Sania Mirza: ಶೋಯೆಬ್ ಮಲಿಕ್ ಮೂರನೇ ಮದುವೆಯಾದರು ಆತನ ಬಗ್ಗೆ ಒಂದು ಮಾತನ್ನು ಹೇಳಲಿಲ್ಲ ಸಾನಿಯಾ ಮಿರ್ಜಾ! ಇದೆ ಅಲ್ವಾ ಭಾರತನಾರಿಯ ಸಂಸ್ಕೃತಿ!

Written by Pooja Siddaraj

Published on:

Sania Mirza: ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಸಾನಿಯಾ ಮಿರ್ಜಾ ಅವರು ಟೆನ್ನಿಸ್ ಕ್ರೀಡೆಯಲ್ಲಿ ನಮ್ಮ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ದೊಡ್ಡದಾಗಿ ಹೆಸರು ತಂದುಕೊಟ್ಟಿದ್ದಾರೆ. ಆದರೆ ಮದುವೆಯ ವಿಚಾರಕ್ಕೆ ಇವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಯಾಕೆಂದರೆ ಸಾನಿಯಾ ಅವರು ಮದುವೆಯಾಗಿದ್ದು ಪಾಕಿಸ್ತಾನಿ ಕ್ರಿಕೆಟಿಗನ ಜೊತೆಗೆ..

ಹೌದು, ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಡನೆ 2009ರಲ್ಲಿ ಮದುವೆಯಾದರು. ಆದರೆ ಮಲಿಕ್ ಅವರಿಗೆ ಅದು ಎರಡನೇ ಮದುವೆ ಆಗಿತ್ತು. ಅದಾಗಲೇ ಮದುವೆಯಾಗಿದ್ದ ಮಲಿಕ್ ವಿಚ್ಛೇದನ ನೀಡಿ, ಎರಡನೇ ಮದುವೆಯಾದರು. ಪಾಕಿಸ್ತಾನಿ ಕ್ರಿಕೆಟಿಗನ ಜೊತೆಗೆ ಮದುವೆಯಾಗಿದ್ದಕ್ಕೆ ಸಾನಿಯಾ ಮಿರ್ಜಾ ಅವರು ತೀವ್ರವಾದ ಅವಮಾನಗಳನ್ನು ಎದುರಿಸಬೇಕಾಯಿತು.

ಆದರೆ ಇಬ್ಬರ ದಾಂಪತ್ಯ ಜೀವನ ಚೆನ್ನಾಗಿದೆ ಎಂದೇ ಎಲ್ಲರೂ ಅಂದುಕೊಂಡರು. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಜನಿಸಿದ್ದಾರೆ. ಆದರೆ ಇತ್ತೀಚೆಗೆ ಇವರಿಬ್ಬರು ದೂರವಾಗಿ ವಿಚ್ಛೇದನ ಪಡೆದಿದ್ದಾರೆ ಎನ್ನುವ ವಿಚಾರ ತಿಳಿದುಬಂದಿತು. ಹೌದು, ವಿಚ್ಛೇದನದ ವಿಷಯ ಗೊತ್ತಾದ ಕೆಲ ತಿಂಗಳುಗಳಲ್ಲೇ ಶೋಯೆಬ್ ಮಲಿಕ್ ಈಗ ಮೂರನೇ ಮದುವೆಯಾಗಿದ್ದಾರೆ. ನಟಿ ಸನಾ ಅವರೊಡನೆ ಮದುವೆಯಾಗಿದ್ದು, ಇದರ ಫೋಟೋಸ್ ಎಲ್ಲವೂ ವೈರಲ್ ಆಗಿದೆ.

ಮೂಲಗಳ ಪ್ರಕಾರ ಶೋಯೆಬ್ ಅವರಿಗೆ ಮದುವೆ ನಂತರ ಅಕ್ರಮ ಸಂಬಂಧಗಳು ಇದ್ದ ಕಾರಣಕ್ಕೆ ಸಾನಿಯಾ ವಿಚ್ಛೇದನ ಪಡೆದರು ಎಂದು ಕೂಡ ಹೇಳಲಾಗುತ್ತದೆ. ಇದೆಲ್ಲವೂ ಒಂದು ಕಡೆಯಾದರೆ, ಶೋಯೆಬ್ ಅವರ ಮದುವೆಯಾದ ಬಳಿಕ ಸಾನಿಯಾ ಅವರು ಒಂದು ಪ್ರೆಸ್ ಕಾನ್ಫರೆನ್ಸ್ ಮಾಡಲಿಲ್ಲ, ಇಂಟರ್ವ್ಯೂ ನೀಡಲಿಲ್ಲ, ಏನನ್ನು ರಿಯಾಕ್ಟ್ ಮಾಡಲಿಲ್ಲ. ಆತನಿಗೆ ಒಳ್ಳೆಯದಾಗಲಿ ಎಂದು ಒಂದು ಸ್ಟೇಟ್ಮೆಂಟ್ ಬಿಡುಗಡೆ ಮಾಡಿದರು ಅಷ್ಟೇ. ಸಾನಿಯಾ ಅವರ ಈ ಗುಣ ನೋಡಿ, ನೆಟ್ಟಿಗರು ಫಿದಾ ಆಗಿದ್ದಾರೆ.

Leave a Comment