ಸತತ 30 ವರ್ಷಗಳ ಕಾಲ ಇವರು ಒಬ್ಬರೇ ಮಾಡಿದ್ದೂ ಎಂತಹ ಘನಕಾರ್ಯ ಗೊತ್ತಾ!

0
58

ಕೆಲವರು ಮಾಡುವ ಕೆಲಸವನ್ನು ಅರಿಯದೆ ಅವರನ್ನು ಬೈಯುವುದು ಈ ಜಗತ್ತಿನ ಲಕ್ಷಣ.ದಶರಥ್ ಮಹಾನ್ ಜಿ ಬಗ್ಗೆ ನಿಮಗೆ ಗೊತ್ತಿರಬಹುದು.ಆತನನ್ನು ಜನ ಹುಚ್ಚ ಎಂದು ಕರೆದಿದ್ದರೂ.ಇಲ್ಲಿ ಒಬ್ಬ ಇತರಹದ ಮಹಾನ್ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು.ಅಚ್ಚರಿ ವಿಷಯ ಏನು ಎಂದರೆ ಆತನು ಕೂಡ ಭಾರತದ ಬಿಹಾರ್ ದವರು.ಆದರೆ ಇತನ ಬಗ್ಗೆ ಹೆಚ್ಚು ಯಾರಿಗೂ ತಿಳಿದಿಲ್ಲ.ಈತ ಮಾಡಿದ ಕೆಲಸ ಜಗತ್ತೇ ಬೆರಗಾಗುವಂತಹದು.

ಈ ವ್ಯಕ್ತಿಯ ಹೆಸರು ಲಾಗಿನ್ ಪೋಯನ್.ಕೋತಿಲ ಎಂಬ ಹಳ್ಳಿ ಇವರದ್ದು.ಬಿಹಾರ್ ಅತ್ಯಂತ ಹಿಂದುಳಿದ ರಾಜ್ಯ.ಬಿಹಾರ್ ದಲ್ಲಿ ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಕೂಡ ಮೂಲ ಸೌಕರ್ಯ ಇಲ್ಲದೆ ನರಳುತ್ತಿದ್ದಾರೆ.ಇದೆ ರೀತಿ ಈ ಹಳ್ಳಿಯಲ್ಲೂ ಯಾವುದೇ ಸೌಲಭ್ಯ ಇಲ್ಲ. ಈ ಊರಿನವರ ಬದುಕು ಸರಾಗವಾಗಿ ಇರಲಿಲ್ಲ.ಅಲ್ಲಿ ನೆಮ್ಮದಿ ಬದುಕಿಗೆ ಅಡೆತಡೆಗಳು ಇದ್ದವು.ಲಾಗಿನ್ ಗೆ ಹೆಚ್ಚಾಗಿ ಜೀವನ ಅಂಶಕ್ಕೆ ಯಾವುದು ಇರಲಿಲ್ಲ.ಜಮೀನ್ದಾರು ಹೊಲ ಗದ್ದೆಗಳಲ್ಲಿ, ಸೈಟ್ ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.ಇವರಿಗೂ ಒಂದು ಭೂಮಿ ಇತ್ತು ಆದರು ಏನಾದರು ಖರೀದಿ ಮಾಡುವುದಕ್ಕೆ ಸಾಧ್ಯ ಆಗುತ್ತಿರಲಿಲ್ಲ.ಮುಖ್ಯವಾಗಿ ಅಲ್ಲಿಯ ಜನರಿಗೆ ಸೂಕ್ತವಾದ ನೀರಿನ ಸೌಲಭ್ಯ ಇರಲಿಲ್ಲ.ಈ ನೀರಿನ ಕೊರತೆಯಿಂದ ಬಳಲುತ್ತಿದ್ದ ಅವರು ದುಡಿದ ದುಡ್ಡನ್ನೆಲ್ಲ ಪಕ್ಕದ ಊರಿನಿಂದ ಅಥವಾ ಹಳ್ಳಿಯಿಂದ ನೀರು ತರುವುದಕ್ಕೆ ಖರ್ಚು ಮಾಡುವ ಪರಿಸ್ಥಿತಿ ಇತ್ತು.

