Sara Annaiah: ನೀಲಿ ಸೀರೆಯಲ್ಲಿ ಮಿಂಚಿದ ಸಾರಾ! ಫಿದಾ ಆದ ಫ್ಯಾನ್ಸ್!

Written by Pooja Siddaraj

Published on:

Sara Annaiah: ಸಾರಾ ಅಣ್ಣಯ್ಯ ಅವರು ಕಿರುತೆರೆ ಲೋಕದ ಸ್ಟೈಲ್ ಐಕಾನ್ ಎಂದು ಹೇಳಿದರೆ ತಪ್ಪಲ್ಲ. ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರವಾಹಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ಸಾರಾ ಅಣ್ಣಯ್ಯ ಅವರ್ಜ್ ಆ ಧಾರಾವಾಹಿಯ ವರುಧಿನಿ ಪಾತ್ರದ ಮೂಲಕವೇ ಗುರುತಿಸಿಕೊಂಡಿದ್ದರು. ವರುಧಿನಿ ಒಂದು ರೀತಿಯಲ್ಲಿ ನೆಗಟಿವ್ ಶೇಡ್ ಇದ್ದಜ್ ತನಗೆ ಬೇಕಾದ್ದನ್ನು ಏನೇ ಮಾಡಿಯಾದರು ಪಡೆದುಕೊಳ್ಳುವ ಪಾತ್ರ ಆಗಿತ್ತು. ಈ ಪಾತ್ರದ ಮೂಲಕ ಜನರಿಗೆ ಇಷ್ಟವಾಗಿದ್ದರು ಸಾರಾ.

ಕನ್ನಡತಿ ಮುಗಿದ ಬಳಿಕ ಜೀಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಇವರದ್ದು ಶ್ರೀಮಂತ ಅಹಂಕಾರಿ ಹುಡುಗಿಯ ಪಾತ್ರವೇ. ಲವ್ ಮಾಡಿ ಮಿಡ್ಲ್ ಹುಡುಗನನ್ನು ಮದುವೆಯಾಗಿ ಅಡ್ಜಸ್ಟ್ ಆಗುವುದಕ್ಕೆ ಹೆಣಗಾಡುತ್ತಿರುವ ಪಾತ್ರವಿದು. ಅಮೃತಧಾರೆ ಧಾರಾವಾಹಿಗು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಾರ ಅವರ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ..

ಸಾರಾ ಅಣ್ಣಯ್ಯ ಅವರು ತೆರೆಮೇಲೆ ಇಂಥ ಪಾತ್ರಗಳಲ್ಲಿ ಕಾಣಿಸಿಕೊಂಡರು ಸಹ ಬಹಳ ಒಳ್ಳೆಯ ಸ್ವಭಾವ ಹೊಂದಿರುವ ಹುಡುಗಿ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸಾರಾ ಅವರು ಸಾಕಷ್ಟು ಫೋಟೋಸ್ ಮತ್ತು ತಮ್ಮ ತಂಡದ ಜೊತೆಗೆ ರೀಲ್ಸ್ ಮಾಡಿ ಅವುಗಳನ್ನು ಶೇರ್ ಮಾಡುತ್ತಾರೆ. ಅವುಗಳು ವೈರಲ್ ಸಹ ಆಗುತ್ತದೆ.

ಹೆಚ್ಚಾಗಿ ಫೋಟೋಶೂಟ್ ಗಳ ಮೂಲಕ ಸದ್ದು ಮಾಡುವ ಸಾರಾ ಅಣ್ಣಯ್ಯ ಅವರು ಇದೀಗ ನೀಲಿ ಬಣ್ಣದ ಸೀರೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಇಂಥ ಸುಂದರಿ ಎಲ್ಲೂ ಇಲ್ಲ ಎಂದು ಸಾರಾ ಅವರ ಸೌಂದರ್ಯವನ್ನು ಹೊಗಳುತ್ತಿದ್ದಾರೆ.

Leave a Comment