Serial Actress: ಗರ್ಭಿಣಿಯಾಗಿದ್ದ ಕಿರುತೆರೆ ನಟಿ ನಿಧನ, ಶಾಕ್ ಆದ ಕಿರುತೆರೆ ಲೋಕ

Written by Pooja Siddaraj

Published on:

Serial Actress: ಕಿರುತೆರೆ ಲೋಕದಲ್ಲಿ ಒಂದರ ನಂತರ ಒಂದು ಶಾಕ್ ಗಳೇ ಎದುರಾಗುತ್ತಿದೆ. ನಿನ್ನೆಯಷ್ಟೇ ಮಲಯಾಳಂ ಕಿರುತೆರೆ ನಟಿ ರೆಂಜುಶ ಮೆನನ್ ತಿರುವನಂತಪುರಂನಲ್ಲಿರುವ ತಮ್ಮ ಮನೆಯ ಅಪಾರ್ಟ್ಮೆಂಟ್ ನಲ್ಲಿ ಇನ್ನಿಲ್ಲವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಘಟನೆ ಇಂದಲೇ ಮಲಯಾಳಂ ಚಿತ್ರರಂಗ ಶಾಕ್ ಆಗಿತ್ತು, ಆದರೆ ಈ ಘಟನೆಯನ್ನು ಅರಗಿಸಿಕೊಳ್ಳುವ ಮೊದಲೇ ಮತ್ತೊಂದು ಶಾಕ್ ಎದುರಾಗಿದೆ.

ಮಲಯಾಳಂ ಕಿರುತೆರೆಯ ಮತ್ತೊಬ್ಬ ನಟಿ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ರೀತಿ ಆಗುವಾಗ ಅವರು 8 ತಿಂಗಳ ಗರ್ಭಿಣಿ ಆಗಿದ್ದರು, ಅವರಿಗೆ ಏನು ಸಮಸ್ಯೆ ಇರಲಿಲ್ಲ ಎಂದು ಹೇಳಲಾಗಿದೆ. ಈ ನಟಿಯ ಹೆಸರು ಡಾ. ಪ್ರಿಯಾ. ನಟಿ ಎನ್ನುವುದರ ಜೊತೆಗೆ ವೈದ್ಯೆ ಕೂಡ ಆಗಿದ್ದರು ಎಂದು ಮಾಹಿತಿ ಸಿಕ್ಕಿದೆ. ಇವರಿಗೆ ಯಾವುದೇ ಸಮಸ್ಯೆ ಇರಲಿಲ್ಲ, ಗರ್ಭಿಣಿ ಆಗಿದ್ದ ಕಾರಣ ರೆಗ್ಯುಲರ್ ಚೆಕಪ್ ಗೆ ಆಸ್ಪತ್ರೆಗೆ ಹೋಗಿದ್ದಾರೆ.

ಅಲ್ಲಿ ಚೆಕಪ್ ಮಾಡಿಸುವ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ ನಟಿ ಪ್ರಿಯಾ. ಇವರ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ಪ್ರಿಯಾ ಅವರೊಡನೆ ಧಾರವಾಹಿಯಲ್ಲಿ ನಟಿಸುತ್ತಿದ್ದ ಸಹನಟ ಕಿಶೋರ್ ಅವರು ಶೇರ್ ಮಾಡಿದ್ದಾರೆ. ಚೆನ್ನಾಗಿದ್ದವರಿಗೆ ಈ ರೀತಿ ಆಯಿತು ಎಂದು ಪ್ರಿಯಾ ಅವರ ತಂದೆ ತಾಯಿ ನೊಂದುಕೊಂಡಿದ್ದಾರೆ.

ಕಿಶೋರ್ ಹಾಗೂ ಪ್ರಿಯಾ ಇಬ್ಬರು ಕರುತ್ತಮುತ್ತು ಧಾರವಾಹಿಯಲ್ಲಿ ನಟಿಸಿದ್ದರು. ಬಹಳ ನೋವಿನಲ್ಲಿ ಕಿಶೋರ್ ಅವರು ಪ್ರಿಯಾ ಅವರು ಇನ್ನಿಲ್ಲ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಪ್ರಿಯಾ ಅವರು ಬಹಳ ಒಳ್ಳೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಕಿರುತೆರೆಯಲ್ಲಿ ಇವರಿಗೆ ಒಳ್ಳೆಯ ಹೆಸರು ಇತ್ತು, ವೈದ್ಯೆ ಆಗಿದ್ದರು ಕೂಡ ನಟನೆಯಲ್ಲಿ ಹೆಚ್ಚು ಆಸಕ್ತಿ ಇವರಿಗೆ ಇತ್ತು..

ಮದುವೆಯ ನಂತರ ಡಾ.ಪ್ರಿಯಾ ಅವರು ನಟನೆ ಇಂದ ದೂರವಿದ್ದರು. ಮದುವೆ ನಡೆದ ನಂತರ ಶೀಘ್ರದಲ್ಲೇ ತಾಯಿ ಆಗುವುದಾಗಿ ಬಹಳ ಸಂತೋಷದಲ್ಲಿದ್ದ ನಟಿಗೆ ಈ ರೀತಿ ಆಗಿರುವುದು ಮಲಯಾಳಂ ಕಿರುತೆರೆ ಲೋಕಕ್ಕೆ ಇದು ಬಹಳ ನೋವಿನ ವಿಚಾರ ಆಗಿದೆ.

Leave a Comment