ಲಾಗಿನ್ ಕುಟುಂಬದವರು ಮತ್ತು ಮಕ್ಕಳು ಕೂಡ ಇದೆ ಕಾರಣಕ್ಕೆ ಹುಟ್ಟುರನ್ನು ತೊರೆದು ದೂರದ ಪಟ್ಟಣದಲ್ಲಿ ಸೆಟಲ್ ಆಗಿದ್ದರು.ಆದರೆ ತನ್ನವರೆಲ್ಲ ದೂರ ಆದರೂ ಕೂಡ ಹುಟ್ಟೂರು ಎಂಬ ಮಮತೆ ಹೊಂದಿದ್ದ ಲಾಗಿನ್ ಈ ಊರು ಬಿಡುವುದಕ್ಕೆ ಸಿದ್ದ ಇರಲಿಲ್ಲ.ಎಲ್ಲರು ವಿಧಿಯನ್ನು ದಿಕ್ಕಾರ ಮಾಡಿದರು ವರೆತು ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲಿಲ್ಲ.ಆದರೆ ಲಾಗಿನ್ ಮಾತ್ರ ಯಾರನ್ನು ದೂರಲಿಲ್ಲ. ಆತನೇ ಈ ಸಮಸ್ಸೆಯನ್ನು ಪರಿಹಾರ ಮಾಡುವುದಕ್ಕೆ ಮುಂದಾದ.ಅವನಿಗೆ ಕೆರೆಯಲ್ಲಿ ಹರಿಯುವ ನೀರನ್ನು ನೇರವಾಗಿ ಹಳ್ಳಿಗೆ ತರುವುದಕ್ಕೆ ಯೋಚನೆ ಮಾಡಿದ.ಇದರ ಬಗ್ಗೆ ಯೋಚಿಸಬೇಕಾದ ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ತಲೆ ಕೆಡಿಸಕೊಳ್ಳಲಿಲ್ಲ.ಅಲ್ಲಿ ಉದ್ದನೆ ಕಾಲುವೆ ರಚಿಸಬೇಕಿತ್ತು. ಆದರೆ ಅದಕ್ಕೆ ಬೇಕಾದಷ್ಟು ಮಾನವ ಶಕ್ತಿ ಬೇಕು.

ಲಾಗಿನ್ ಮೊದಲು ಊರಜನರಿಗೆ ಹೇಳಿ ಸಹಾಯ ಕೇಳಿದ ಆದರೆ ಬಡ್ಡೇಯನ್ನು ಗುಂದಿ ಮೈಯನ್ನು ನೋಯಿಸುವ ಕೆಲಸ ಎಂದು ಸುಮ್ಮನಾದರೂ.ಈ ಕೆಲಸವನ್ನು ಲಾಗಿನ್ ಒಬ್ಬನೇ ಮಾಡುವುದಕ್ಕೆ ಶುರು ಮಾಡಿದ.ಇದಕ್ಕೆ ಪ್ರತಿಯೊಬ್ಬರೂ ಟೀಕೆ ಮಾಡುವುದಕ್ಕೆ ಶುರು ಮಾಡಿದರು. ಅಷ್ಟೇ ಅಲ್ಲದೇ ಲಾಗಿನ್ ಪತ್ನಿ ಕೂಡ ಬೆಂಬಲ ನೀಡಲಿಲ್ಲ.ಆದರೆ ದೃಢ ಮನಸ್ಸಿನಿಂದ ಲಾಗಿನ್ ಕೆಲಸವನ್ನು ಶುರು ಮಾಡಿದ.ಆತನು 80ರ ದಶಕದ ನಡುವೆ ಪ್ರಾರಂಭ ಮಾಡಿದ. ಮುಂಜಾನೆ ಎದ್ದು ಹೊತ್ತು ಮೂಡುವ ಮುನ್ನ ಎಳೆ ಬಿಸಿಲಿನಲ್ಲಿ ಆತ ಮನೆಯಿಂದ ಹೊರಟು ಕಾಡನ್ನು ಉಕ್ಕುತ್ತಿದ್ದ .

ಲಾಗಿನ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅದೆಷ್ಟೇ ಬಿಸಿಲು ತಂಪು ಇರಲಿ, ಮಳೆ ಇರಲಿ ಆತ ಕಾರ್ಯ ಮಾತ್ರ ನಿಲ್ಲಿಸಲಿಲ್ಲ.ಲಾಗಿನ್ ಮೊದಲ ದಿನದ ಕೆಲಸದಲ್ಲಿ ಸುಮಾರು 600ಮೀಟರ್ ಹಾದಿ ಕಾಲುವೆಯನ್ನು ಕೊರೆದಿದ್ದ. ಹೀಗೆ ಕೊರೆಯುವಾಗ ಕಾಡಿನ ಮಿಕ್ಕಲು ಮಣ್ಣನ್ನು ಮಾತ್ರವಲ್ಲದೆ ಅನೇಕ ಬಾರಿ ಅಲ್ಲಿ ದೊರೆಯುತ್ತಿದ್ದ ಕಲ್ಲನ್ನು ಕೂಡ ಕತ್ತರಿಸಬೇಕಿತ್ತು.ಆದರೆ ಅವನ ಬಳಿ ಸುತ್ತಿಗೆ ಇತ್ತು ವರೆತು ಯಾವುದೇ ರೀತಿಯ ಸಾಧನ ಇರಲಿಲ್ಲ.ಆದರೂ 6 ತಿಂಗಳಲ್ಲಿ 1ಕಿಲೋಮೀಟರ್ ಕಾಲುವೆಯನ್ನು ಶ್ರಮಪಟ್ಟು ನಿರ್ಮಿಸಿದ್ದ.

