Sangeetha Sringeri: ಬಿಗ್ ಬಾಸ್ ಇಂದ ನಟಿ ಸಂಗೀತ ಶೃಂಗೇರಿ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ?

0 32

Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ಸಂಗೀತ ಶೃಂಗೇರಿ ಎಂದು ಹೇಳಿದರೆ ತಪ್ಪಲ್ಲ. ಮನೆಯೊಳಗೆ ಸಿಂಗಲ್ ಸಿಂಹಿಣಿ ಆಗಿ ಗುರುತಿಸಿಕೊಂಡವರು ಸಂಗೀತ. ಹೊರಗಡೆ ಇವರನ್ನು ಸ್ಟ್ರಾಂಗ್ ಲೇಡಿ ಎಂದು ಗುರುತಿಸಿದ್ದಾರೆ ಜನ. ಸಂಗೀತ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲದೆ ಇದ್ದರು ಜನರ ಅಪಾರ ಪ್ರೀತಿ ಗಳಿಸಿದ್ದಾರೆ. ಇಂಥ ಸಂಗೀತ ಅವರಿಗೆ ಬಿಗ್ ಬಾಸ್ ಇಂದ ಸಿಕ್ಕಿರೋ ಸಂಭಾವನೆ ಎಷ್ಟು ಗೊತ್ತಾ?

ನಟಿ ಸಂಗೀತ ಶೃಂಗೇರಿ ಅವರು ಈ ಮೊದಲು ಕೋಟಿ ಕೊಟ್ರು ಬಿಗ್ ಬಾಸ್ ಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಬಂದು, 112 ದಿನಗಳ ಕಾಲ ಇದ್ದು, 2ನೇ ರನ್ನರ್ ಅಪ್ ಆಗಿ ಇಂದು ಸಿಂಹಿಣಿ ಸಂಗೀತ ಎಂದು ಹೆಸರು ಪಡೆದುಕೊಂಡಿದ್ದಾರೆ. ಸಂಗೀತ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು ಹರಹರ ಮಹಾದೇವ ಧಾರವಾಹಿ ಮೂಲಕ, ಬಳಿಕ ಚಾರ್ಲಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು.

ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಒಂದು ಹಾಡು, ಸೇರಿದಂತೆ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ಇವರ ಕೆರಿಯರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಗೆ ಹೋದ ಬಳಿಕ ಸಂಗೀತ ಅವರಿಗೆ ಫ್ಯಾನ್ ಫಾಲೋಯಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಹೇಳಬಹುದು. ಅಷ್ಟಕ್ಕೂ ಬಿಗ್ ಬಾಸ್ ಮನೆಯೊಳಗೆ ಸಂಗೀತ ಅವರು 14 ವಾರಗಳ ಕಾಲ ಇದ್ದಿದ್ದಕ್ಕೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಸಂಭಾವನೆ ಬಗ್ಗೆ ಖುದ್ದು ಸಂಗೀತ ಅವರೇ ಮಾತನಾಡಿದ್ದಾರೆ. ಬಿಗ್ ಬಾಸ್ ಫಿನಾಲೆ ಮುಗಿದ ಬಳಿಕ ಸಂಗೀತ ಅವರು ಇಂಟರ್ವ್ಯೂಗಳಲ್ಲಿ ಬ್ಯುಸಿ ಆಗಿದ್ದು, ಅದರಲ್ಲಿ ಸಂಭಾವನೆ ಬಗ್ಗೆ ಮಾತನಾಡಿ, ನನ್ನ ಸಂಭಾವನೆ ಎಷ್ಟು ಅಂತ ನನ್ನ ಮನಯವರಿಗೆ ಕೂಡ ಗೊತ್ತಿಲ್ಲ, ಅವರಿಗೆ ಗೊತ್ತಾಗೋದು ಬೇಡ, ನನ್ನ ನೋವು ನನಗೆ ಇರಲಿ..ಎಂದು ಹೇಳಿದ್ದಾರೆ ಸಂಗೀತ.

Leave A Reply

Your email address will not be published.