ಸೆಲ್ಫಿ ನೆಪದಲ್ಲಿ ಅಭಿಮಾನಿ ಮಾಡಿದ ಕೆಲಸಕ್ಕೆ ಸಿಟ್ಟಾದ ಸಾನ್ಯಾ: ಬಿತ್ತು ಧರ್ಮದೇಟುಗಳು

0
40

ಬಿಗ್ ಬಾಸ್ ಖ್ಯಾತಿಯ(Big Boss Kannada) ನಟಿ ಸಾನ್ಯಾ ಅಯ್ಯರ್(Sanya Iyyer) ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆದಂತಹ 30ನೇ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಇಲ್ಲಿ ನಡೆದಂತಹ ಒಂದು ಘಟನೆ ಇದೀಗ ಸುದ್ದಿಯಾಗಿದೆ. ಹೌದು, ಕಂಬಳ ಕೂಟದಲ್ಲಿ ನಟಿ ಸಾನ್ಯಾ(Sanya) ಅವರ ಕೈ ಹಿಡಿದು ಎಳೆದ ಘಟನೆಯು ನಡೆದಿದೆ. ಈ ಕಂಬಳ ಕೂಟವು ಶನಿವಾರ ರಾತ್ರಿ ನಡೆದಿದ್ದು, ನಟಿಯು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಟಿಯು ಭಾಷಣ ಮಾಡುವಾಗ ಮತ್ತು ನಂತರ ನಡೆದ ಘಟನೆಯು ಈಗ ಸುದ್ದಿಯಾಗಿದೆ.

ಸಾನ್ಯಾ ಅಯ್ಯರ್(Sanya Iyyer) ಭಾಷಣವನ್ನು ಆರಂಭಿಸುತ್ತಾ, ಐ ಲವ್ ಯೂ ಪುತ್ತೂರು ಎಂದು ಹೇಳಿದ್ದು, ಅಲ್ಲೇ ಕುಳಿತಿದ್ದ ಅಭಿಮಾನಿಯೊಬ್ಬನು ಐ ಲವ್ ಯೂ ಸಾನ್ಯಾ(Sanya I Love You) ಎಂದು ನಟಿಯ ಮಾತಿಗೆ ಪ್ರತಿಯಾಗಿ ಕೂಗಿ ಕೊಂಡಿದ್ದಾನೆ. ನಟಿ ಭಾಷಣ ಮಾಡುವಾಗ ಐದಾರು ಬಾರಿ ಆತನು ಈ ರೀತಿ ಕೂಗಿ ಕೊಂಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ವ್ಯಕ್ತಿ ಅನಂತರ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಸಾನ್ಯಾ ಅವರು ಭಾಷಣವನ್ನು ಮುಗಿಸಿ ವೇದಿಕೆಯಿಂದ ಇಳಿದು ಬರುವಾಗ ಆತ ಸೆಲ್ಫಿ ನೆಪದಲ್ಲಿ ಸಾನಿಯಾ ಅವರ ಕೈ ಹಿಡಿದಿದ್ದಾನೆ.

ಸಾನ್ಯಾ ಅವರ ಬಳಿ ಸೆಲ್ಫಿ ಕೇಳಲು ಬಂದ ವ್ಯಕ್ತಿಯು ನಟಿಯ ಕೈಯನ್ನು ಹಿಡಿದಿದ್ದು ಕಂಡು, ನಟಿ ಕೋಪದಿಂದಲೇ ಸೆಲ್ಫಿ ನೀಡಲು ನಿರಾಕರಿಸಿದ್ದಾರೆ. ಆ ಹುಡುಗನ ಈ ವರ್ತನೆ ಅಲ್ಲಿದ್ದವರಿಗೆ ಸಹಾ ಕೋಪವನ್ನು ತರಿಸಿದೆ. ಇನ್ನು ಆತ ನಶೆಯಲ್ಲಿದ್ದ ಎನ್ನುವ ವಿಷಯವನ್ನು ತಿಳಿದ ಮೇಲೆ ಅಲ್ಲಿದ್ದವರು ಆತನಿಗೆ ಧರ್ಮದೇಟು ನೀಡಿದ್ದಾರೆ. ಅನಂತರ ಆತನನ್ನು ಕಂಬಳದಿಂದ ದೂರ ಕಳಿಸಿದ್ದಾರೆ. ಏಟು ತಿಂದವನ್ನು ಅಳುತ್ತಾ‌ ಮನೆ ಕಡೆ ಹೋದ ಎನ್ನಲಾಗಿದೆ. ಇನ್ನು ಈ ವಿಚಾರವಾಗಿ ಪೋಲಿಸರಿಗೆ ಯಾವುದೇ ದೂರು ನೀಡಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here