ಅವನು ತೋಡಿದ್ದು 1:50 ಮೀಟರ್ ಉದ್ದ ಇದ್ದು ಅಗಲ 3 ಮೀಟರ್ ಇದ್ದವು. ವರ್ಷದಿಂದ ವರ್ಷಕ್ಕೆ ಲಾಗಿನ್ ಕೆಲಸ ಚುರುಕಾಗಿ ಸತತ 3 ದಶಕ ಒಬ್ಬನೇ ಮಾಡಿದ ಲಾಗಿನ್ ಸುಮಾರು 15 ಕಿಲೋಮೀಟರ್ ಉದ್ದನೆ ನೀರಿನ ಕಾಲುವೆಯನ್ನು ಯಶಸ್ವಿಯಾಗಿ ನಿರ್ಮಿಸಿದ್ದ.ಇನ್ನು 300 ಮೀಟರ್ ಕೊರೆದು ನೇರ ನದಿಯ ನೀರಿಗೆ ಜೋಡಿಸಿದ. ನದಿಯ ನೀರು ಮೊದಲಬಾರಿಗೆ ಕಾಲುವೆ ಮೂಲಕ ಹರಿದು ಬಂದಾಗ ಲಾಗಿನ್ ಗೆ ಆದ ಸಂತೋಷ ಅಷ್ಟಇಷ್ಟಲ್ಲ.

ಆತನ 30 ವರ್ಷಗಳ ಶ್ರಮಕ್ಕೆ ನಿಜವಾದ ಸಾರ್ಥಕತೆ ಸಿಕ್ಕ ಆ ಕ್ಷಣವನ್ನು ಆತ ಕಣ್ಣನ್ನು ತುಂಬಿಕೊಂಡು ನಿಂತಿದ್ದ. ನದಿಯ ನೀರು ಸರಾಗವಾಗಿ ಹರಿದು ಊರಿನ ಕೆರೆಗೆ ತುಂಬಿದಾಗ ಲಾಗಿನ್ ಕಣ್ಣಿನಿಂದ ಆನಂದಬಾಷ್ಪ ಜರುಗಿತು.ನಿಜಕ್ಕೂ ಇದು ಒಂದು ಪವಾಡ ದೃಶ್ಯಕರವಾಗಿತ್ತು. ಊರಿನ ಜನರು ಯಾವುದು ಅಸಾಧ್ಯ ಎಂದು ಪರಿಗಣಿಸಿದ್ದರೋ ಯಾವ ಜನ ಲಾಗಿನ್ ಅನ್ನು ಹುಚ್ಚ ಎಂದು ಕರೆದಿದ್ದರೂ ಆ ಕೆಲಸ ಇವಾಗ ಸತ್ಯವಾಗಿತ್ತು.

ಲಾಗಿನ್ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಕೇಳಿ ಬಂದವು.ಆ ಜನರಿಗೆ ಆತನೇ ಗಾಡ್ ಫದರ್, ಹೀರೊ ಕೂಡ ಆಗಿದ್ದವು.ಲಾಗಿನ್ ಲೆಕ್ಕಚಾರ ಸರಿಯಾಗಿ ಇದ್ದವು ಅವನು ಕೊರೆದ ಕಾಲುವೆಯಿಂದ ಊರಿನ ಕೆರೆಗೆ ನೀರು ಬಂದಿತು.ನೀರಿನ ಕೊರತೆ ನಿಗಿದ ಮೇಲೆ ಲಾಗಿನ್ ಊರು ಬದಲಾಯಿತು.ಅಲ್ಲಿಯವರೆಗೂ ಯಾರಿಗೂ ಬೇಡದೆ ಇರುವ ಊರು ಇವಾಗ ಅಭಿವೃದ್ಧಿ ಕಡೆ ಹೆಜ್ಜೆ ಹಾಕಿತು.ಊರಿನಲ್ಲಿ ಕೃಷಿ ಹಾಗೂ ಕೈಗಾರಿಕ ಕೆಲಸ ಕಡೆ ಸಾಗಿದವು.ಇಷ್ಟೇಲ್ಲ ಸಾಧನೆ ಮಾಡಿದ ಲಾಗಿನ್ ಗೆ ಹತ್ತಿರದ ಉದ್ಯಮಿ ಲಾಗಿನ್ ಗೆ ಟ್ರ್ಯಾಕ್ಟರ್ ಅನ್ನು ಕಾಣಿಕೆ ಆಗಿ ಕೊಟ್ಟರು.ಆದರೆ ಲಾಗಿನ್ ಗೆ ಶ್ರೀಮಂತರಾಗಬೇಕು ಎನ್ನುವ ಆಸೆ ಇರಲಿಲ್ಲ. ಆತನಿಗೆ ಬೇಕಾದದ್ದು ಊರಿನ ಜನ ಶ್ರೇಯ ಅಭಿಲಾಷೆ ಹಾಗೂ ನೀರು ಇಲ್ಲದೆ ಒಣಗಿ ಹೋಗುತ್ತಿದ್ದ ಊರನ್ನು ಉಳಿಸಿಕೊಳ್ಳಬೇಕೆಂಬ ಮಹತ್ವಕಾಂಕ್ಷೆ.ಇಂತಹ ಸ್ವಚ್ಛ ಹೃದಯ ಪ್ರಾಮಾಣಿಕ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ.

LEAVE A REPLY

Please enter your comment!
Please enter your name here