Seetharama: ಸೀತಾರಾಮ ಧಾರಾವಾಹಿಯ ಪ್ರಿಯಾ ನಿಜಕ್ಕೂ ಯಾರು ಗೊತ್ತಾ?

0 1

Seetharama: ಜೀಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಧಾರವಾಹಿ ಸೀತಾರಾಮ್ ಅಗ್ನಿಸಾಕ್ಷಿ ಧಾರವಾಹಿ ಇಂದ ಕರ್ನಾಟಕದ ಮನೆಮಾತಾಗಿದ್ದ ನಟಿ ವೈಷ್ಣವಿ ಹಾಗು ಮಂಗಳಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟ ಗಗನ್ ಚಿನ್ನಪ್ಪ ಇವರಿಬ್ಬರು ಜೊತೆಯಾಗಿ ನಟಿಸುತ್ತಿರುವ ಧಾರವಾಹಿ ಇದು. ಕಥೆ ಮತ್ತು ಜನಪ್ರಿಯತೆ ಎರಡು ವಿಷಯದಲ್ಲೂ ಸೀತಾರಾಮ ಧಾರವಾಹಿ ಮುಂದಿದೆ. ಪ್ರತಿ ವಾರ ಒಳ್ಳೆಯ ಟಿಆರ್ಪಿ ರೇಟಿಂಗ್ಸ್ ಪಡೆದುಕೊಳ್ಳುತ್ತದೆ.

ಈ ಧಾರಾವಾಹಿಯ ಎಲ್ಲಾ ಪಾತ್ರಗಳು ಕೂಡ ಜನರಿಗೆ ಇಷ್ಟವಾಗಿದೆ. ಇದರಲ್ಲಿ ನಾಯಕಿ ವೈಷ್ಣವಿ ಅವರ ಫ್ರೆಂಡ್ ಪಾತ್ರ ಪ್ರಿಯಾ, ಯಾವಾಗಲೂ ಹೀರೋಯಿನ್ ಗೆ ಸಪೋರ್ಟ್ ಮಾಡುತ್ತಾ ಕ್ಯೂಟ್ ಆಗಿರುವ ಪಾತ್ರ. ಹಾಗೆಯೇ ಕೋಟ್ಯಾಧಿಪತಿ ಹುಡುಗನನ್ನು ಮದುವೆಯಾಗಬೇಕು ಎಂದು ಆಸೆ ಪಡುವ ಪಾತ್ರ ಇದು. ಬಾಸ್ ಎಂದು ಆಫೀಸ್ ಗೆ ಬಂದಿರುವ ಅಶೋಕ್ ಮೇಲೆ ಪ್ರಿಯಾಗೆ ಪ್ರೀತಿಯಾಗಿದೆ.

ಈ ಪಾತ್ರದ ಮೂಲಕ ಜನರಿಗೆ ಇಷ್ಟ ಆಗಿರುವ ಈ ನಟಿಯ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸುತ್ತೇವೆ. ಈ ನಟಿಯ ಹೆಸರು ಮೇಘನಾ ಶಂಕರಪ್ಪ. ಇವರು ಅಪ್ಪಟ ಭರತನಾಟ್ಯ ಡ್ಯಾನ್ಸರ್, ಈ ಕಾರಣಕ್ಕೆ ಇವರಿಗೆ ನಟನೆಯಲ್ಲಿ ಆಸಕ್ತಿ ಜೊತೆಗೆ ಆಡಿಷನ್ ಕೊಡುವುದಕ್ಕೆ ಶುರು ಮಾಡಿದರು. ಕಿನ್ನರಿ ಧಾರವಾಹಿಯಲ್ಲಿ ನೆಗಟಿವ್ ಪಾತ್ರಸಲ್ಲಿ ಕಾಣಿಸಿಕೊಂಡಿದ್ದರು. ಕೃಷ್ಣ ತುಳಸಿ, ರತ್ನಗಿರಿ, ರಹಸ್ಯ, ಸಿಂಧೂರ ಧಾರವಾಹಿಯಲ್ಲಿ ನಟಿಸಿದ್ದರು.

ಹಾಗೆಯೇ ಹಲವು ಶೋಗಳನ್ನು ಕೂಡ ನಿರೂಪಣೆ ಮಾಡಿದ್ದಾರೆ ಮೇಘನಾ ಶಂಕರಪ್ಪ. ಇವರಿಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಟಿಸಲು ಆಫರ್ ಬಂದರು ಕೂಡ, ಅವರು ಅದನ್ನು ಒಪ್ಪಿಕೊಂಡಿಲ್ಲ. ಇದೀಗ ಸೀತಾರಾಮ ಧಾರವಾಹಿ ಮೂಲಕ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳು ಇವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.

Leave A Reply

Your email address will not be published.