಂಹಿಣಿ ಸಂಗೀತ ಎಂದು ಹೆಸರು ಪಡೆದುಕೊಂಡಿದ್ದಾರೆ. ಸಂಗೀತ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು ಹರಹರ ಮಹಾದೇವ ಧಾರವಾಹಿ ಮೂಲಕ, ಬಳಿಕ ಚಾರ್ಲಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು.

ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಒಂದು ಹಾಡು, ಸೇರಿದಂತೆ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ಇವರ ಕೆರಿಯರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಗೆ ಹೋದ ಬಳಿಕ ಸಂಗೀತ ಅವರಿಗೆ ಫ್ಯಾನ್ ಫಾಲೋಯಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಹೇಳಬಹುದು. ಸಂಗೀತ ಅವರ ಫ್ಯಾಮಿಲಿ ಬಗ್ಗೆ ಕೂಡ ಜನರಿಗೆ ಗೌರವ ಜಾಸ್ತಿಯಾಗಿದೆ.

ಈಗ ಸಂಗೀತ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ತಮ್ಮ ಊರು ಶೃಂಗೇರಿಗೆ ಹೋಗಿ ಅಭಿಮಾನಿಗಳನ್ನು ಭೇಟಿ ಮಾಡಿದ್ದು, ಈ ವೇಳೆ ಸಂಗೀತ ಅವರಿಗೆ ಅಭಿಮಾನಿಯೊಬ್ಬರು ಮೂಗುತಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದರಿಂದ ಖುಷಿಯಾಗಿರುವ ಸಂಗೀತ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಶೇರ್ ಮಾಡಿ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.

ಹಾಗೆಯೇ ಸಂಗೀತ ಅವರ ಆಟೋಗ್ರಾಫ್ ಪಡೆದ ಅಭಿಮಾನಿ ಅದನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇಷ್ಟೆಲ್ಲ ಜನರ ಪ್ರೀತಿ ಗಳಿಸಿದ್ದಾರೆ ಸಂಗೀತ. ಇಂದು ಸಂಗೀತ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಾರೆ.

Leave a Comment