Sanya Iyyer :ಬಿಗ್ ಬಾಸ್ ಸೀಸನ್ ಒಂಬತ್ತರ(Big Boss Kannada ) ಸ್ಪರ್ಧಿಯಾಗಿದ್ದ ಸಾನ್ಯಾ ಅಯ್ಯರ್ (Sanya Iyyer) ಕಳೆದೆರಡು ದಿನಗಳಿಂದ ಮಾದ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ನಟಿ ಸಾನ್ಯಾ ಅಯ್ಯರ್ ಅವರು ಪುತ್ತೂರಿನಲ್ಲಿ ನಡೆದಂತಹ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ನಡೆದ ಅ ಹಿ ತ ಕ ರ ಘಟನೆಯೊಂದು ಎಲ್ಲೆಡೆ ಸುದ್ದಿಯಾಗಿದೆ. ಕಾರ್ಯಕ್ರಮದಲ್ಲಿ ಹಾಜರಾಗಿದ್ದ ನಟಿ ಸಾನ್ಯಾ ಅಯ್ಯರ್ ಅನಂತರ ಕಂಬಳ ವೀಕ್ಷಣೆಗೆ ಸ್ನೇಹಿತೆಯರ ಜೊತೆಗೆ ಹೋದಂತಹ ಸಂದರ್ಭದಲ್ಲಿ ಅಲ್ಲೊಬ್ಬ ಯುವಕ ಅನುಚಿತವಾಗಿ ವರ್ತಿಸಿದ್ದು, ಈ ವಿಚಾರದ ಬಗ್ಗೆ ನಟಿ ಮಾದ್ಯಮಗಳ ಮುಂದೆ ಸ್ಪಷ್ಟನೆಯನ್ನು ನೀಡಿದ್ದಾರೆ.

ನಟಿಯು ಮಾತನಾಡುತ್ತಾ ತಮ್ಮ ಆ ಕ್ರೋ ಶವನ್ನು ಹೊರ ಹಾಕಿದ್ದಾರೆ. ನಟಿ ಮಾತನಾಡುತ್ತಾ, ಯಾವನೋ ಒಬ್ಬ ಕುಡಿದಿರೋನು ಬಂದು ನಮ್ಮ ಮೈ ಮುಟ್ತಾನೆ, ನಮ್ಮ ಎದೆ ಮುಟ್ತಾನೆ ಅಂದ್ರೆ ನಾವು ಸುಮ್ಮನಿರಬೇಕಾ? ನಮ್ಮ ಕಣ್ಮುಂದೆ ಒಬ್ಬರಿಗೆ ಹೀಗೆ ನಡೆಯುತ್ತೆ ಅಂದಾಗ ನಾವು ಹೇಗೆ ತಾನೇ ಸುಮ್ಮನಾಗಿರೋಕೆ ಆಗುತ್ತೆ? ರಸ್ತೆಯಲ್ಲಿ ಹೋಗಬೇಕಾದರೆ ಯಾವನೋ ಬಂದು ನಮ್ಮನ್ನು ಮುಟ್ಟಿದಾಗಲೂ ಸಹಾ ನಾವು ಸುಮ್ಮನೆ ಇರಬೇಕಾ? ಸರ್ ಎಂದು ಸಾನ್ಯ ಅವರು ಮಾದ್ಯಮಗಳ ಮುಂದೆ ಪ್ರಶ್ನೆ ಮಾಡಿದ್ದಾರೆ.
ಸೆಲ್ಫಿ ನೆಪದಲ್ಲಿ ಅಭಿಮಾನಿ ಮಾಡಿದ ಕೆಲಸಕ್ಕೆ ಸಿಟ್ಟಾದ ಸಾನ್ಯಾ: ಬಿತ್ತು ಧರ್ಮದೇಟುಗಳು
ನಮ್ಮ ಸಮಾಜದಲ್ಲಿ ಎಷ್ಟೋ ಜನ ಹೆಣ್ಣು ಮಕ್ಕಳು ಗಂಡಸರಿಗೆ ಭ ಯ ಪಟ್ಟು ಇಂತಹ ವಿಚಾರಗಳನ್ನು ಹೇಳಿಕೊಳ್ಳೋದಕ್ಕೆ ಭ ಯ ಪಡ್ತಾರೆ. ನಾವು ಹೀಗೆ ಸುಮ್ಮನಿದ್ದಾಗಲೇ ಇಂತಹ ಕೆಟ್ಟ ಗಂಡು ಮಕ್ಕಳು ಹುಟ್ಟಿಕೊಳ್ಳೋದು. ಹೆಣ್ಣು ಮಕ್ಕಳು ಅಂತ ನಮ್ಮನ್ನು ನಾವು ಎಲ್ಲೋ ಕೆಳಗೆ ಹಾಕ್ಕೊಂಡ್ರೆ ಈ ಸಮಾಜದಲ್ಲಿ ನಾವು ಬದುಕೋಕೆ ಆಗೋದಿಲ್ಲ. ಒಂದು ಹೆಣ್ಣು ಮಗುವಿಗೆ ತೊಂದರೆ ಆಗುತ್ತಿದೆ ಎಂದಾಗ ನಾವು ಸುಮ್ಮನಿರಬಾರದು, ಅದರ ವಿ ರು ದ್ಧ ದನಿ ಎತ್ತಬೇಕು ಎಂದು ನಟಿ ಮಾತನಾಡಿದ್ದಾರೆ.